CHITRADURGA NEWS | 02 JUNE 2025
ಚಿತ್ರದುರ್ಗ: ಶುಶ್ರೂಷಕರು ಎಂದಿಗೂ ನಗುತ್ತಿರಬೇಕು, ಆ ನಗು ರೋಗಿಗಳ ಚೈತನ್ಯವನ್ನು ತುಂಬುತ್ತದೆ ಎಂದು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಆಶಿಸಿದರು.
Also Read: ಭಾಗ್ಯಲಕ್ಷ್ಮಿ ಯೋಜನೆ | 18 ವರ್ಷ ತುಂಬಿದ ಫಲಾನುಭವಿಗಳ ಪಟ್ಟಿ ಪ್ರಕಟ
ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಫ್ಲಾರೆನ್ಸ್ ನೈಟಿಂಗೇಲ್‌ರ 205ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ತ್ಯಾಗ ಮನೋಭಾವದೊಂದಿಗೆ ರೋಗಿಗಳ ಸೇವೆ ಮಾಡುವ ಮೂಲಕ ಶುಶ್ರೂಷಕಿಯರು ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ನಗುತ್ತಾ ಕಷ್ಟದಲ್ಲಿರುವವರ ಸೇವೆ ಮಾಡುವ ಮೂಲಕ ಅವರ ನೋವು ಮರೆಸುವ ಗುಣ ಬೆಳೆಸಿಕೊಂಡರೆ ಈ ಉದ್ಯೋಗಕ್ಕೆ ಮಹತ್ವ ಬರುತ್ತದೆ ಎಂದರು.
ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ರಾಜೇಶ್ ಮಾತನಾಡಿ, ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಶುಶ್ರೂಷಕರ ಸೇವೆ ಮುಖ್ಯ. ನಿಮ್ಮ ಸೇವೆ ಪ್ರಾಣ ಉಳಿಸುವಂತಹದ್ದು, ಇಂತಹ ಸೇವೆಯನ್ನು ಯಾರು ಕಡೆಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಶುಶ್ರೂಷಕರ ಸೇವೆಯು ಅಜರಾಮರ ಎಂದರು.
Also Read: ಹಿರಿಯ ವಕೀಲರಾದ ಡಾ.ಎಂ.ಸಿ.ನರಹರಿ ಇನ್ನಿಲ್ಲ
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಪ್ರಶಾಂತ್ ಮಾತನಾಡಿ, ನಮ್ಮ ಬಸವೇಶ್ವರ ಆಸ್ಪತ್ರೆಯ ಶುಶ್ರೂಷಕರು ಕೋವಿಡ್ ಸಂದರ್ಭದಲ್ಲಿಯೂ ಸಹ ಹಗಲು ರಾತ್ರಿಯೆನ್ನದೆ ಶ್ರಮಿಸಿ ಸವ್ಮಚಿತ್ತದಿಂದ ಧೃತಿಗೆಡದೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಇದರ ಪರಿಣಾಮ ಸಾವಿರಾರು ರೋಗಿಗಳ ಜೀವ ಉಳಿಸಿದೆ. ಪ್ರತಿಯೊಂದು ಆಸ್ಪತ್ರೆಯ ಅವಿಭಾಜ್ಯ ಅಂಗವೇ ಶುಶ್ರೂಷಕರು ಎಂದು ತಿಳಿಸಿದರು.
ಶುಶ್ರೂಷಕ ಅಧೀಕ್ಷಕ ಹಾಲಸ್ವಾಮಿ ಕೆ.ಎಮ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪಾಲಾಕ್ಷ, ಬಸವೇಶ್ವರ ನರ್ಸಿಂಗ್ ಕಾಲೇಜು ಪ್ರಾಚಾರ್ಯರಾದ ಡಾ.ಸವಿತಾ, ಉಪ ಅಧೀಕ್ಷಕ ಡಾ.ನಾಗೇಂದ್ರ ಗೌಡ ಮಾತನಾಡಿದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರಾದ ಮಲ್ಲನ ಗೌಡ, ಮಾರಕ್ಕ, ವಿಜಯಲಕ್ಷ್ಮಿ, ಮಾರ್ಥಾ, ರಾಜಿ ಸಿಸ್ಟರ್ ಹಾಗೂ ಗ್ರೂಪ್ ಡಿ ನೌಕರರಾದ ಕುಮಾರ, ರಮೇಶ್, ಪದ್ಮಾವತಿ, ಗಂಗಮ್ಮ, ಮೈಲಮ್ಮ, ರಾಜೇಶ್ವರಿ, ತಿಪ್ಪಮ್ಮ, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
Also Read: ವಸತಿ ಶಾಲೆ ಪ್ರವೇಶ | ಜೂನ್ 3,4 ರಂದು ಕೌನ್ಸಲಿಂಗ್
ಕುಮಾರಿ ಯಶಸ್ವಿನಿ ಪ್ರಾರ್ಥನಾ ನೃತ್ಯ ಮಾಡಿದರು. ಶಾರದಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಾರದಮ್ಮ ಸ್ವಾಗತಿಸಿದರು. ಲಕ್ಷ್ಮಿ ಆರ್. ವಂದಿಸಿದರು. ಮಂಜುಶ್ರೀ ಎ. ಮತ್ತು ಪ್ರಿಯಾಂಕಾ ಬಿ. ನಿರೂಪಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
