
CHITRADURGA NEWS | 02 AUGUST 2024
ಚಿತ್ರದುರ್ಗ: ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ ಮುನ್ನ ಚಿತ್ರದುರ್ಗದ ಮುರುಘಾ ಮಠಕ್ಕೆ ಶುಕ್ರವಾರ ಆಗಮಿಸಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನೋಡಲು ಅಭಿಮಾನಿಗಳೇ ದಂಡು ಮಠದಲ್ಲಿ ಜಮಾಯಿಸಿತ್ತು. ಈ ವೇಳೆ ತೀವ್ರ ಭಾವುಕಗೊಂಡ ಅಭಿಮಾನಿಯನ್ನು ಖುದ್ದು ಧ್ರುವ ಸರ್ಜಾ ಸಮಾಧಾನ ಮಾಡಿದರು.

ಧ್ರುವ ಸರ್ಜಾ ಅವರನ್ನು ನೋಡಲು ಮಠಕ್ಕೆ ಆಗಮಿಸಿದ್ದ ನಗರದ ದೊಡ್ಡಪೇಟೆ ನಿವಾಸಿ ವಿದ್ಯಾ ನಟನನ್ನು ನೋಡುತ್ತಿದ್ದಂತೆ ಭಾವುಕಗೊಂಡು ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಸಮಾಧಾನ ಮಾಡಿದ ಧ್ರುವ ಸರ್ಜಾ, ಕಾಲಿಗೆ ಬೀಳ ಬೇಡಿ ಎಂದು ತಡೆದರು. ಬಳಿಕ ಮಾತನಾಡಿ ಆಕೆಯ ಮೊಬೈಲ್‌ನಿಂದಲೇ ಸೆಲ್ಫಿ ತೆಗೆದುಕೊಟ್ಟರು.
ಇದನ್ನೂ ಓದಿ:ಕರ್ತೃ ಗದ್ದುಗೆಗೆ ಆ್ಯಕ್ಷನ್ ಪ್ರಿನ್ಸ್ ನಮನ | ಮುರುಘಾ ಮಠದಲ್ಲಿ ಅಭಿಮಾನಿಗಳ ದಂಡು
‘ಬಾಲ್ಯದಿಂದಲೂ ಧ್ರುವ ಸರ್ಜಾ ಅಂದರೆ ಬಹಳ ಇಷ್ಟ. ಅವರ ಎಲ್ಲ ಸಿನಿಮಾ ನೋಡಿದ್ದೇನೆ. ಡೈಲಾಗ್ ಅವರಿಗಿಂತ ಮುಂಚೆ ಹೇಳುತ್ತೇನೆ. ನಮ್ಮಮ್ಮ ಅವರನ್ನು ನಿಮ್ಮ ಮಾವ ಎನ್ನುತ್ತಾರೆ. ನಾನು ಮಾವ ಎಂದೇ ಕರೆಯುತ್ತೇನೆ’ ಎಂದು ವಿದ್ಯಾ ಭಾವುಕರಾದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
