
CHITRADURGA NEWS | 19 JULY 2024
ಚಿತ್ರದುರ್ಗ: ಬಸ್‌ನಲ್ಲಿ ಟಿಕೆಟ್ ಕೊಡದೆ ಕಳ್ಳಾಟವಾಡಿ ಪ್ರಯಾಣಿಸುವವರನ್ನು ನೋಡಿದ್ದೇವೆ. ಆದರೆ ಬಸ್ ಅನ್ನೇ ಕಳುವು ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜುಲೈ 19 ಬೆಳಗಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಬಸ್‌ವೊಂದನ್ನ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ನಾಯಕನಹಟ್ಟಿ ಮೂಲದ ಎಸ್‌ಆರ್‌ಇ ಬಸ್ ಮಾಲೀಕ ಸಯ್ಯದ್ ಅನ್ವರ್ ಬಾಷ ಅವರಿಗೆ ಸೇರಿದ ಎಸ್‌ಆರ್ ಎಕ್ಸ್‌ಪ್ರೆಸ್ ಬಸ್ ಕಳುವು ಮಾಡಿದ್ದಾರೆ.
ಚಿತ್ರದುರ್ಗ- ಚಳ್ಳಕೆರೆ- ಜಗಳೂರು ಮಾರ್ಗದಲ್ಲಿ ಬಸ್ ಓಡಾಟ ನಡೆಸುತ್ತಿತ್ತು. ರಾತ್ರಿ ವೇಳೆ ಚಿತ್ರದುರ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಇರುತ್ತಿತ್ತು. ಇದನ್ನೇ ಹೊಂಚು ಹಾಕಿದ್ದ ಖತರ್ನಾಕ್ ಕಳ್ಳರು, ಬಸ್ಸನ್ನೇ ಕದ್ದು ಎಸ್ಕೇಪ್ ಆಗಿದ್ದಾರೆ. ಈ ಬಸ್ ಅನ್ನು ದಾವಣಗೆರೆ ಮಾರ್ಗವಾಗಿ, ಹುಬ್ಬಳ್ಳಿ ಕಡೆ ತೆಗದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Gold coin case: ಚಿನ್ನದ ನಾಣ್ಯ ವಂಚನೆ ಪ್ರಕರಣ | ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದ ಹಣ ವಶ
ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದು, ಕಳ್ಳರ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
