CHITRADURGA NEWS | 08 JULY 2024
ಚಿತ್ರದುರ್ಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಇದೇ ಜುಲೈ10ರಂದು ಚಿತ್ರದುರ್ಗ, ವಿಜಯ ನಗರ ಹಾಗೂ ತುಮಕೂರು ಜಿಲ್ಲೆಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: DENGUE; ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್ | ಡೆಂಘಿ ಸೊಳ್ಳೆ ಇಲ್ಲಿಲ್ಲ ಅಂತಿರಾ..!
ಸಚಿವರು ಅಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರುನಿಂದ ಹೊರಟು ಬೆಳಿಗ್ಗೆ 9ಕ್ಕೆ ಚಿತ್ರದುರ್ಗಕ್ಕೆ ಆಗಮಿಸುವರು. ಬೆಳಿಗ್ಗೆ 9.30ಕ್ಕೆ ಚಿತ್ರದುರ್ಗದಿಂದ ಹೊರಟು ಬೆಳಿಗ್ಗೆ 11ಕ್ಕೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರು ಹೆಚ್.ಬಿ.ಹಳ್ಳಿ ತಾಲ್ಲೂಕು ಮರಿಯಮ್ಮನಹಳ್ಳಿಯ ಆಗಮಿಸಿ, ಪಾವಗಡ ಕುಡಿಯುವ ನೀರು ಯೋಜನೆಯ ಜಾಕ್‍ವೆಲ್ ಸೈಟ್‍ಗೆ ಭೇಟಿ ನೀಡಿ, ಸ್ಥಳ ಪರಿವೀಕ್ಷಣೆ ಮಾಡುವರು.
ಬೆಳಿಗ್ಗೆ 11.30ಕ್ಕೆ ಮರಿಯಮ್ಮನಹಳ್ಳಿಯಿಂದ ಹೊರಟು ಮಧ್ಯಾಹ್ನ 12ಕ್ಕೆ ಕೂಡ್ಲಿಗಿ ತಾಲ್ಲೂಕು ಶಿವಪುರ ಗ್ರಾಮದ ಕುಡಿಯುವ ನೀರು ಶುದ್ಧೀಕರಣ ಸಂಸ್ಕರಣಾ ಘಟಕಕ್ಕೆ ಭೇಟಿ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 1ಕ್ಕೆ ಕೂಡ್ಲಿಗಿಯಿಂದ ಹೊರಟು ನಾಯಕನಹಟ್ಟಿ-ಚಳ್ಳಕೆರೆ-ಪಾವಗಡ ರಸ್ತೆ ಮೂಲಕ ಚಳ್ಳಕೆರೆಯ ಕ್ಯಾದಿಗುಂಟೆ (ಕೆಂಚಮ್ಮನಹಳ್ಳಿ ಗೇಟ್) ಆಗಮಿಸಿ, ಐಪಿಎಸ್-3 ಕ್ಯಾದಿಗುಂಟೆ (ಕೆಂಚಮ್ಮನಹಳ್ಳಿ ಗೇಟ್) ಯೋಜನೆಯ ಪ್ರಗತಿ ಪರಿವೀಕ್ಷಣೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.
ಇದನ್ನೂ ಓದಿ: ZEE KANNADA; ಝೀ ಕನ್ನಡದ ಮಹಾನಟಿ ಶೋ | ಚಿತ್ರದುರ್ಗದ ಗಗನ ಭಾರಿ ಫೈನಲ್‍ಗೆ ಆಯ್ಕೆ
ಮಧ್ಯಾಹ್ನ 3.30ಕ್ಕೆ ಪಾವಗಡದ ಎಂ.ಬಿ.ಆರ್.-2 ಪರಿವೀಕ್ಷಣೆ ಮಾಡಿ ನಂತರ ಸಂಜೆ 4ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
