CHITRADURGA NEWS | 13 MAY 2026
ಚಿತ್ರದುರ್ಗ: ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಂದು ಉಚಿತ ಅರೋಗ್ಯ ತಪಾಸಣೆ, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಸುಧಾಕರ್ ನೆನೆದು ಪಪ್ಪಿ ಭಾವುಕ ಪೋಸ್ಟ್ | ಈಗಲೇ ಪೋನ್ ಮಾಡಿ ಹೇ ಪಪ್ಪಿ ಎಂದು ಕರೆದಂತನ್ನಿಸುತ್ತಿದೆ…
ಕಾರ್ಯಕ್ರಮದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಡಾ.ಎನ್.ದೀಪಿಕಾ, ಔಷಧ ವಿಭಾಗ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಗರ್ಭಕಂಠ ಕ್ಯಾನ್ಸರ್ ವ್ಯಾಪಾಕವಾಗಿ ಹರಡುತ್ತಿದ್ದು, ಅದರ ಅರಿವು ಸಹ ನಿಮಗೆ ಅವಶ್ಯಕ. ಸ್ತನ ಕ್ಯಾನ್ಸರ್ ಹೇಗೆ ಹರಡುತ್ತೆ, ಅದಕ್ಕೆ ಕಾರಣಗಳೇನು ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು ಜೊತೆಗೆ ಅದನ್ನು ಹೇಗೆ ಸ್ವಯಂ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು ಎಂಬುದರ ಬಗ್ಗೆ ತಿಳಿಸಿದರು.
ಗರ್ಭಕಂಠ ಕ್ಯಾನ್ಸರ್ ವಾಸಿಯಾಗುವ ಕಾಯಿಲೆಯಾಗಿದ್ದು, ಇದು ಕೇವಲ ಸ್ತ್ರೀಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಸಹ ಬರುತ್ತದೆ. ಈ ಮಾಹಿತಿಯನ್ನು ಕೇವಲ ಮಹಿಳೆಯರು ಪಡೆದರೆ ಸಾಲದು ಪುರುಷರಿಗೂ ಇದರ ಮಾಹಿತಿ ಬಗ್ಗೆ ಅರಿವು ಅವಶ್ಯಕ.
ಹಾಗೆಯೇ ಈ ರೋಗದ ಪ್ರಾರಂಭಿಕ ಲಕ್ಷಣಗಳು ಹಾಗೂ ಅದನ್ನು ಯಾವ ರೀತಿ ತಡೆಗಟ್ಟಬಹುದು, ಈ ರೋಗವನ್ನು ಸ್ವಯಂ ಹೇಗೆ ಪತ್ತೆ ಹಚ್ಚಬಹುದು ಎಂಬುದರ ಬಗ್ಗೆ ದೀರ್ಘವಾದ ಮಾಹಿತಿ ನೀಡಿದರು.
ಇದನ್ನೂ ಓದಿ: 93 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಅಹ್ವಾನ
ಕಾಲೇಜಿನ ಪ್ರಾoಶುಪಾಲರಾದ ಡಾ.ಎಲ್.ಈಶ್ವರಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಈ ಕಾಯಿಲೆಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳಿಗೆ ಈ ರೋಗಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯದೇ ಇರುವುದು ದುರಂತ ಎಂದರು.
ಈ ವೇಳೆ ಜಿ.ಎಸ್.ನಾಗರಾಜ್, ಐಕ್ಯೂಎಸಿ ಸಂಚಾಲಕರಾದ ಎಂ.ಎಸ್.ಪರಮೇಶ್ವರ, ರಾ.ಸೇ. ಯೋಜನಾಧಿಕಾರಗಳಾದ ಡಾ.ಸಿ.ಟಿ.ಜಯಣ್ಣ, ಕೆ.ಹೆಚ್.ಶಿವಕುಮಾರ್, ಡಾ.ಸುಧಾರಾಣಿ, ಡಾ.ಶ್ವೇತ ಬಿ.ವೈ., ಡಾ.ಕೆ.ರಮೇಶ, ಮಿಸ್ಬಾ ಖಾನುಂ, ಕೆ.ವಿಶ್ವನಾಥ್, ಡಿ.ಸುಜಾತ, ಎಂ.ಸೌಮ್ಯ, ಜಿ.ಕುಮಾರ್ ಹಾಗೂ ಬೋಧಕ, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
