CHITRADURGA NEWS | 08 AUGUST 2026
ಚಿತ್ರದುರ್ಗ: ಮಳೆಗಾಲದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗ ವಿಭಾಗವು ಪ್ರತಿ ಭಾನುವಾರ ವಿಶೇಷ ಪ್ರವಾಸ ಪ್ಯಾಕೇಜ್ ಬಸ್ ಸೇವೆಯನ್ನು ಆರಂಭಿಸುತ್ತಿದೆ.
ಇದನ್ನೂ ಓದಿ: ಎಸ್‌ಜೆಎಂ ಫಾರ್ಮಸಿ ಕಾಲೇಜಿನ ಫಾರ್ಮಾ ದೀಕ್ಷಾಂತ್–2026 | 146 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಈ ವಿಶೇಷ ಬಸ್ ಸೇವೆಯು ಇದೇ ಆಗಸ್ಟ್ 09 ರಿಂದ ಪ್ರಾರಂಭವಾಗಲಿದ್ದು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ಬಸ್ ನಿಲ್ದಾಣಗಳಿಂದ ಹೊರಡಲಿದೆ. ಈ ಪ್ಯಾಕೇಜ್‍ನಲ್ಲಿ ಪ್ರವಾಸಿಗರು ಜೋಗ ಜಲಪಾತದ ಜೊತೆಗೆ ವರದಮೂಲ ಮತ್ತು ಇಕ್ಕೇರಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಬಸ್‍ಗಳು ಚನ್ನಗಿರಿ, ಶಿವಮೊಗ್ಗ ಹಾಗೂ ಸಾಗರ ಮಾರ್ಗವಾಗಿ ಸಂಚರಿಸಲಿವೆ.
ಚಳ್ಳಕೆರೆಯಿಂದ ಬೆಳಿಗ್ಗೆ 5.15ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ಟಿಕೆಟ್ ದರ ವಯಸ್ಕರಿಗೆ ರೂ.600 ಹಾಗೂ ಮಕ್ಕಳಿಗೆ ರೂ.500 ನಿಗದಿಪಡಿಸಲಾಗಿದೆ.
ಚಿತ್ರದುರ್ಗದಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ತಲುಪಲಿದ್ದು, ವಯಸ್ಕರಿಗೆ ರೂ.500 ಮತ್ತು ಮಕ್ಕಳಿಗೆ ರೂ. 400 ದರವಿದೆ. ಹಾಗೆಯೇ ಹೊಳಲ್ಕೆರೆಯಿಂದ ಬೆಳಿಗ್ಗೆ 6.45ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ವಯಸ್ಕರಿಗೆ ರೂ.450 ಹಾಗೂ ಮಕ್ಕಳಿಗೆ ರೂ.350 ಪ್ರಯಾಣ ದರ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಮಳೆ ಅಭಾವದಿಂದ ಹೊಸದುರ್ಗ ರೈತರು ಸಂಕಷ್ಟದಲ್ಲಿ | ಬೆಳೆ ನಷ್ಟ ಸಮೀಕ್ಷೆಗೆ ಆದೇಶ
ಈ ವಿಶೇಷ ಟೂರ್ ಪ್ಯಾಕೇಜ್‍ಗೆ www.ksrtc.in ವೆಬ್‍ಸೈಟ್ ಮೂಲಕ ಆನ್‍ಲೈನ್ ಬುಕಿಂಗ್ ಮಾಡಬಹುದು. ಒಂದು ವೇಳೆ ಆಸನಗಳು ಖಾಲಿ ಇದ್ದಲ್ಲಿ ಬಸ್‍ನ ನಿರ್ವಾಹಕರ ಬಳಿಯೂ ನೇರವಾಗಿ ಟಿಕೆಟ್ ಪಡೆಯಬಹುದಾಗಿದೆ. ಈ ವಿಶೇಷ ಪ್ಯಾಕೇಜ್‍ಗೆ ‘ಶಕ್ತಿ’ ಯೋಜನೆ ಅನ್ವಯಿಸುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

