
CHITRADURGA NEWS | 11 APRIL 2024
ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಪ್ರಜಕ್ತ ಪಿ ಠಾಕೂರ್ ಇತ್ತೀಚಿಗೆ ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಎಆರ್‌ಓ (ಸಹಾಯಕ ಚುನಾವಣಾಧಿಕಾರಿ), ಎಇಓ (ಸಹಾಯಕ ಚುನಾವಣಾ ವೆಚ್ಚ ಅಧಿಕಾರಿ)ಗಳಿಂದ ಅಭ್ಯರ್ಥಿಗಳ ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದ ಬಿ-13, ಸಿ-1 ನಮೂನೆಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ: ಎಸ್‌ಆರ್‌ಎಸ್ ಕಾಲೇಜಿಗೆ ದಾಖಲೆಯ ಫಲಿತಾಂಶ
ಮೊಳಕಾಲ್ಮೂರು ತಾಲ್ಲೂಕಿನ ಕಣಕುಪ್ಪೆ, ಎದ್ದಲಬೊಮ್ಮನಹಟ್ಟಿ, ಉಡೇವು ಚೆಕ್‌ಪೊಸ್ಟ್ಗಳಿಗೆ ಭೇಟಿ ನೀಡಿದ ಚುನಾವಣಾ ವೆಚ್ಚ ವೀಕ್ಷಕಿ ಪ್ರಜಕ್ತ ಠಾಕೂರ್ ಎಲ್ಲಾ ಖಾಸಗಿ ಹಾಗೂ ಸಮೂಹ ಸಾರಿಗೆ ವಾಹನಗಳನ್ನು ತಪ್ಪದೇ ಪರಿಶೀಲನೆ ನಡೆಸಬೇಕು ಎಂದು ಚೆಕ್‌ಪೊಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಚೆಕ್‌ಪೊಸ್ಟ್ಗಳಿಗೆ ಭೇಟಿ ನೀಡಿದ ಹಿರಿಯ ಅಧಿಕಾರ ವಿವರಗಳನ್ನು ಪರಿಶೀಲನೆ ನೆಡೆಸಿದರು.
ಹೊಳಲ್ಕೆರೆ ವಿಧಾನ ಸಭಾಕ್ಷೇತ್ರ ಸಹಾಯಕ ಚುನಾವಣೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾನ ಪೋಟೋ ಸ್ಟಾಂಡ್‍ನಲ್ಲಿ ನಿಂತು ಅಧಿಕಾರಿಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು. ನಂತರ ದುಮ್ಮಿ ಹಾಗೂ ಸಾಸಲು ಚೆಕ್ ಪೆÇೀಸ್ಟ್‍ಗಳಿಗೆ ಭೇಟಿ ನೀಡಿದರು.
ಇದನ್ನೂ ಓದಿ: ಮನೆಯಿಂದಲೇ ಮತದಾನಕ್ಕೆ ಡೇಟ್ ಫಿಕ್ಸ್
ಚುನಾವಣಾ ವೆಚ್ಚ ವೀಕ್ಷಕಿ ಪ್ರಜಕ್ತ ಪಿ ಠಾಕೂರ್ ಅವರ ಮೊಳಕಾಲ್ಮೂರು ಭೇಟಿ ಸಮಯದಲ್ಲಿ ಸಹಾಯಕ ಚುನಾವಣಾಧಿಕಾರಿ ಬಸನಗೌಡ ಕೋಟೂರ ಸೇರಿದಂತೆ ಇತರೆ ಅಧಿಕಾರಿಗಳು, ಹೊಳಲ್ಕೆರೆ ಭೇಟಿ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ವಿವೇಕಾನಂದ, ತಹಶಿಲ್ದಾರರ ಬಿಬಿ ಫಾತೀಮಾ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

