
CHITRADURGA NEWS | 13 JUNE 2024
ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಾರಿನಲ್ಲಿ ಕರೆದೊಯ್ದಿದ್ದ ಚಾಲಕ ರವಿಶಂಕರ್ ಗುರುವಾರ ಸಂಜೆ ನಗರದ ಡಿವೈಎಸ್‍ಪಿ ಕಚೇರಿಗೆ ಬಂದು ಶರಣಾಗಿದ್ದಾರೆ.
ವೃತ್ತಿಯಲ್ಲಿ ಕಾರು ಚಾಲಕರಾಗಿರುವ ಆಯಿತೋಳು ಕುರುಬರಹಟ್ಟಿಯ ರವಿಶಂಕರ್ ಜೂ.8 ರಂದು ಇಟಿಯೋಸ್ ಕಾರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ದರ್ಶನ್, ಜಗ್ಗ, ಅನು ಹಾಗೂ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಕರೆದೊಯ್ದಿರುವ ಬಗ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅನಗತ್ಯವಾಗಿ ಎಂಎಲ್‍ಸಿ ಮಾಡಬೇಡಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಬಾಡಿಗೆಗೆ ಕಾರು ಕೇಳಿದ ಕಾರಣಕ್ಕೆ ರವಿ ಬಾಡಿಗೆ ಮಾತನಾಡಿಕೊಂಡು ಬೆಂಗಳೂರಿಗೆ ತೆರಳಿದ್ದರು. ಕುಂಚಿಗನಾಳು ಬಳಿಯ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕಿನಿಂದ ರಘು, ಜಗ್ಗು, ಅನು, ರೇಣುಕಾಸ್ವಾಮಿ ಕಾರು ಹತ್ತಿದ್ದಾಗಿ ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆ ಹೆದರಿಕೊಂಡಿದ್ದ ರವಿಶಂಕರ್ ಸ್ನೇಹಿತರ ಬಳಿ ತಾನೇ ಕಾರಿನಲ್ಲಿ ಕರೆದುಕೊಂಡು ಹೋಗಿರುವ ವಿಚಾರ ತಿಳಿಸಿ ಸಾಯುವಷ್ಟು ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತಿಪ್ಪಾರೆಡ್ಡಿ ಅಂದ್ರೆ ನೀವೇನಾ..!? | ಪ್ರತಿಭಟನೆ ಮಾಡಿದ್ದಕ್ಕೆ ಬಂತು ಬೆದರಿಕೆ ಕರೆ
ಇಂದು ಸಂಜೆ ಟ್ಯಾಕ್ಸಿ ಚಾಲಕರ ಸಂಘದ ಮುಖಂಡರ ಜೊತೆ ಮಾತನಾಡಿ, ಅವರ ಸಲಹೆಯಂತೆ ಸ್ವಯಂ ಬಂದು ಡಿವೈಎಸ್‍ಪಿ ಕಚೇರಿಯಲ್ಲಿ ಶರಣಾಗಿದ್ದಾರೆ.
ಈ ಮೂಲಕ ನಟ ದರ್ಶನ್ ಗ್ಯಾಂಗಿನಿಂದ ಕೊಲೆಯಾಗಿರುವ ರೇಣುಕಾಸ್ವಾಮಿಯನ್ನು ಅವರ ಅಭಿಮಾನಿಗಳ ಮೂಲಕವೇ ಬೆಂಗಳೂರಿಗೆ ಕರೆಯಿಸಿಕೊಂಡಿರುವ ಮಾಹಿತಿ ಹೊರ ಬಿದ್ದಿದೆ.
ಇದನ್ನೂ ಓದಿ: ಭದ್ರಾ, ರೈಲು ಮಾರ್ಗ ಕಾಮಗಾರಿಗೆ ಆದ್ಯತೆ | ಸಂಸದ ಗೋವಿಂದ ಎಂ.ಕಾರಜೋಳ
ಸದ್ಯ ಚಿತ್ರದುರ್ಗ ಪೊಲೀಸರ ವಶದಲ್ಲಿರುವ ರವಿ, ಪ್ರಕರಣ ದಾಖಲಾಗಿರುವ ಬೆಂಗಳೂರು ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗಳಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯಬೇಕಿದೆ.
ಬಾಡಿಗೆ ವಾಪಾಸು ಬಂದಿದ್ದ ರವಿ:
ಘಟನೆ ಬಗ್ಗೆ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಮೋಹನ್ ಸುದ್ದಿಗಾರರ ಜೊತೆಗೆ ಮಾತನಾಡಿದ್ದು, ಬಾಡಿಗೆಗೆ ಕಾರು ಕೇಳಿದ ಕಾರಣಕ್ಕೆ ರವಿ ಇಲ್ಲಿಂದ ಬಾಡಿಗೆ ಮಾತನಾಡಿಕೊಂಡು ಕರೆದೊಯ್ದಿದ್ದಾರೆ. ಇದರಾಚೆ ಪ್ರಕರಣದ ಯಾವ ಮಾಹಿತಿಯೂ ಆತನಿಗೆ ತಿಳಿದಿಲ್ಲ.
ಇದನ್ನೂ ಓದಿ: ಜೂನ್ 16 ರಂದು ಡಾ.ದೊಡ್ಡಮಲ್ಲಯ್ಯ ಅವರ ಕಂಡುಂಡ ಕಥೆ ಹಾಗೂ ಮೂಕ ಲಹರಿ ಕೃತಿ ಬಿಡುಗಡೆ
ಬೆಂಗಳೂರಿನ ಕಾರ್ ಶೆಡ್‍ವರೆಗೆ ಕಾರು ತೆಗೆದುಕೊಂಡಿದ್ದು, ಅಲ್ಲಿ ರೇಣುಕಾಸ್ವಾಮಿಯನ್ನು ಇಳಿಸಿದಾಗ ಸುಮಾರು 30 ಜನ ಇದ್ದರು. ಒಳಗೆ ರಾಘವೇಂದ್ರ ಮತ್ತು ರೇಣುಕಾಸ್ವಾಮಿಯನ್ನು ಮಾತ್ರ ಬಿಟ್ಟುಕೊಂಡು, ಉಳಿದವರನ್ನು ಹೊರಗೆ ಕಳಿಸಿದ್ದಾರೆ. ಆನಂತರ ರಾಘವೇಂದ್ರ ಕಾರು ಚಾಲಕ ರವಿಗೆ 4 ಸಾವಿರ ಬಾಡಿಗೆ ಹಣ ಕೊಟ್ಟು ಕಳಿಸಿದ್ದಾನೆ ಎಂದು ವಿವರಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
