
ಹೊಳಲ್ಕೆರೆ: ಹೊಸ ಮನೆಯ ವುಡ್ ವರ್ಕ್ ಮಾಡಲು ಬಂದಿದ್ದ ರಾಜಾಸ್ಥಾನ ಮೂಲದ ಯುವಕನ ಕೊಲೆಯಾಗಿದೆ (Murder).
ಹೊಳಲ್ಕೆರೆ ತಾಲೂಕು ಬ್ಯಾಲಹಾಳ್ ಉಪ್ಪಾರಹಟ್ಟಿ ಗ್ರಾಮದ ಪುರುಷೋತ್ತಮ ಎಂಬುವವರ ಹೊಸ ಮನೆಗೆ ವುಡ್ ವರ್ಕ್ ಮಾಡಲು ರಾಜಸ್ಥಾನ ಮೂಲದ ಇಬ್ಬರು ಯುವಕರು ಬಂದಿದ್ದು, ಅಲ್ಲಿಯೇ ಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕಳ್ಳತನವಾಗಿದ್ದ SRE ಬಸ್ ಹುಬ್ಬಳ್ಳಿ ಸಮೀಪ ಪತ್ತೆ | ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಶೋಧ ಮಾಡಿದ ಪೊಲೀಸರು
ರಾಜಸ್ಥಾನ ಮೂಲದ 30 ವರ್ಷ ವಯಸ್ಸಿನ ಹುಕುಂ ಸಿಂಗ್ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಕೈಲಾಸ್ ಸಿಂಗ್ ನಾಪತ್ತೆಯಾಗಿದ್ದ. ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದರು.
ಗುರುವಾರ ರಾತ್ರಿ ಮಲಗಿದ್ದ ವೇಳೆ ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪಿಎಸ್‍ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಆರೋಪಿ ಬಂಧನ:
ಕೊಲೆಯ ಘಟನೆ ವರದಿಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಕೈಲಾಸ್ ಸಿಂಗ್ ಬಂಧಿಸಿದ್ದಾರೆ.
ಕೊಲೆ ನಂತರ ಬೈಕ್ ತೆಗೆದುಕೊಂಡು ಹೋಗಿ ದಾವಣಗೆರೆಯಲ್ಲಿ ಬಿಟ್ಟು ಚನ್ನಗಿರಿ ತಾಲೂಕಿನ ಶೆಟ್ಟಿಹಳ್ಳಿಗೆ ಬಂದಿದ್ದ ಆರೋಪಿಯನ್ನು ಹೊಳಲ್ಕೆರೆ ಪೊಲೀಸರು ಬಂದಿಸಿದ್ದಾರೆ.
ಶೆಟ್ಟಿಹಳ್ಳಿಯಲ್ಲಿ ಮತ್ತೊಬ್ಬ ಸ್ನೇಹಿತನ ಜೊತೆಗೆ ಕೆಲಸ ಮಾಡುತ್ತಿದ್ದ ವೇಳೆ ಬಂಧಿಸಿ ಕರೆತಂದಿದ್ದಾರೆ. ಕೆಲಸ ಮಾಡುವ ವಿಚಾರಕ್ಕೆ ಹುಕುಂ ಸಿಂಗ್ ಪದೇ ಪದೇ ಬೈಯುತ್ತಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

