
CHITRADURGA NEWS | 19 DECEMBER 2025
ಚಿತ್ರದುರ್ಗ: ಜಿಲ್ಲಾ ಜಂಗಮ ಸಮಾಜದ ವತಿಯಿಂದ ನಗರದ ಜೆಸಿಆರ್ ಬಡಾವಣೆಯಲ್ಲಿನ ಜಿಲ್ಲಾ ಜಂಗಮ ಸಮಾಜದ ಕಚೇರಿಯಲ್ಲಿ 2026ನೇ ಸಾಲಿನ ದಿನ ದರ್ಶಿಕೆಯನ್ನು ಸಮಾಜದ ಬಂಧುಗಳು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 19 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
ಈ ವೇಳೆ ಜಿಲ್ಲಾ ಜಂಗಮ ಸಮಾಜದ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ ಮಾತನಾಡಿ, ಕಳೆದ 5-6 ವರ್ಷಗಳಿಂದ ನಿರಂತರವಾಗಿ ನಮ್ಮ ಸಮಾಜದ ವತಿಯಿಂದ ದಿನ ದರ್ಶಿಕೆಯನ್ನು ಬಿಡುಗಡೆ ಮಾಡುವುದರ ಮೂಲಕ ನಮ್ಮ ಸಮಾಜದವರಿಗೆ ನೀಡಲಾಗುತ್ತಿದೆ. ಇದರ ನಿರ್ಮಾಣದ ಹಿಂದೆ ಹಲವಾರು ಜನರ ಶ್ರಮ ಇದೆ. ಅಲ್ಲದೆ 12 ರಿಂದ 13 ಜನ ಇದನ್ನು ಹೊರ ತರಲು ಸಹಾಯವನ್ನು ಮಾಡಿದ್ದಾರೆ. ಇದರಲ್ಲಿ ಈ ಭಾಗದ ವಿಶೇಷವಾದ ದಿನಗಳನ್ನು ಗುರುತಿಸಿ ಅದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ನಮ್ಮ ಸಮುದಾಯದಲ್ಲಿ ಹೆಚ್ಚಿನ ರೀತಿಯಲ್ಲಿ ಬಡವರಿದ್ದು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಉಚಿತ ಪ್ರಸಾದ ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡಲು ಸಮಾಜ ಮುಂದಾಗಿದೆ. ಇದಕ್ಕೆ ಬೇಕಾದ ಕಾರ್ಯವನ್ನು ಸಮಾಜ ಕೈಗೊಂಡಿದೆ ಎಂದರು.
ಜಿಲ್ಲಾ ಜಂಗಮ ಸಮಾಜದ ಕಾರ್ಯಾಧ್ಯಕ್ಷರಾದ ಎಂ.ಟಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ನಮ್ಮ ಸಮಾಜದ ವತಿಯಿಂದ ನಮ್ಮವರಿಗೆ ಅನುಕೂಲಕ್ಕಾಗಿ ಬ್ಯಾಂಕ್‍ನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ಷೇರುಗಳನ್ನು ಪಡೆಯುವುದರ ಮೂಲಕ ಬ್ಯಾಂಕಿನ ಸದಸ್ಯರಾಗಿ ಅಗತ್ಯ ಬಿದ್ದಾಗ ಸಾಲ ಪಡೆದು ಅರ್ಥಿಕವಾಗಿ ಪ್ರಗತಿಯನ್ನು ಸಾಧಿಸ. ಸಾಲವನ್ನು ಸಕಾಲಕ್ಕೆ ಪಾವತಿ ಮಾಡುವುದರ ಮೂಲಕ ಬ್ಯಾಂಕಿನ ಅರ್ಥಿಕ ಪ್ರಗತಿಗೆ ಕಾರಣಿಭೂತರಾಗಿ ಎಂದರು.
ಇದನ್ನೂ ಓದಿ: ಹೊಳಲ್ಕೆರೆ | ಶಿಕ್ಷಕರು ಮತ್ತು ಆಯಾ ಹುದ್ದೆಗೆ ಅರ್ಜಿ ಅಹ್ವಾನ
ಮಕ್ಕಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲು ಹಲವಾರು ಕಡೆಯಲ್ಲಿ ನಿವೇಶನ ನೋಡಲಾಗಿತ್ತು. ಆದರೆ ಕಾರಣಗಳಿಂದ ಅವುಗಳನ್ನು ಕೈಬಿಡಲಾಯಿತು. ಮುಂದಿನ ದಿನದಲ್ಲಿ ಬೇರೆ ಕಡೆಗಳಲ್ಲಿ ಖಾಸಗಿಯಾಗಿ ನಿವೇಶನ ಖರೀದಿ ಮಾಡುವುದರ ಮೂಲಕ ಅತಿ ಶೀಘ್ರವಾಗಿ ನಮ್ಮ ಮಕ್ಕಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು ಎಂದರು.
ಚೈತನ್ಯ, ಪ್ರಭುದೇವ್, ಗಣೇಶಯ್ಯ, ಆನಂದ್, ಶಶಿಧರ್ ಬಾಬು, ಕುಮಾರಸ್ವಾಮಿ, ಸೇರಿದಂತೆ ಇತರರು ಸಭೆಯಲ್ಲಿ ಸಲಹೆ, ಸೂಚನೆ ನೀಡಿದರು.
ಜಿಲ್ಲಾ ಜಂಗಮ ಸಮಾಜದ ಗೌರವಾಧ್ಯಕ್ಷರಾದ ನಿಜಲಿಂಗಯ್ಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಂಜಾಚಿ ಶಿವನಗೌಡ್ರು, ಕಾನೂನು ಸಲಹೆಗಾರರಾದ ಕೆ.ಎನ್.ವಿಶ್ವನಾಥಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಎಂ.ಶಶಿಧರ್ ಬಾಬು, ಜಿ.ಎಂ.ಕರಿಬಸಯ್ಯ, ಆರ್.ಚಿದಾನಂದಸ್ವಾಮಿ, ಹೆಚ್.ಎಸ್. ವಿಜಯಕುಮಾರ್, ಕೆ.ಬಿ.ಸುರೇಶ್, ನಿರ್ದೇಶಕರುಗಳಾದ ಎಸ್.ಎಂ.ರುದ್ರಯ್ಯ, ಡಾ.ಜಿ.ವೀರಭದ್ರಸ್ವಾಮಿ, ಸಿ.ಗುರುಮೂರ್ತಿ, ಪಿ.ಎಂ. ರುದ್ರಯ್ಯ, ಎಂ.ವಿ.ಚನ್ನಯ್ಯ, ಹೆಚ್.ಎಸ್.ಕುಮಾರಸ್ವಾಮಿ, ಕೆ.ಎಂ. ಮಲ್ಲಿಕಾರ್ಜನಯ್ಯ, ಜಿ.ಎಂ.ದೇವರಾಜಯ್ಯ, ವಿ.ಶಿವರಾಜ್,ಸಿ.ಎಂ, ಸ್ವಾಮಿ, ಜಿ.ಎಂ.ಅರುಣ್ ಕುಮಾರ್, ರುದ್ರೇಶ್ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
