CHITRADURGA NEWS | 25 December 2025
ಚಿತ್ರದುರ್ಗ: ನಸುಕಿನ 2 ಗಂಟೆ ಸುಮಾರಿಗೆ ಹಿರಿಯೂರು ಶಿರ ನಡುವೆ ಜವನಗೊಂಡನಹಳ್ಳಿ ಬಳಿ ನಡೆದ ಬಸ್ ಬೆಂಕಿ ದುರಂತ ಪ್ರಕರಣದಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ: BREAKING NEWS |ಬಸ್ಸಿಗೆ ಬೆಂಕಿ | 11ಕ್ಕಿಂತ ಹೆಚ್ಚು ಮಂದಿ ಸಜೀವ ದಹನ ? | ಹಿರಿಯೂರು ಬಳಿ ಘಟನೆ
ಲಾರಿ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವೈಡರ್ ದಾಟಿ ಬಂದು ಬಸ್ಸಿಗೆ ಡಿಕ್ಕಿಯಾಗಿದೆ.
ಬಸ್ಸಿನ ಡೀಸೆಲ್ ಟ್ಯಾಂಕಿಗೆ ಲಾರಿ ಡಿಕ್ಕಿಯಾದ ಪರಿಣಾಮ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿಯಾದ ಲಾರಿ ಚಾಲಕ ಕೂಡಾ ಮೃತಪಟ್ಟಿದ್ದಾನೆ.
ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ 32 ಜನ ಪ್ರಯಾಣಿಸುತ್ತಿದ್ದು, 9 ಜನ ಮೃತಪಟ್ಟಿದ್ದಾರೆ. ಉಳಿದವರು ಬಸ್ಸಿನಿಂದ ಜಿಗಿದು ಪಾರಾಗಿದ್ದು ಹಿರಿಯೂರು, ಶಿರಾ, ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅವಘಡದಿಂದ ಪಾರಾದ ಶಾಲಾ ಮಕ್ಕಳುಸುಟ್ಟು ಹೋದ ಬಸ್ಸಿನ ಹಿಂದೆಯ ಬೆಂಗಳೂರಿನ ದಾಸರಹಳ್ಳಿ ಖಾಸಗಿ ಶಾಲೆಯ ಮಕ್ಕಳು ದಾಂಡೆಲಿಗೆ ಪ್ರವಾಸ ತೆರಳುತ್ತಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಚೇತರಿಕೆ
ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ಸಿನ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಪಕ್ಕದ ಕಂದಕ ದಾಟಿ ಸರ್ವೀಸ್ ರಸ್ತೆಗೆ ಹೋಗಿದ್ದು ದುರಂತದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭೇಟಿ ನೀಡಿ ಕಾರ್ಯೋನ್ಮುಖರಾಗಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
