
CHITRADURGA NEWS | 05 OCTOBER 2025
ಚಿತ್ರದುರ್ಗ: ಕನ್ನಡದ ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕ ಡಾ.ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಲಂಕೇಶ್ ವಿಚಾರ ವೇದಿಕೆ ಸಂಚಾಲಕ ಜಡೇಕುಂಟೆ ಮಂಜುನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರುಡ್‍ಸೆಟ್ ಸಂಸ್ಥೆಯಿಂದ ಟ್ಯಾಲಿ(Tally) ತರಬೇತಿ
ಕನ್ನಡದ ದಲಿತಾ ಮತ್ತು ಸೃಜನಶೀಲ ಕಥಾ ಪರಪಂರೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟ ಕೀರ್ತಿ ಇವರದು. ಅನೇಕ ಸಂಸ್ಕೃತಿ ಚಿಂತನಾ ಲೇಖನಗಳನ್ನು ಬರೆಯುವ ಮೂಲಕ ಹೊಸ ತಲೆಮಾರಿನ ಲೇಖಕರಿಗೆ ಮಾರ್ಗದರ್ಶನ ಮಾಡಿ ಹೋಗಿರುವ ಗಣೇಶ್ ಅವರ ಅಗಲುವಿಕೆಯಿಂದಾಗಿ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದಿದ್ದಾರೆ.
ತನ್ನ ಮೊನಚಾದ ಭಾಷಾ ಬಳಕೆಯಿಂದ ಕನ್ನಡದ ಓದುಗರಿಗೆ ಹೊಸ ಒಳನೋಟಗಳನ್ನು ತನ್ನ ಕಥಾ ಹಂದರದ ಮೂಲಕ ಕೊಟ್ಟು ಹೋದ ಮೊಗಳ್ಳಿ ಗಣೇಶ್ ವಿಶಿಷ್ಟ ಕಥನಗಾರಿಕೆಗೆ ಹೆಸರಾದವರು.
ಇದನ್ನೂ ಓದಿ: ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ಶೇ.1 ಮೀಸಲಾತಿಗೆ ಹನುಮಂತಪ್ಪ ದುರ್ಗಾ ಒತ್ತಾಯ
ಇವರ ‘ಅತ್ತೆ,’ ‘ಬುಗುರಿ’ ಕಥಾ ಸಂಕಲನಗಳು ಕಥಾ ಲೋಕದಲ್ಲಿ ಓದುಗರನ್ನು ಪ್ರಭಾವಿಸಿವೆ. ಅಲ್ಲದೇ ವೈಚಾರಿಕೆಯ ‘ತಕರಾರು’ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದ ಪುಸ್ತಕ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
