ಮುಖ್ಯ ಸುದ್ದಿ
Congress protest: ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಆಕ್ರೋಶ | ಗೋ ಬ್ಯಾಕ್ ಘೋಷಣೆ
Published on
CHITRADURGA NEWS | 17 AUGUST 2024
ಚಿತ್ರದುರ್ಗ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ‘ಗೋ ಬ್ಯಾಕ್’ ಘೋಷಣೆ ಕೂಗಿ ಆಕ್ರೋಶ ಹಾಕಿತು.
ಜಿಲ್ಲಾಧಿಕಾರಿ ಕಚೇರಿ ಸಮೀಪ ಶನಿವಾರ ಪ್ರತಿಭಟನೆ ನಡೆಸಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ತುಳಿಯಲು ಕೇಂದ್ರದ ಎನ್ಡಿಎ ಸರ್ಕಾರ ಯತ್ನಿಸುತ್ತಿದೆ. ರಾಜ್ಯದಲ್ಲಿ ರಾಜಭವನವನ್ನು ರಾಜ್ಯಪಾಲರು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕ್ಲಿಕ್ ಮಾಡಿ ಓದಿ: ತಡರಾತ್ರಿ ಚಿರತೆಯ ಅಟ್ಟಹಾಸ | ಬೆಚ್ಚಿದ ಗ್ರಾಮಸ್ಥರು
ಕಾಂಗ್ರೆಸ್ ಮುಖಂಡರಾದ ಬಿ.ಟಿ.ಜಗದೀಶ್, ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಸಂಪತ್ ಕುಮಾರ್, ಖುದ್ದೂಸ್, ಪ್ರಕಾಶ್ ರಾಮನಾಯ್ಕ್ ಭಾಗವಹಿಸಿದ್ದರು.
Continue Reading
Related Topics:BJP, congress, Declaration, Go Back, Governor, Outrage, ಆಕ್ರೋಶ, ಕಾಂಗ್ರೆಸ್, ಗೋ ಬ್ಯಾಕ್, ಘೋಷಣೆ, ಬಿಜೆಪಿ, ರಾಜ್ಯಪಾಲರು
Click to comment