Connect with us

    ಮಹನೀಯರ ತತ್ವಾದರ್ಶ ಬದುಕಿಗೆ ದಾರಿದೀಪ | ತಹಶೀಲ್ದಾರ್ ಡಾ.ನಾಗವೇಣಿ

    ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ

    ಮುಖ್ಯ ಸುದ್ದಿ

    ಮಹನೀಯರ ತತ್ವಾದರ್ಶ ಬದುಕಿಗೆ ದಾರಿದೀಪ | ತಹಶೀಲ್ದಾರ್ ಡಾ.ನಾಗವೇಣಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 19 AUGUST 2024

    ಚಿತ್ರದುರ್ಗ: ಮಹನೀಯರ ಜೀವನ, ಸಂದೇಶ, ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿವೆ ಎಂದು ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.

    ಕ್ಲಿಕ್ ಮಾಡಿ ಓದಿ: Govt Recruitment: ಸರ್ಕಾರಿ ಕೆಲಸಕ್ಕೆ ನೇಮಕಾತಿ ಪ್ರಾರಂಭ | ಅರ್ಜಿ ಸಲ್ಲಿಕೆಗೆ ಕೌಂಟ್‌ಡೌನ್‌

    ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

    ಶರಣರು ಆಚರಣೆಯ ಮೂಲಕ ತೋರಿಸಿಕೊಟ್ಟ ಕಾಯಕ ತತ್ವ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆರ್.ನುಲೇನೂರು ಗ್ರಾಮದ ನಿವೃತ್ತ ಶಿಕ್ಷಕ ವಿ.ಟಿ.ಚಂದಯ್ಯ ಉಪನ್ಯಾಸ ನೀಡಿ, ಚಂದಯ್ಯನವರು ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರಿನಲ್ಲಿ ಐಕ್ಯರಾಗಿರುವ ಸಮಾಧಿ ಇದೆ. ಅವರ ಜನ್ಮ ವೃತ್ತಾಂತವನ್ನು ಭಾರತೀಯ ಪುರಾತತ್ವ ಇಲಾಖೆಯು ಸಂಶೋಧನೆಯನ್ನೂ ಮಾಡಿದೆ ಎಂದು ತಿಳಿಸಿದರು.

    ಮಹನೀಯರ ಜಯಂತಿ ಅಂಗವಾಗಿ ವಿಚಾರಗಳನ್ನು ಸಮಾಜಕ್ಕೆ ತಿಳುವಳಿಕೆ ನೀಡಲು ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ಇಂದು ಭಾಷಣ ಮಾಡುವವರ ಸಂಖ್ಯೆ ಹೇರಳವಾಗಿದ್ದು, ಕೇಳುವ ಮನಸ್ಸುಗಳು ಕಡಿಮೆಯಾಗಿವೆ.

    ಕ್ಲಿಕ್ ಮಾಡಿ ಓದಿ: Direct Recruitment: ತೆರೆದಿದೆ ಉದ್ಯೋಗದ ಬಾಗಿಲು | ನೇರ ನೇಮಕಾತಿ ಸಂದರ್ಶನ

    ಭಾಷಣ ಮಾಡುವುದು ಸುಲಭ ಆದರೆ ಅದರಂತೆ ಜೀವನದಲ್ಲಿ ಅಳವಡಿಸಿಕೊಂಡು ಬದುಕು ನಡೆಸುವುದು ಕಷ್ಟ ಎಂದು ತಿಳಿಸಿದ ಅವರು, ಶರಣರು ಕಾಯಕ, ದಾಸೋಹ ತತ್ವದ ಮೂಲಕ ಸುಂದರ, ಸರಳತೆಯಿಂದ ಬದುಕು ನಡೆಸಿದರು. ಅದರಂತೆ ನಾವುಗಳು ಕೂಡ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

    ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಪ್ಪ ಮಾತನಾಡಿ, ಶ್ರೀ ನುಲಿಯ ಚಂದಯ್ಯ ಅವರ 917 ನೇ ಜಯಂತಿ ಆಚರಿಸಲಾಗುತ್ತಿದ್ದು, ಕೋಟೆನಾಡಿನಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.

    ಜಿಲ್ಲೆಯಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜದ ಜನರು ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ನಗರದಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರಲ್ಲಿ ನಿವೇಶನ ಮಂಜೂರು ಮಾಡುವಂತೆ ಕೋರಿದರು. ನಗರದ ಪ್ರಮುಖ ರಸ್ತೆಗೆ ಶ್ರೀ ನುಲಿಯ ಚಂದಯ್ಯ ಹೆಸರು ನಾಮಕರಣ ಮಾಡಬೇಕು ಎಂದು ಕೋರಿದರು.

    ಕಾರ್ಯಕ್ರದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಕೊರಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಗೌರವಾಧ್ಯಕ್ಷ ಹನುಮಂತಪ್ಪ, ನಗರಸಭೆ ನಾಮನಿರ್ದೇಶನ ಸದಸ್ಯ ಬಿ.ನರಸಿಂಹಮೂರ್ತಿ, ನಗರಸಭೆ ಮಾಜಿ ಸದಸ್ಯ ಗೌರಮ್ಮ, ಮುಖಂಡರಾದ ಜಯಶ್ರೀ, ಪರಮೇಶ್, ಮಹಂತೇಶ್, ಧನಂಜಯ್ ಸೇರಿದಂತೆ ಮತ್ತಿತರರು ಇದ್ದರು. ಚಿತ್ರದುರ್ಗದ ಸುಜೀತ್ ಕುಲಕರ್ಣಿ ಅವರ ತಂಡ ಗೀತಗಾಯನ ನಡೆಸಿಕೊಟ್ಟರು. ಕಲಾವಿದ ಹರೀಶ್ ನಿರೂಪಿಸಿದರು.

    ಕ್ಲಿಕ್ ಮಾಡಿ ಓದಿ: CONGRESS; ಎಂತಹ ಹೋರಾಟ ತ್ಯಾಗಕ್ಕೂ ಸಿದ್ಧ | ಕೈ ನಾಯಕರ ಬೃಹತ್ ಪ್ರತಿಭಟನೆ

    ಅದ್ದೂರಿ ಮೆರವಣಿಗೆ:

    ಶ್ರೀ ನುಲಿಯ ಚಂದಯ್ಯ ಜಯಂತಿಯ ಆಚರಣೆ ಅಂಗವಾಗಿ ಸೋಮವಾರ ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರೀ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರು ಚಾಲನೆ ನೀಡಿದರು.

    ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ, ವೇದಿಕೆ ಕಾರ್ಯಕ್ರಮ ನಡೆಯುವ ತರಾಸು ರಂಗಮಂದಿರದಲ್ಲಿ ಅಂತ್ಯಗೊಂಡಿತು. ಡೋಲು, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

    ಈ ಸಂದರ್ಭದಲ್ಲಿ ಕೊರಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೃಷ್ಣಪ್ಪ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top