
CHITRADURGA NEWS | 03 AUGUST 2925
ಹೊಳಲ್ಕೆರೆ: ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಬಳಿ ಭದ್ರಾ ಜಲಾಶಯಕ್ಕೆ ರೈತರು ಮತ್ತು ಕಾರ್ಯಕರ್ತರೊಂದಿಗೆ ಶಾಸಕ ಎಂ.ಚಂದ್ರಪ್ಪ ಭಾನುವಾರ ಬಾಗಿನ ಸಮರ್ಪಿಸಿದರು.
ಇದನ್ನೂ ಓದಿ: ಆಡಳಿತಕ್ಕೆ ಚುರುಕು ಮುಟ್ಟಿಸಿದ ಜಿಪಂ ಸಿಇಓ |ತಾಲೂಕುಗಳಿಗೆ ಭೇಟಿ | ಕಾಮಗಾರಿ ಪರಿಶೀಲನೆ
ನಂತರ ಮಾತನಾಡಿದ ಅವರು, ಇನ್ನು ಎರಡು ತಿಂಗಳೊಳಗೆ ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‌ಭದ್ರಾದಿಂದ ನೀರು ಹರಿಯುವುದರಲ್ಲಿ ಸಂಶಯವಿಲ್ಲವೆoದು ಭರವಸೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ 37 ಕೆರೆಗಳಿಗೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಇಲ್ಲಿಂದ ನೀರು ಹರಿಯಲಿದೆ. ಇದರಿಂದ ರೈತರ ಬಹುದಿನಗಳ ಕನಸು ನನಸಾಗಲಿದೆ. ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಬರಗಾಲವಿದೆ. ಇನ್ನು 120 ಮೀಟರ್ ಕಾಲುವೆ ಕಾಮಗಾರಿ ಪೂರ್ಣಗೊಂಡರೆ ಹೊಳಲ್ಕೆರೆ ಲೆಫ್ಟ್ ಕೆನಾಲ್‌ಗೆ ನೀರು ಬರುತ್ತದೆ. ಮುಂದೆ ಪಾವಗಡದವರೆಗೂ ನೀರು ಹರಿಯುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ಭಾಗದ ರೈತರು ಅಡ್ಡಿಪಡಿಸುತ್ತಿರುವ ಪರಿಣಾಮವಾಗಿ ಕಾಮಗಾರಿಯಲ್ಲಿ ಸ್ವಲ್ಪ ತಡವಾಗಿದೆ. ಕೋರ್ಟ್ನಲ್ಲಿ ಕೇಸಿದೆ. ಎಲ್ಲವನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳೋಣ ಎಂದು ತರಿಕೆರೆ ಶಾಸಕ ಶ್ರೀನಿವಾಸ್ ಮಾತು ಕೊಟ್ಟಿದ್ದಾರೆ. ಹಾಗಾಗಿ ರೈತರು ನಿರಾಸೆಯಾಗುವುದು ಬೇಡ.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ
ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿಯೂ ನಮ್ಮ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆಂದಿದ್ದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ರೈತರ ಪರವಾಗಿರುವ ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು.
ಹಣ ನೀಡಿ ಚಿನ್ನ ಖರೀಧಿಸಬಹುದು. ಆದರೆ ನೀರು ಸಿಗುವುದು ಕಷ್ಟವಾಗಿದೆ. ಯಾವಾಗ ನೀರು ಬರುತ್ತದೋ ಎಂದು ರೈತರು ಕಾಯುತ್ತಿದ್ದಾರೆ. 120 ಮೀಟರ್ ಚಾನಲ್ ಆದರೆ ಗಂಗಸಮುದ್ರ ಕೆರೆಗೆ ನೀರು ಬರುತ್ತದೆ. ಅಲ್ಲಿಂದ ಹೊಳಲ್ಕೆರೆ ತಾಲ್ಲೂಕಿನ 37 ಕೆರೆಗಳಿಗೂ ನೀರು ಸೇರುತ್ತದೆ ಎಂದರು.
ಇದನ್ನೂ ಓದಿ: ವಯೋನಿವೃತ್ತಿ ಹೊಂದಿದ ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್‍ಗೆ ಸನ್ಮಾನ
ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ನಾರದಮುನಿ ವಸಂತಕುಮಾರ್, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಸುರೇಶ್‌ಬಾಬು, ಮಂಜುನಾಥ್, ಚಿತ್ರಹಳ್ಳಿ ಲವಕುಮಾರ್, ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಶಿವಕುಮಾರ್, ಯಶವಂತ್‌ಕುಮಾರ್, ಮಾರುತೇಶ್, ಶ್ರೀನಿವಾಸ್, ಮಹೇಶಣ್ಣ, ಕುಮಾರಣ್ಣ, ರೂಪ ಸುರೇಶ್, ನಾಗರಾಜ್‌ಬೇದ್ರೆ, ಭದ್ರಾಮೇಲ್ದಂಡೆ ಮುಖ್ಯ ಇಂಜಿನಿಯರ್‌ಗಳಾದ ಎಫ್.ಹೆಚ್.ಲಮಾಣಿ, ಕವಿತಾ, ಬಾರಿಕರ್ ಚಂದ್ರಪ್ಪ, ನಾಗರಾಜ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
