ಕ್ರೈಂ ಸುದ್ದಿ
ವಿದ್ಯುತ್ ಅವಘಡ | ಬೆಂಕಿಯಿಂದ ಹೊತ್ತಿ ಉರಿದ ಮನೆ
CHITRADURGA NEWS | 26 OCTOBER 2024
ಹೊಳಲ್ಕೆರೆ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯೊಂದು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಶುಕ್ರವಾರ ರಾತ್ರಿ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಹೋಗುತ್ತಿದ್ದರಿಂದ ಹೊಳಲ್ಕೆರೆ ಪಟ್ಟಣದಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು.
ಇದನ್ನೂ ಓದಿ: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ
ರಾತ್ರಿ ವೇಳೆ ತಗುಲಿದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿದರು. ಬೆಂಕಿಯ ಕೆನ್ನಾಲಿಗೆ ನಿಯಂತ್ರಣ ಮೀರಿ ಉರಿಯುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಆತಂಕಕ್ಕೀಡಾಗಿದ್ದರು.
ಇದನ್ನೂ ಓದಿ: ಏರುತ್ತಲೇ ಇದೆ ನೀರಿನ ಮಟ್ಟ | ವಿವಿ ಸಾಗರಕ್ಕೆ ಇಂದು ಬಂದ ನೀರೆಷ್ಟು
ಹೊಳಲ್ಕೆರೆಯ ಮಹಮ್ಮದ್ ಮುಸ್ತಫಾ ಎಂಬುವವರ ಮನೆಗೆ ಬೆಂಕಿ ತಗುಲಿದ್ದು, 2.20 ಲಕ್ಷ ರೂ. ನಗದು ಸೇರಿದಂತೆ ಗೃಹ ಬಳಕೆಯ ವಸ್ತುಗಳು ಸುಟ್ಟು ಹೋಗಿವೆ.
ಅದೃಷ್ಟವಶಾತ್ ಬೆಂಕಿಯಿಂದ ಯಾರಿಗೂ ಜೀವಹಾನಿಯಾಗಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ವಿವಿ ಸಾಗರ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿ | 126 ಅಡಿ ದಾಟಿದ ಜಲಾಶಯ