
ಚಿತ್ರದುರ್ಗ ನ್ಯೂಸ್.ಕಾಂ: ಹೊಸದುರ್ಗ ತಾಲೂಕಿನ ವಿವಿಧಡೆ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಭಾನುವಾರ ರಾತ್ರಿ 8.30ರ ಸುಮಾರಿಗೆ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಕ್ರಾಸ್ ಬಳಿ ಸಾರ್ವಜನಿಕರಿಗೆ ಕಾಣಿಸಿಕೊಂಡಿದ್ದು, ಬ್ಯಾಟರಿ ಬೆಳಕಿನಲ್ಲಿ ವೀಡಿಯೋ ಕೂಡಾ ಮಾಡಿದ್ದಾರೆ.
ಹೊಸದುರ್ಗ ಗಡಿ ಭಾಗದ, ಹಿರಿಯೂರು ಹೊಸದುರ್ಗ ರಸ್ತೆಯಲ್ಲಿ ವಾಣಿವಿಲಾಸ ಸಾಗರ ಬಳಿಯ ಗ್ರಾಮಗಳಾದ ತಳವಾರಹಟ್ಟಿ ಬಳಿಯೂ ಸಾರ್ವಜನಿಕರಿಗೆ ಚಿರತೆಯ ದರ್ಶನವಾಗಿದೆ.

ಇದನ್ನೂ ಓದಿ: ಹಿರಿಯೂರಿನಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ
ದಸರಾ ಹಬ್ಬ ಹಾಗೂ ಆನಂತರದ ಎರಡು ದಿನಗಳ ಕಾಲ ಹೊಸದುರ್ಗ ತಾಲೂಕಿನ ಗಡಿ ಗ್ರಾಮ ನಾಕೀಕೆರೆ ಬಳಿಯೂ ಚಿರತೆಯ ಮರಿ ಕಾಣಿಸಿಕೊಂಡಿತ್ತು.
ರಾತ್ರಿ ವೇಳೆ ಈ ಸರಹದ್ದಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ರಾತ್ರಿ ವೇಳೆ ಜಮೀನುಗಳಿಗೆ ತೆರಳಿ ನೀರು ಹಾಯಿಸುವುದು ಚಿರತೆಯ ಭಯದಲ್ಲಿ ಕಷ್ಟವಾಗುತ್ತಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
