CHITRADURGA NEWS | 03 JANUARY 2025
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿಂದು ಬೆಳಗ್ಗೆ ಏರ್ಪಡಿಸಿದ್ದ ಶಿವಶರಣ ಮೇದಾರ ಕೇತಯ್ಯನವರ ಜಯಂತಿ (ಶರಣೋತ್ಸವ) ಆಚರಣೆ ಮಾಡಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 03 | ಹತ್ತಿ ರೇಟ್ ಎಷ್ಟಿದೆ?
ಸಾನ್ನಿಧ್ಯ ವಹಿಸಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಎಲ್ಲಾ ವೃತ್ತಿ ಕಾಯಕದವರನ್ನು ಮತ್ತು ಅವರು ಮಾಡುತ್ತಿದ್ದ ವೃತ್ತಿಗೆ ಗೌರವವನ್ನು ಬಸವಣ್ಣ ಕೊಟ್ಟಿದ್ದರು. ಅವರಲ್ಲಿ ಒಬ್ಬರು ಶಿವಶರಣ ಮೇದಾರ ಕೇತಯ್ಯನವರು. ವ್ಯಕ್ತಿಗೆ ಎಷ್ಟು ಗೌರವ ಅಥವಾ ಪ್ರಾಧಾನ್ಯತೆ ಇತ್ತೋ, ವೃತ್ತಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದ ಕಾರಣ ಅಲ್ಲಿ ಯಾವುದೇ ವೃತ್ತಿಯನ್ನು ಅಗೌರವದಿಂದ ಕಾಣಲಿಲ್ಲ.
ನೂರಾರು ಕಸಬು ಮಾಡುವವರು ಅಲ್ಲಿ ನೆಲೆ ನಿಂತರು. ಈ ಎಲ್ಲರಿಗೂ ಗೌರವ ನೀಡಿದ ಬಸವಣ್ಣನವರ ಸಾಧನೆಗೆ ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಪರಿಗಣಿಸಿ ಮಾನ್ಯತೆ ನೀಡಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸ್ಮರಿಸಿಕೊಂಡರು.
ವಚನ ಸಾಹಿತ್ಯ ದೇಶದ 24 ಭಾಷೆಗಳಿಗೆ ತರ್ಜುಮೆಗೊಂಡಿದೆ. ಅದು ಪ್ರಪಂಚದ ಇತರೆ ಭಾಷೆಗಳಿಗೂ ಭಾಷಾಂತರಗೊಂ ಡಾಗ ಬಸವಣ್ಣ ಮತ್ತಿತರ ಶರಣರ ವ್ಯಕ್ತಿತ್ವವು ಈ ನಾಡಿಗೆ ತಿಳಿಯುತ್ತದೆ. ಅಂತಹ ಕೆಲಸ ಬಸವ ಸಮಿತಿ ಸೇರಿದಂತೆ ಇತರೆಯವರು ನಡೆಸಿದ್ದಾರೆ.
ಇದನ್ನೂ ಓದಿ: ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ
ಪ್ರಪಂಚದ ಬೇರೆ ಬೇರೆ ದಾರ್ಶನಿಕರು ತಮ್ಮ ತತ್ವ ಸಿದ್ಧಾಂತಗಳ ಮೂಲಕ ಪರಿಚಯವಾದರು. ಆದರೆ ಬಸವಾದಿ ಶರಣರ ವಿಚಾರಗಳು ಅಷ್ಟಾಗಿ ಪ್ರಚಾರ ಪಡೆಯದೆ ಬೆಳಕಿಗೆ ಬರಲಿಲ್ಲ. ಈಗೀಗ ಎಲ್ಲಾ ಕಡೆ ಪಸರಿಸುತ್ತಿದೆ. 12ನೇ ಶತಮಾನದ ಶರಣ ಶಿರೋಮಣಿಗಳಲ್ಲಿ ಒಬ್ಬರಾದ ಮೇದಾರ ಕೇತಯ್ಯನವರು ತಮ್ಮ ವೃತ್ತಿ ಬಿದಿರನ್ನು ಬಳಸಿ ಅನೇಕ ವಿಧವಾದ ವಸ್ತುಗಳನ್ನು ತಯಾರು ಮಾಡುತ್ತಿದ್ದರು.
ಇದಕ್ಕೆ ಕೌಶಲ್ಯ ಅಗತ್ಯವಿತ್ತು. ಅಂತಹ ಕೆಲಸದಲ್ಲಿ ನೈಪುಣ್ಯತೆ ಪಡೆದು ಆಕರ್ಷಕ ಮಾದರಿಯ ಕಲಾಕೃತಿಗಳನ್ನು ಹೆಣೆಯುತ್ತಿದ್ದರು. ಇವರು ಮಾಡಿದ ತೊಟ್ಟಿಲು ಹುಟ್ಟುವಾಗ ಬೇಕು. ನಂತರ ಸತ್ತಾಗ ಚಟ್ಟ ಕಟ್ಟಲು ಇವರ ನೆರವು ಅಗತ್ಯ. ಇಂತಹ ಕೆಲಸ ಮಾಡುತ್ತಲೇ ಕಾಯಕ, ದಾಸೋಹ, ಜಂಗಮಪ್ರೇಮಿಯಾಗಿ ಜೀವನ ನಡೆಸಿದರು.
ಆಗ ವೃತ್ತಿಗಳಾಗಿದ್ದವು ಈಗ ಕಡ್ಡಾಯವಾಗಿ ಜಾತಿಗಳಾಗಿ ಪರಿಗಣಿಸಿ ನೂರಾರು ಜಾತಿಗಳು ಸೃಷ್ಟಿಯಾಗಿರುವುದು ವಿಷಾದಕರ. ವೃತ್ತಿಪರತೆಗಿಂತ ಜಾತಿಪ್ರೇಮವೇ ಅತಿಯಾಗಿದೆ ಎಂದು ನುಡಿದರು.
ಇದನ್ನೂ ಓದಿ: ಶಿಕ್ಷಕರಿಗೆ ಸಾಕ್ಷರತೆ, ಸಂಖ್ಯಾಜ್ಞಾನ ತರಬೇತಿ ಕಾರ್ಯಾಗಾರ
ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ತಾವು ಮಾಡುವ ವೃತ್ತಿಯಲ್ಲಿ ಯಾವುದೇ ತಾರತಮ್ಯ ಎಣಿಸದೆ ಅದಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದ ಶರಣರು ತಾವು ಮಾಡುವ ಕೆಲಸವನ್ನು ತುಂಬಾ ಭಾವಪರವಶತೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು.
ಇವರು ಮಾಡುವ ಕಾಯಕಕ್ಕೆ ಎಲ್ಲಿಲ್ಲದ ಗೌರವವೂ ಇದ್ದ ಕಾರಣ ಎಂತಹುದೇ ಕೆಲಸ ಮಾಡಲು ಹಿಂಜರಿಯುತ್ತಿರಲಿಲ್ಲ. ಮೇದಾರ ಕೇತಯ್ಯನವರು ತಮ್ಮ ಬಿದಿರು ಕಾಯಕದಿಂದ ಕಲ್ಯಾಣದಲ್ಲಿ ಹೆಸರು ಪಡೆದವರು ಎಂದರು.
ಸಮಾಜದ ಮುಖಂಡರಾದ ನಾಗರಾಜ ಸಂಗಂ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ ಸೇರಿದಂತೆ ಭಕ್ತರು, ಅಭಿಮಾನಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲನೌಕರರು ಭಾಗವಹಿಸಿದ್ದರು.
ಇದನ್ನೂ ಓದಿ: 6 ತಿಂಗಳವರೆಗೆ ಮಗುವಿಗೆ ತಾಯಿಯ ಹಾಲು ಕುಡಿಸಿ | DHEO ಕೃಷ್ಣನಾಯಕ್
ನಗರದ ಗಾರೇಹಟ್ಟಿಯ ಬೃಹನ್ಮಠ ಪ್ರೌಢಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಶಿಕ್ಷಕಿ ಆಶಾರಾಣಿ, ಬಸವನಗೌಡ, ಇತರ ಸಿಬ್ಬಂದಿ ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
