ಮುಖ್ಯ ಸುದ್ದಿ
MC Raghuchandan: ನೆನಪಿನ ಹೆಜ್ಜೆಗಳು ಬೀಳ್ಕೊಡುಗೆ ಸಮಾರಂಭ | ಎಂ.ಸಿ.ರಘುಚಂದನ್ ಉದ್ಘಾಟನೆ

CHITRADURGA NEWS | 27 NOVEMBER 2024
ಚಿತ್ರದುರ್ಗ: ಶಿಕ್ಷಕರ ವೃತ್ತಿ ಕಲುಷಿತಗೊಂಡಿದೆ. ಶಿಕ್ಷಕರು ಕೂಡಾ ರಾಜಕಾರಣ ಮಾಡುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನಹರಿಸದಂತಾಗಿದ್ದಾರೆ. ಇದರಿಂದ ದೇಶದ ಭವಿಷ್ಯ ಹಾಳಾಗುತ್ತಿದೆ ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್(MC Raghuchandan) ಹೇಳಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ನೆನಪಿನ ಹೆಜ್ಜೆಗಳು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಪಕಾರ ಸ್ಮರಣೆ ಇಂದಿನ ಪೀಳಿಗೆಯಲ್ಲಿ ಕಡಿಮೆಯಾಗಿದೆ. ಗುರಿ, ಆಸೆ, ಆಕಾಂಕ್ಷೆ, ದುರಾಸೆ, ಚಟ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಸೃಷ್ಠಿಯನ್ನು ನಂಬಬೇಕು. ಸೃಷ್ಟಿಯ ವಿರುದ್ದ ಯಾರು ಹೋಗಬಾರದು. ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಉಪಕಾರವನ್ನು ಮಾಡಿದವರನ್ನು ಮರೆತರೆ ಅಂತಹ ಮನುಷ್ಯ ಏಳಿಗೆಯಾಗುವುದಿಲ್ಲ ಎಂದು ತಿಳಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಬೆಳೆದಿರುವುದು ಬಿ.ಇಡಿ ಕಾಲೇಜಿನಿಂದ ಜೀವನದಲ್ಲಿ ಯಶಸ್ವಿಯಾದವರಿಗೆ ಬದುಕುವ ಹಕ್ಕಿದೆ. ಪ್ರತಿದಿನ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕೆಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಎಂ.ಸಿ.ರಘುಚಂದನ್ ಕರೆ ನೀಡಿದರು.
ಕ್ಲಿಕ್ ಮಾಡಿ ಓದಿ: ಭೀಮಸಮುದ್ರ ವ್ಯಾಪ್ತಿಯ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ ಮಾತನಾಡಿ, ಶಿಕ್ಷಣವೆಂದರೆ ಸ್ಪರ್ಧೆ. ಪ್ರತಿಯೊಂದು ರಂಗದಲ್ಲಿಯೂ ಪೈಪೋಟಿ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ, ನಿಖರತೆಯಿರಬೇಕು.
ತರಬೇತಿಯಿಂದ ಪರಿಪೂರ್ಣ ವ್ಯಕ್ತಿತ್ವ ನಿಮ್ಮದಾಗುತ್ತದೆ. ಬಿ.ಇ.ಡಿ. ಶಿಕ್ಷಣದಲ್ಲಿ ವೈವಿದ್ಯಮಯ ಚಟುವಟಿಕೆಯಿರುತ್ತದೆ. ಪ್ರಶಿಕ್ಷಣಾರ್ಥಿಗಳಾಗಿರುವ ಸಂದರ್ಭದಲ್ಲಿ ಕಠಿಣವಿರುತ್ತದೆ. ತಾಳ್ಮೆಯಿಂದ ಇರಬೇಕು ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಸಿ.ಅನಂತರಾಮು, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಪಿ.ನಾಗಭೂಷಣ್ ಶೆಟ್ಟಿ, ಆರ್.ಎಸ್.ರಾಜು, ಡಾ.ಜಿ.ಬಿ.ರಾಜಪ್ಪ, ವಿ.ಪ್ರಕಾಶ್, ಡಾ.ಬಿ.ಚಂದ್ರಪ್ಪ ವೇದಿಕೆಯಲ್ಲಿದ್ದರು.
