
CHITRADURGA NEWS | 05 JANUARY 2026
ಚಿತ್ರದುರ್ಗ: ಫೆಬ್ರವರಿ 8 ಮತ್ತು 9ರಂದು ಹರಿಹರ ತಾಲೂಕು ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: 90 ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರು | ಸಚಿವ ಡಿ.ಸುಧಾಕರ್ ಮಾಹಿತಿ

ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಫೆಬ್ರವರಿ 8 ಮತ್ತು 9 ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆ ಸಮುದಾಯದ ಜಾಗೃತಿಗಾಗಿ ನಡೆಯುತ್ತಿದೆ. ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಸಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಬಸವಣ್ಣ, ಕೆಂಪೆಗೌಡ, ಕನಕದಾಸರ ಅಂಬೇಡ್ಕರ್ ವಾಲ್ಮೀಕಿ ಹೆಸರಿನಲ್ಲಿ ಎಲ್ಲಾ ಸಾಮುದಾಯಗಳು ಸಂವಿಧಾನ ಬದ್ದ ಹಕ್ಕಿಗಾಗಿ ಸಂಘಟನೆಯಾಗುತ್ತಿವೆ. ವಾಲ್ಮೀಕಿ ಸಮಾಜ ನಮ್ಮ ಸಾಂಸ್ಕೃತಿಕ ನಾಯಕನ ಹೆಸರಿನಲ್ಲಿ ಸಂಘಟನೆ ಯಾಗುತ್ತಿದೆ. ರಾಮಾಯಣ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿ ಈ ಜಗತ್ತಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಇದನ್ನೂ ಓದಿ: ಶಿಷ್ಯವೇತನ | ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ನಮ್ಮ ಹಕ್ಕು ಪಡೆಯಲು ನಾವು ಧ್ವನಿ ಎತ್ತಬೇಕು. ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳನ್ನು ಪಡೆಯುವ ಉದ್ದೇಶದಿಂದ ರಾಜಕೀಯ ನಾಯಕರನ್ನು ಕರೆಸಿ ಮನವಿ ಸಲ್ಲಿಸಲಾಗುವುದು. ಬೇಡ, ಬೇಡರ್, ಪರಿವಾರ, ತಳವಾರ ಹೆಸರಿನಲ್ಲಿ ವಿವಿಧ ಅನ್ಯ ಸಮುದಾಯಗಳ ಕೆಲವರು ಎಸ್ ಟಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇವರಾರು ನಾಯಕ ಪರಿವಾರ, ನಾಯಕ ತಳವಾರ ರಾಗಿರುವುದಿಲ್ಲ. ಗೊಂಡ, ರಾಜಗೊಂಡ ಹೆಸರಿನಲ್ಲಿ ಉತ್ತರ ಕರ್ನಾಟಕದಲ್ಲಿ ಎಸ್ ಟಿ ಮೀಸಲಾತಿ ಪಡೆಯುತ್ತಿದ್ದಾರೆ ಎಂದರು.
ದುರ್ಗೋತ್ಸವ, ಮದಕರಿ ಜಯಂತಿ, ಥೀಮ್‌ಪಾರ್ಕ್ ಆಗಲೇಬೇಕು:
ಕೋಟೆನಾಡು ಚಿತ್ರದುರ್ಗದಲ್ಲಿ ರಾಜಾವೀರ ಮದಕರಿ ನಾಯಕ ಥೀಮ್ ಪಾರ್ಕ್, ಸರ್ಕಾರದಿಂದ ಮದಕರಿ ನಾಯಕ ಜಯಂತಿ, ದುರ್ಗೋತ್ಸವ ಆಚರಣೆ ಮಾಡಬೇಕು ಇಲ್ಲದಿದ್ದರೆ ಸಮುದಾಯ ಮುಂದೆ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.
ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದರು, ಕೇವಲ ಚುನಾವಣೆಯಲ್ಲಿ ಮಾತ್ರ ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಧಾನವ್ಯಕ್ತಪಡಿಸಿದರು.
ಇದನ್ನೂ ಓದಿ: ವಿವಿ ಸಾಗರಕ್ಕೆ ಬಾಗೀನ ಅರ್ಪಣೆ | ಒಂದು ತಿಂಗಳಲ್ಲಿ ಭದ್ರಾ ಚಾನೆಲ್‌ನಲ್ಲಿ ಹರಿಯಲಿದೆ ನೀರು | ಸಚಿವ ಡಿ.ಸುಧಾಕರ್
ರಾಜಕೀಯ ಶೈಕ್ಷಣಿಕ ಆರ್ಥಿಕವಾಗಿ ಈ ಸಮುದಾಯ ಹಿಂದುಳಿದಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಸರ್ಕಾರ ಇದನ್ನು ಪರಿಗಣಿಸಲಿಲ್ಲ. ಸಮುದಾಯದ ಜನ ನನ್ನ ಜೊತೆ ಪಾದಯಾತ್ರೆ ಮಾಡಿ ಮೀಸಲಾತಿ ಸತ್ಯಾಗ್ರಹ ನಡೆಸಿದ್ದಾರೆ. ಇದಾದ ನಂತರ ಎಸ್‌ಟಿ ಮೀಸಲಾತಿ ಜಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮದಕರಿನಾಯಕ ವಂಶಸ್ಥರಾದ ರಾಜವೀರ ಮದಕರಿ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ,ಜಿಪಂ ಮಾಜಿ ಸದಸ್ಯ ಲೋಹಿತ್ ಕಮಾರ್, ನಗರಸಭೆ ಸದಸ್ಯ ವೆಂಕಟೇಶ್, ವಾಲ್ಮೀಕಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ,ಎಸ್.ಮಂಜುನಾಥ್, ಎಟಿಎಸ್ ತಿಪ್ಪೇಸ್ವಾಮಿ, ಮುಖಂಡರಾದ ತುಂಬಿನಕೆರೆ ಬಸವರಾಜ್, ಕೆ.ಪಿ.ಸಂಪತ್ ಕುಮಾರ್ ಇತರರಿದ್ದರು.
ಮಠದ ಪ್ರತಿನಿಧಿಗಳ ಆಯ್ಕೆ:
ಇದೇ ವೇಳೆ ಸಮಾಜದ ವತಿಯಿಂದ ಮಠದ ಪ್ರತಿನಿಧಿಗಳಾಗಿ ಹೊಸದುರ್ಗ ತುಂಬಿನಕೆರೆ ಬಸವರಾಜ್, ಹೊಳಲ್ಕೆರೆ ಲೋಹಿತ್ ಕುಮಾರ್, ಚಿತ್ರದುರ್ಗ ಎಟಿಎಸ್ ತಿಪ್ಪೇಸ್ವಾಮಿ, ಚಳ್ಳಕೆರೆ ಮಂಜುನಾಥ್, ಮೊಳಕಾಲ್ಮುರು ಮಾರಣ್ಣ, ಹಿರಿಯೂರು ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
