
CHITRADURGA NEWS | 10 FEBRUARY 2024
ಚಿತ್ರದುರ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾದವ ಸಮಾಜದ ಪರವಾಗಿದೆ. ಸಮುದಾಯಕ್ಕೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಸದಾ ನಿಮ್ಮ ಜೊತೆಗಿರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ಶ್ರೀ ಕ್ಷೇತ್ರ ಗೊಲ್ಲಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಕೃಷ್ಣಯಾದವಾನಂದ ಶ್ರೀಗಳ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಜಿಲ್ಲೆಯಲ್ಲಿ ಯಾದವರು ಮತ್ತು ಕಾಡು ಗೊಲ್ಲರು ಅಧಿಕ ಸಂಖ್ಯೆಯಲ್ಲಿದ್ದಾರೆ. 1978ರಲ್ಲಿ ಬಿ.ಎಲ್.ಗೌಡರು ಚಳ್ಳಕೆರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ದೇವರಾಜು ಅರಸುರವರು ಚಿಕ್ಕಪ್ಪ ಅವರಿಗ ಟಿಕೆಟ್ ನೀಡುವುದರ ಮೂಲಕ ಚುನಾವಣೆಗೆ ನಿಲ್ಲಿಸಿದರು. ನಮ್ಮ ಮನೆತನದ ರಾಜಕಾರಣಕ್ಕೆ ದೇವರಾಜು ಅರಸು ಅವರು ಮೂಲ ಕಾರಣಕರ್ತರಾಗಿದ್ದಾರೆ. ದೇವರಾಜು ಅರಸು ರವರು ನೀಡಿದ ಕೊಡುಗೆಯಿಂದ ಇಂದು ನಾವೆಲ್ಲರೂ ಸಹಾ ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
‘ದೇವರಾಜು ಅರಸು ಮೀಸಲಾತಿ ನೀಡುವುದರ ಮೂಲಕ ಸಣ್ಣ-ಪುಟ್ಟ ಸಮಾಜಗಳನ್ನು ನೆಮ್ಮದಿಯಾಗಿವೆ. ಶೋಷಿತ ವರ್ಗದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತ ಕೆಲಸ ಮಾಡಿದರು’ ಎಂದು ತಿಳಿಸಿದರು.
ಇದನ್ನೂ ಓದಿ: ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ಚಿತ್ರದುರ್ಗ | ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಚಿತ್ರದುರ್ಗದಲ್ಲಿ ಶ್ರೀಮಠ ನಿರ್ಮಾಣವಾಗಲು ಕೃಷ್ಣಪ್ಪರವರ ಪಾತ್ರ ಅಧಿಕವಾಗಿದೆ. ಮುಂದಿನ ದಿನದಲ್ಲಿ ಕ್ಷೇತ್ರ ಪುನರ್ ವಿಗಂಡನೆಯಾಗಲಿದೆ. ಆಗ ನಡೆಯುವ ಚುನಾವಣೆಯಲ್ಲಿ ಯಾದವ ಸಮಾಜದಿಂದ ಒಬ್ಬರು ಆಯ್ಕೆಯಾಗಬೇಕಿದೆ ಇದಕ್ಕೆ ಇಂದಿನಿಂದಲೇ ತಯಾರಿ ಮಾಡಬೇಕಿದೆ ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ‘ಬೇರೆ ಸಮಾಜದವರು ನಿಮ್ಮ ಅಭಿವೃದ್ಧಿ ನೋಡುವಂತೆ ಬೆಳೆಯಬೇಕು. ಯಾದವ ಸಮಾಜಕ್ಕೆ ಚಿತ್ರದುರ್ಗದ ಬೃಹನ್ಮಠಕ್ಕೂ ಆವಿನಾವ ಸಂಬಂಧವಿದೆ. ಅದನ್ನು ಮುಂದುವರೆಸಿಕೊಂಡು ಹೋಗಿ, ಸಮಾಜ ಬಲಿಷ್ಠವಾಗಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: 2024ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಕೆ ? | ಆಟೋ ಪ್ರಚಾರಕ್ಕೆ ಚಾಲನೆ
ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ, ಸಮಾಜದವರು ಒಗ್ಗಟಾಗಿ ಇದ್ದಾಗ ಮಾತ್ರ ಬೇರೆಯವರು ನಿಮ್ಮನ್ನು ಕರೆದು ಮಾತನಾಡಿಸಲು ಸಾಧ್ಯವಿದೆ. ನಿಮ್ಮಲ್ಲಿನ ಉಪ ಜಾತಿಗಳು ಸಹಾ ಒಗ್ಗಟಾಗಬೇಕಿದೆ ಆಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದರು.
ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ‘ಆಂಜನೇಯರವರು ಸಚಿವರಾಗಿದ್ದಾಗ ಮಠಕ್ಕೆ ಅನುದಾನ ನೀಡಿದ್ದರು. ಈಗ ನಮ್ಮ ಸಂಘಕ್ಕೆ 100 ವರ್ಷ ಪೂರ್ಣವಾಗಿದೆ ಅದರ ಸಮಾರಂಭವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ | ದುರ್ಗದ ಜನರ ಪ್ರೀತಿಗೆ ಭಾವುಕರಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಕನಕ ಗುರಪೀಠದ ಶ್ರೀ ಈಶ್ವರನಂದಪುರಿ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಮೇದಾರಕೇತೇಶ್ವರ ಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಧೀರಜ್ ಮುನಿರಾಜು, ಮಾಜಿ ಎಂಎಲ್ಸಿ ಜಯ್ಯಮ್ಮ ಬಾಲರಾಜ್, ಯಾದವ ಸಂಘದ ಉಪಾಧ್ಯಕ್ಷ ಸಿದ್ದಪ್ಪ, ರಾಜ್ಯ ಉಪಾಧ್ಯಕ್ಷ ವಿಠಲ್ ಯಾದವ್, ಮುಖಂಡರಾದ ಸಿ.ಟಿ.ಕೃಷ್ಣಮೂರ್ತಿ, ನರಸಿಂಹರಾಜು, ಗೀತಾನಂದಿನಿ ಗೌಡ, ಕೆ.ಸಿ.ರಮೇಶ್, ಓ.ಶಂಕರ್, ಜೆಜೆ.ಹಟ್ಟಿ ತಿಪ್ಪೇಸ್ವಾಮಿ, ಮುತ್ತುರಾಜ್ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

