CHITRADURGA NEWS | 14 MARCH 2026
ಚಿತ್ರದುರ್ಗ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ದಂತ ವೈದ್ಯಕೀಯ ಸ್ನಾತಕೋತ್ತರ (MDS) ಪದವಿ ಪರೀಕ್ಷೆಯಲ್ಲಿ ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (C.M.C.R.I) ಹಿರಿಯ ನಿವಾಸಿ ವೈದ್ಯೆ ಡಾ. ಸಾಧನಾ ಎಸ್. ಎಂ. ಅವರು ರಾಜ್ಯಕ್ಕೆ 5ನೇ ರ್ಯಾಂಕ್ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಪ್ಪಿಸಲು HPV ಲಸಿಕೆ ಸಹಕಾರಿ
ನಗರದ ಮೈರಾಡ್ ಸಂಸ್ಥೆಯ ಉದ್ಯೋಗಿ ವೇದಮೂರ್ತಿ ಎಂ.ಎಸ್. ಮತ್ತು ಶ್ರೀಮತಿ ಮಂಗಳಾ ಎಂ. ಅವರ ದ್ವಿತೀಯ ಪುತ್ರಿಯಾದ ಡಾ. ಸಾಧನಾ ಅವರು ಚಿತ್ರದುರ್ಗದ ಪ್ರಸಿದ್ಧ ಎಸ್‌ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಡಿಎಸ್ (MDS) ವ್ಯಾಸಂಗ ಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ (BDS) ಪದವಿ ಪೂರೈಸಿದ್ದು, ಅಲ್ಲಿಯೂ ಸಹ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದರು.
ಇದನ್ನೂ ಓದಿ: ಆದರ್ಶ ವಿದ್ಯಾಲಯ | ಮಾ.22 ರಂದು ಪ್ರವೇಶ ಪರೀಕ್ಷೆ | ಅಗತ್ಯ ಕ್ರಮ ಕೈಗೊಳ್ಳಿ
ಈ ಅತ್ಯುತ್ತಮ ಸಾಧನೆ ತೋರಿದ ಡಾ.ಸಾಧನ ಅವರಿಗೆ ಸಿ.ಎಂ.ಸಿ.ಆರ್.ಐ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಬಿ.ವೈ. ಯುವರಾಜ್, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಚಂದ್ರಿಕಾ ಎನ್., ಡಾ.ಜಿ.ಎಚ್.ಮೇಘಾ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಡಾ.ಸಾಧನಾ ಅವರ ಈ ಸಾಧನೆಯು ಸಂಸ್ಥೆಗೆ ಸಂದ ಗೌರವವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
