Connect with us

    Sirigere: ಕಾರು ಅಪಘಾತದಲ್ಲಿ ವೈದ್ಯ ಸಾವು | ಸಿರಿಗೆರೆ ಆರೋಗ್ಯ ಕೇಂದ್ರದ ವೈದ್ಯ ಡಾ.ತಿಮ್ಮೇಗೌಡ ಇನ್ನಿಲ್ಲ

    Dr.Thimmegowda

    ಮುಖ್ಯ ಸುದ್ದಿ

    Sirigere: ಕಾರು ಅಪಘಾತದಲ್ಲಿ ವೈದ್ಯ ಸಾವು | ಸಿರಿಗೆರೆ ಆರೋಗ್ಯ ಕೇಂದ್ರದ ವೈದ್ಯ ಡಾ.ತಿಮ್ಮೇಗೌಡ ಇನ್ನಿಲ್ಲ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 NOVEMBER 2024

    ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಸಿರಿಗೆರೆ(Sirigere) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ತಿಮ್ಮೇಗೌಡ(34) ಶನಿವಾರ ರಾತ್ರಿ ಅಪಘಾತದಲ್ಲಿ ನಿಧನರಾಗಿದ್ದಾರೆ.

    ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದಾಗ, ದಾವಣಗೆರೆ ಸಮೀಪದಲ್ಲಿ ಲಾರಿ ಹಾಗೂ ಡಾ.ತಿಮ್ಮೇಗೌಡ ಅವರ ಕಾರಿನ ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಹೊಸ ಬಂಡಿಗಳ ಆಗಮನ | ಹಬ್ಬಿದಾ ಮಲೆ ಮಧ್ಯದೊಳಗೆ

    ದಾವಣಗೆರೆಯಲ್ಲಿ ಸಮ್ಮೇಳನವೊಂದನ್ನು ಮುಗಿಸಿ ಹಿಂತಿರುಗುವಾಗ ಶನಿವಾರ ತಡರಾತ್ರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಭೀಕರ ಅಪಘಾತ ನಡೆದಿದೆ.

    ಸಿರಿಗೆರೆ ಭಾಗದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಡಾ.ತಿಮ್ಮೇಗೌಡ ನಿಧನಕ್ಕೆ ಆರೋಗ್ಯ ಇಲಾಖೆ ಸಂತಾಪ ವ್ಯಕ್ತಪಡಿಸಿದೆ.

    ಇದನ್ನೂ ಓದಿ:  ಮೀಸಲಾತಿ ಒಪ್ಪುವವರು ಒಳಮೀಸಲಾತಿ ವಿರೋಧಿಸಬಾರದು | ಜೆ.ಯಾದವರೆಡ್ಡಿ

    ತಾಯಿ, ತಂದೆ, ಪತ್ನಿ ಹಾಗೂ ಪುತ್ರಿಯನ್ನು ಅಗಲಿರುವ ತಿಮ್ಮೇಗೌಡ ಅವರ ಅಂತ್ಯಕ್ರಿಯೆ ನ.25 ಸೋಮವಾರ ಚಳ್ಳಕೆರೆ ತಾಲೂಕಿನ ಸ್ವಗ್ರಾಮ ಗೋಪನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top