CHITRADURGA NEWS | 08 AUGUST 2026
ಚಿತ್ರದುರ್ಗ: ಸ್ತನ್ಯಪಾನ ಪ್ರಾರಂಭಿಸಿ ಶಿಶುಮರಣ ತಪ್ಪಿಸಿ, ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಪ್ರಾರಂಭಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ. ಸುನಿಲ್ ಕುಮಾರ್ ಹೇಳಿದರು.
ಇದನ್ನೂ ಓದಿ: ಎಸ್‌ಜೆಎಂ ಫಾರ್ಮಸಿ ಕಾಲೇಜಿನ ಫಾರ್ಮಾ ದೀಕ್ಷಾಂತ್–2026 | 146 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ನಗರದ ಬುದ್ದನಗರ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿಹೆಚ್‍ಓ ಕಚೇರಿ ವತಿಯಿಂದ ಆಯೋಜಿಸಿದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಪ್ಪು ವದಂತಿಗಳಿಗೆ ಕಿವಿಗೊಡದೆ ಜನಿಸಿದ ಮಗುವಿಗೆ ಬೇರೆ ಏನನ್ನು ಕೊಡದೆ, ಕೇವಲ ತಾಯಿಯ ಎದೆ ಹಾಲು ಮಾತ್ರ ಉಣಿಸಿರಿ ಎಂದು ಗರ್ಭಿಣಿಯರು ಬಾಣಂತಿಯರು ಮತ್ತು ತಾಯಂದಿರಿಗೆ ಮಾರ್ಗದರ್ಶನ ನೀಡಿದರು ತಾಯಿಯ ಎದೆ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಯಾವುದು ಇಲ್ಲ.
ಸ್ತನ್ಯಪಾನ ತಾಯಿಯ ಮಮತೆಯ ಪ್ರತೀಕ, ಮಗುವಿಗೆ ತಾಯಿ ಎದೆ ಹಾಲು ಉಣಿಸುವುದು ತಾಯಿಯ ಜವಾಬ್ದಾರಿ. ಆರು ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಿರಿ ಜೀವನಪಯರ್ಂತ ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿರಿ ಎಂದರು.
ಇದನ್ನೂ ಓದಿ:
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಡಿ.ಎಂ ಅಭಿನವ ಮಾತನಾಡಿ, ಸ್ತನ್ಯಪಾನವು ವಿಶೇಷವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಹೆಚ್ಚು ಪರಿಣಾಮಕಾರಿ. ತಾಯಿ ಎದೆ ಹಾಲು ಕುಡಿಸಿದ ನಂತರ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಮಗುವಿನ ಬೆನ್ನಿನ ಮೇಲೆ ಮಗು ತೇಗುವಂತೆ ಬೆನ್ನನ್ನು ಸೂಕ್ಷ್ಮವಾಗಿ ತಟ್ಟುತ್ತಾ ಮಗು ಉಸಿರು ಗಟ್ಟದಂತೆ ನಿಗಾ ವಹಿಸಬೇಕು ಆರು ತಿಂಗಳ ತನಕ ಎದೆ ಹಾಲುಣಿಸಿ ನಂತರ ಪೂರಕ ಮಿದು ಆಹಾರವನ್ನು ಪ್ರಾರಂಭಿಸಿ ಎರಡು ವರ್ಷದವರೆಗೆ ಮಗುವಿಗೆ ತಾಯಿಯ ಎದೆ ಹಾಲು ಕುಡಿಸುವುದನ್ನು ಮುಂದುವರಿಸಬೇಕೆಂದರು.
ಟಿಹೆಚ್‍ಓ ಡಾ.ಬಿ.ವಿಗಿರೀಶ್ ಮಾತನಾಡಿ, ಈ ವರ್ಷದ ಘೋಷವಾಕ್ಯ ಸುಸ್ತಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ತಾಯಿ ಎದೆಹಾಲು ಮಗುವಿಗೆ ಕುಡಿಸುವಾಗ ಕೈಗಳ ಸ್ವಚ್ಛತೆ, ಸ್ತನಗಳ ಸ್ವಚ್ಛತೆ ಕಾಪಾಡಿ ಶಾಂತವಾದ ಸ್ಥಳದಲ್ಲಿ ಕುಳಿತು ಮಗುವಿಗೆ ಎದೆ ಹಾಲುಣಿಸಬೇಕೆಂದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಎದೆ ಹಾಲಿನ ಮಹತ್ವ ಕುರಿತು ಹಾಡಿನ ಮುಖಾಂತರ ತಾಯಂದಿರ ಗಮನ ಸೆಳೆದರು. ಬಿಹೆಚ್‍ಈಓ. ಬಿ ಜಾನಕಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ:
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣನಾಯಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜೆ.ಆರ್.ಗೌರಮ್ಮ, ಗೋವಿಂದರೆಡ್ಡಿ ಕೊಣ್ಣೂರ, ವೈದ್ಯಾಧಿಕಾರಿ ಡಾ. ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸ್ ಮೂರ್ತಿ, ಆಶಾಮೆಂಟರ್ ಕವಿತಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕರಕಪ್ಪ ಮೇಟಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು. ಆಶಾ ಕಾರ್ಯಕರ್ತೆಯರು 45 ಕ್ಕೂ ಹೆಚ್ಚು ಗರ್ಭಿಣಿ ಬಾಣಂತಿಯರು ತಾಯಂದಿರು ಹಾಗೂ ಐಇಸಿ ಸಿಬ್ಬಂದಿ ಜಬ್ಬರ್ ಸಾಹೇಬ್ ಮತ್ತಿತರರು ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

