ಮುಖ್ಯ ಸುದ್ದಿ
ಪಕ್ಷದ ತೀರ್ಮಾನಕ್ಕೆ ನಾನು ಬದ್ಧ | ಕಾರ್ಯಕರ್ತನಾಗಿರು ಎಂದರೆ ಅದಕ್ಕೂ ಸಿದ್ಧನಿದ್ದೇನೆ | ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

CHITRADURGA NEWS | 23 FEBRUARY 2024
ಚಿತ್ರದುರ್ಗ: ನಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯ ಸಮಿತಿ ಆಯ್ಕೆ ಮಾಡಿದೆ. ನಾಳೆ ಪಕ್ಷ ಕಾರ್ಯಕರ್ತನಾಗಿರು ಎಂದರೆ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ. ಜಿಲ್ಲಾಧ್ಯಕ್ಷನಾಗಿರು ಎಂದರೂ ಸರಿ. ಪಕ್ಷದ ಸೂಚನೆಯಂತೆ ಕೆಲಸ ಮಾಡುಲು ನಾನು ಸದಾ ಸಿದ್ಧ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾಧ್ಯಮದವರು, ಬಿಜೆಪಿಯೊಳಗಿನ ಭಿನ್ನಮತ ಕುರಿತ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಚಿತ್ರದುರ್ಗ ಬಿಜೆಪಿಗೆ ಬಂಡಾಯದ ಬಿಸಿ | ಪ್ರತ್ಯೇಕ ಸಭೆ ನಡೆಸಿದ ಅಸಮಧಾನಿತರು
ರಾಜ್ಯ ಸಮಿತಿಯವರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಈಗ ಬೇರೆಯವರು ಕೇಳುತ್ತಿರುವುದು ಕೂಡಾ ನ್ಯಾಯ ಸಮ್ಮತವಾಗಿದೆ. ಅವರಲ್ಲೂ ಜಿಲ್ಲಾಧ್ಯಕ್ಷರಾಗುವ ಎಲ್ಲಾ ಅರ್ಹತೆ ಇದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ನಾನು ಪಕ್ಷದ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಇಲ್ಲಿ ಇರು ಎಂದರೆ ಇರುತ್ತೇನೆ. ಬೇಡ ಕಾರ್ಯಕರ್ತನಾಗಿರು ಎಂದರೆ ಅದಕ್ಕೂ ಸಹಾ ನಾನು ಸಿದ್ಧನಿದ್ದೇನೆ ಎಂದು ಮುರುಳಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಭಾರ್ಗವಿ ದ್ರಾವಿಡ್
ಇತ್ತೀಚೆಗೆ ಬಿಜೆಪಿಯ ಕೆಲ ಮುಖಂಡರು, ಕಾರ್ಯಕರ್ತರು ಪ್ರತ್ಯೇಕ ಸಭೆ ಮಾಡಿ ಜಿಲ್ಲಾಧ್ಯಕ್ಷ ಎ.ಮುರುಳಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
