CHITRADURGA NEWS | 28 MARCH 2026
ಚಿತ್ರದುರ್ಗ: ಸಮಾಜ ಸುಧಾರಕ ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳನ್ನು ಈಗಿನ ಪೀಳಿಗೆ ಅಧ್ಯಯನ ಮಾಡುವ ಮತ್ತು ಆ ಅಧ್ಯಯನ ಜ್ಞಾನವು ಸದಾ ಮನಸ್ಸಿನಲ್ಲಿರಲಿ ಎನ್ನುವ ಉದ್ದೇಶದಿಂದ ಮುರುಘಾ ಮಾದಲ್ಲಿ ಮಾಧ್ಯಮಿಕ ಹಂತದಿಂದ ಸ್ನಾತಕೋತ್ತರ ತರಗತಿಗಳವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 26 | ಹತ್ತಿ ರೇಟ್ ಎಷ್ಟಿದೆ?
ಸ್ಪರ್ಧೆ ಹಾಗೂ ವಿವರ :
1) ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ: “ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ”, 2) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ – “ಬಸವಣ್ಣನವರ ಮೌಢ್ಯ ವಿರೋಧಿನಿಲುವು”, 3) ಪಿಯುಸಿ, ಐಟಿಐ, ಡಿಪ್ಲೊಮಾ, ಡಿ.ಎಡ್. ಇತರ ತರಗತಿಗಳ ವಿದ್ಯಾರ್ಥಿಗಳಿಗೆ: “ಬಸವಣ್ಣನವರ ಸಮ ಸಮಾಜ”, 4) ಪದವಿ ಹಾಗೂ ಸಮಾನಾಂತರ ತರಗತಿಗಳ ವಿದ್ಯಾರ್ಥಿಗಳಿಗೆ – “ಸಮಕಾಲೀನ ಶರಣರು ಕಂಡ ಬಸವಣ್ಣ”, 5) ಸ್ನಾತಕೋತ್ತರ ತರಗತಿಗಳವರಿಗೆ – “ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ”. ಪ್ರಬಂಧ ಬರೆಯುವವರು ಸಂಬಂಧಿಸಿದ ವಚನಗಳನ್ನು ಉಲ್ಲೇಖಿಸಬಹುದಾಗಿದೆ.
ಪ್ರಬಂಧ ಸ್ಪರ್ಧೆಗೆ ನಿಯಮಗಳು:
· ಪ್ರಬಂಧವು ಕನ್ನಡದಲ್ಲಿರಬೇಕು ಮತ್ತು ವಿಷಯಾಂತರವಾಗಿರಬಾರದು.
· ಪ್ರಬಂಧವು ಸ್ವಂತ ರಚನೆಯಾಗಿರಬೇಕು.
· ಇತರರ ಬರಹದ ನಕಲು ಆಗಿರಬಾರದು ಬೇರೆಯವರ ಅಭಿಪ್ರಾಯ ಉಲ್ಲೇಖಿಸಿದಲ್ಲಿ ಆ ವ್ಯಕ್ತಿಗಳ ಉಲ್ಲೇಖವಿರಬೇಕು.
· ಪ್ರಬಂಧವು 1000 (ಸಾವಿರ) ಪದಗಳಿಗೆ ಮೀರಿರಬಾರದು ಮತ್ತು ಎ4 ಗಾತ್ರದ ಬಿಳಿ ಹಾಳೆ ಬಳಸಿರಬೇಕು.
· ಅಕ್ಷರಗಳು ಸ್ಪಷ್ಟವಾಗಿ, ಅಂದವಾಗಿ, ವ್ಯಾಕರಣ ದೋಷವಿಲ್ಲದ ಹಾಗೂ ವಸ್ತುನಿಷ್ಠವಾಗಿ ಅಂದವಾದ ಬರವಣಿಗೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
· ನೀಲಿ ಅಥವಾ ಕಪ್ಪು ಶಾಯಿಯಲ್ಲಿರಬೇಕು.
· ಪ್ರಬಂಧದೊಂದಿಗೆ ಸ್ಪಷ್ಟ ಅಧಿಕೃತ ವಿಳಾಸ ದೂರವಾಣಿ ಸಂಖ್ಯೆ, ಶಾಲಾ ಕಾಲೇಜುಗಳ ವಿವರಗಳನ್ನು ಲಗತ್ತಿಸಿರಬೇಕು.
· ನಿಗದಿತ ಅಂತಿಮ ದಿನಾಂಕದೊಳಗೆ ಪ್ರಬಂಧವನ್ನು ಸಲ್ಲಿಸಬೇಕು ಹಾಗೂ ಲೇಖನದ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳುವುದು.
· ತಡವಾಗಿ ಬಂದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಬಂಧ ತಲುಪಲು ಕಡೆಯ ದಿನಾಂಕ ಏಪ್ರಿಲ್ 12 ಆಗಿದ್ದು, ಆಯ್ಕೆಯಾದವರಿಗೆ ಸೂಕ್ತ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು.
ಇದನ್ನೂ ಓದಿ: ನಿವೇಶನ, ವಸತಿ ರಹಿತರಿಂದ ಅರ್ಜಿ ಆಹ್ವಾನ
ಪ್ರಬಂಧವನ್ನು ಸಂಯೋಜಕರು, ಬಸವ ಜಯಂತಿ ಪ್ರಬಂಧ ಸ್ಪರ್ಧೆವಿಭಾಗ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಂ.ಕೆ.ಹಟ್ಟಿ-ಅಂಚೆ, ಚಿತ್ರದುರ್ಗ- 577502 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448664932 ಸಂಪರ್ಕಿಸಲು ಶ್ರೀಮಠದ ಪ್ರಕಟಣೆ ಕೋರಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
