
CHITRADURGA NEWS | 16 FEBRUARY 2024
| ರಾಜು ಬೇಡರೆಡ್ಡಿಹಳ್ಳಿ
ಚಿತ್ರದುರ್ಗ: ಬುಡಕಟ್ಟು ಸಮುದಾಯದ ಶ್ರೀ ದೊಡ್ಡ ತಿರುಮಲ ದೇವರು, ಶ್ರೀ ಕೊತ್ತಲ ಬೊಮ್ಮದೇವರು ಸೇರಿ 12 ಪೆಟ್ಟಿಗೆ ದೇವರುಗಳ ಗುಗ್ಗರಿ ಹಬ್ಬದ ಮಹೋತ್ಸವ ಶುಭ ಶುಕ್ರವಾರದಂದು ಪ್ರಾರಂಭವಾಗಿದೆ. ಮೂರು ದಿನ ಬುಡಕಟ್ಟು ಸಂಸ್ಕೃತಿ ಅನಾವರಣಗೊಳ್ಳುತ್ತದೆ.
ಶುಕ್ಲಗಿರಿ ಪರ್ವತ ಸೂರೇ ಸಿಂಹಾಸನಾಧೀಶ ಕೋರಿ ಯರಮಂಚ ನಾಯಕ, ಮ್ಯಾಸ ಮಂಡಲದ ಕುಲ ತಿಲಕ, ಸಾಂಸ್ಕೃತಿಕ ವೀರ, ಬುಡಕಟ್ಟು ನಾಯಕ, ಪರಾಕ್ರಮಿ, ಸಾಹಸಮಯಿ, ಶತೃಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಶೂರ. ಕೋರಿ ಯರಮಂಚ ನಾಯಕ ಸದ್ಧರ್ಮ ಸಿಂಹಾಸನದ ಉದಿಪದಿಯ ಆಚಾರ- ವಿಚಾರಕ್ಕೆ ಒಳಪಟ್ಟವರಿಂದ ಗುಗ್ಗರಿ ಹಬ್ಬ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಏಳಜ್ಜನರು, ಕಾಮಗೇತಿ ದಳವಾಯಿಗಳು, ಮೂರು ಜನ ನಾಯಕರು, ಮೂರು ಜನ ದಳವಾಯಿಗಳು, ಗುರುಪೂಜಾರಿಗಳು 101 ಮಂದಲ, 101 ಮಲ್ಲನಾಯಕರು ಸೇರಿ ಈ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲು ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಫೆ.16ರಿಂದ 3 ದಿನ ಗುಗ್ಗರಿ ಹಬ್ಬ ನಡೆಸಲಾಗುತ್ತದೆ. ಗುಗ್ಗರಿ ಹಬ್ಬದಲ್ಲೆ ಮ್ಯಾಸ ನಾಯಕರ ಹುರುಳಿ ಬತ ಅತ್ಯಂತ ಆಕರ್ಷಣೆ.
ಇದನ್ನೂ ಓದಿ: ಹಿರಿಯೂರು ಜನತೆಗೆ ಗುಡ್ ನ್ಯೂಸ್ | 16ರಿಂದ ಇ-ಆಸ್ತಿ ಖಾತಾ ಆಂದೋಲನ
16 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿಯಲ್ಲಿರುವ ಕೋರಿ ಯರಮಂಚ ನಾಯಕ ಮಹಾ ಸಂಸ್ಥಾನದಕ್ಕೆ ಯರಗೋಡ್ಲಯ್ಯನ ಜನ್ನಿ ಆಕಳ ಮೀಸಲು ಹೂವಿನ ಜೋಳಿಗೆ ತರಲಾಗುತ್ತದೆ. ಬಳಿಕ ಯರಪೋತು ಸೇವೆಯನ್ನ ಕೈಗೊಳ್ಳಲಾಗುತ್ತದೆ ನಂತ್ರ ದೇವರಿಗೆ ಕೈಮುಗಿಯುವ ಮೂಲಕ ಹೊಸಹಳ್ಳಿ ಸಮೀಪದ ಬಂಜ ದೀಪಲು ಸ್ಥಳಕ್ಕೆ ದೇವರನ್ನ ಗಂಗಾ ಪೂಜೆಗೆ ಕೋಡಿಹಳ್ಳಿ ಮಾರ್ಗವಾಗಿ ತೆರಳುತ್ತಾರೆ.
17 ರಂದು ಗಂಗಾಪೂಜೆ ನೆರವೇರಿಸಲಾಗುತ್ತದೆ. ಅಲ್ದೆ ದೀಪಾರಾಧನೆ ಮಾಡಲಾಗುತ್ತದೆ. ಬಳಿಕ ದಳವಾಯಿ ಹಾಗೂ ಏಳುಅಜ್ಜನವರು ಮುತ್ತಿನ ಬಸವಂತಲ ಆಡುವುದು ಎಲ್ಲರ ಕಣ್ಮನ ಸೆಳೆಯುವಂತಿರುತ್ತದೆ. ನಂತರ ದಾಸೋಹ ಮುಗಿದ ಬಳಿಕ ಹೊಸಹಳ್ಳಿ, ತಳಕು, ಮನ್ನೇಕೋಟೆ ಗ್ರಾಮಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬೇಡರೆಡ್ಡಿಹಳ್ಳಿ ಗ್ರಾಮಕ್ಕೆ ದೇವರುಗಳನ್ನ ತರಲಾಗುತ್ತದೆ.
ಇದನ್ನೂ ಓದಿ: ವಯಸ್ಸಾಗಿದ್ದರೂ ಸುಮ್ಮನೆ ಕೂತಿಲ್ಲ | ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್

18 ರಂದು ಬೆಳಿಗ್ಗೆ ಸೂರ್ಯನ ಮೊಕ್ಕು (ಮುಗಿಯುವುದು) , ಯರಪೋತು ಸೇವೆ ಸೈತ್ಯ ಬಿಡುವ ಕಾರ್ಯಕ್ರಮ ಜರುಗಿಸಲಾಗುತ್ತದೆ. ನಂತರ ಭಕ್ತಾದಿಗಳು ತಂದ ಅಕ್ಕಿ ಅಳೆಯುವುದು, ಸಂಜೆ ದೇವರ ಎತ್ತುಗಳನ್ನು ಓಡಿಸುವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ.
ಇನ್ನೂ ಈ ಗುಗ್ಗರಿ ಹಬ್ಬದ ಮಹೋತ್ಸವಕ್ಕೆ ಮ್ಯಾಸ ಮಂಡಲದ ಚಿತ್ರದುರ್ಗ, ಚಳ್ಳಕೆರೆ, ಜಗಳೂರು, ಕೂಡ್ಲಿಗಿ, ಮೊಳಕಾಲ್ಮೂರು, ಆಂಧ್ರದ ರಾಯದುರ್ಗ ತಾಲ್ಲೂಕು ಸೇರಿ ಹಲವು ಕಡೆಗಳಿಂದ ಸಾವಿರಾರು ಜನರು ಸಾಕ್ಷಿಯಾಗುತ್ತಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
