
CHITRADURGA NEWS | 09 SEPTEMBER 2025
ಚಿತ್ರದುರ್ಗ: ಹೊಸದುರ್ಗದ ಹಿಂದೂ ಮಹಾಸಾಗರ ಗಣಪತಿ ಸಂಘಟಕರ ಮೇಲೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಆದೇಶ
ಗಣೇಶ ಮೆರವಣಿಗೆ ಸಮಯದಲ್ಲಿ ಕಲರ್ ಬ್ಲಾಸ್ಟಿಂಗ್ ಮತ್ತು ಪಟಾಕಿ ಸಿಡಿಸಿದ್ದ ಹಿನ್ನೆಲೆಯಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಸಂಘಟಕರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸದುರ್ಗ ಪಟ್ಟಣದಲ್ಲಿ ದಿನಾಂಕ.08.09.2025 ರಂದು ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಮೆರವಣಿಗೆ ವೇಳೆಯಲ್ಲಿ ಯಾವುದೇ ಕಲರ್ ಬ್ಲಾಸ್ಟಿಂಗ್ ಮಾಡದಂತೆ ಹಾಗೂ ಪಟಾಕಿಗಳನ್ನು ಸಿಡಿಸದಂತೆ ಸಂಬಂದಪಟ್ಟ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರು ಹಾಗೂ ಸಂಘಟಕರಿಗೆ ಮಾಹಿತಿ ತಿಳಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶ ಸಂಖ್ಯೆ 2.2.2.2(3)/808641/205-26 2.31.08.2025 ರಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ 27.08.2025 ರಿಂದ ದಿನಾಂಕ.15.09.2025 ರವರೆಗೆ ಗಣೇಶ ಮತ್ತು ಈದ್ . ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದನ್ನು ಸಿಡಿಸುವುದನ್ನು ನಿಷೇಧಿಸಿ ಆದೇಶ ಮಾಡಿರುವುದನ್ನು ತಿಳಿಸಿ ನೊಟೀಸ್ ಜಾರಿ ಮಾಡಲಾಗಿತ್ತು.
ಆದರೂ ಸೆ.08 ರಂದು ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಮೆರವಣಿಗೆ ವೇಳೆ ಮದ್ಯಾಹ್ನ 3.30ರ ವೇಳೆ ಹೊಸದುರ್ಗ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಕಲರ್ ಬ್ಲಾಸ್ಟಿಂಗ್ ಮಾಡಿದ್ದು ಹಾಗೂ ಸಂಜೆ 8.00 ಗಂಟೆ ಸಮಯದಲ್ಲಿ ಹೊಸದುರ್ಗ ಪಟ್ಟಣದ ಹಿರಿಯೂರು ಸರ್ಕಲ್ ಸಮೀಪದಲ್ಲಿ ಪಟಾಕಿ/ಸಿಡಿಮದ್ದನ್ನು ಸಿಡಿಸಿರುತ್ತಾರೆ.
ಇದನ್ನೂ ಓದಿ: ಚಳ್ಳಕೆರೆ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ | ಶಾಸಕ ಟಿ.ರಘುಮೂರ್ತಿ
ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದನ್ನು ಸಿಡಿಸಿದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರಾದ ಪ್ರದೀಪ ಹಾಗೂ ಮೆರವಣಿಗೆ ಮುಂದಾಳತ್ವ ವಹಿಸಿದ ಶಿವರಾಜ್ ಕುಮಾರ್ @ ಶಿವು ಮಠ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆ ಮೊ.ನಂ.416/2025 ಕಲಂ.292 ಬಿ.ಎನ್.ಎಸ್ ಹಾಗೂ ಕಲಂ.108, 109 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿರುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
