
CHITRADURGA NEWS | 04 FEBRUARY 2024
ಚಿತ್ರದುರ್ಗ: ಆನ್‌ಲೈನ್ ವಂಚನೆ ಬಗ್ಗೆ ಪೊಲೀಸ್ ಇಲಾಖೆ ನಿರಂತರ ಜಾಗೃತಿ ಮೂಡಿಸುತ್ತಿದ್ದರು ಸಹ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲಿ ವಿದ್ಯಾವಂತರೇ ಈ ಜಾಲಕ್ಕೆ ಬೀಳುತ್ತಿರುವುದು ಸೋಜಿಗಿದ ಸಂಗತಿಯಾಗಿದೆ.
ಇದನ್ನೂ ಓದಿ: ಗರ್ಭಗುಡಿ ಪ್ರವೇಶಕ್ಕೆ ಮಠಾಧೀಶರು ಕೋರಿಕೊಂಡಿಲ್ಲ | ದೇಗುಲದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಸ್ಪಷ್ಟನೆ
ಶಿಕ್ಷಕರೊಬ್ಬರು ವಾಟ್ಸಾಪ್ ಸಂದೇಶ ನಂಬಿ ಹಣಗಳಿಸಲು ಹೋಗಿ ಬರೋಬ್ಬರಿ 6 ಲಕ್ಷದ ನಾಲ್ಕು ಸಾವಿರ ಹಣವನ್ನು ಆನ್‌ಲೈನ್ ಮೂಲಕ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಬಾಗೂರು ದೇವಸ್ಥಾನ ತೊಳೆದ ವಿಚಾರ | ಎಲ್ಲಿ ಗೊಂದಲ ಆಗಿದೆ ಎಂಬುದು ಬಹಿರಂಗವಾಗಲಿ | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಎಂ.ಕೆ.ಗಿರಿ ಪ್ರಕಾಶ್ ಎಂಬುವರೇ ಆನ್‌ಲೈನ್ ಮೂಲಕ ಹಣ ಕಳೆದುಕೊಂಡ ಶಿಕ್ಷಕ. ವಾಟ್ಸಾಪ್‌ನಲ್ಲಿ ಹೆಚ್ಚು ಹಣಗಳಿಸುವ ಕುರಿತು ಸಂದೇಶ ಒಂದು ಬಂದಿದೆ. ಇದನ್ನು ನಂಬಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಶಿಕ್ಷಕ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದಾನೆ. ಹಣ ಪಡೆದವರು ನಂತರ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ
ಈ ಕುರಿತು ಚಿತ್ರದುರ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
