ಚಿತ್ರದುರ್ಗ ನ್ಯೂಸ್.ಕಾಂ: ಮದಕರಿ ನಾಯಕರ ಹೊಸ ಭಾವಚಿತ್ರ ಈಗ ಹೆಚ್ಚು ಸದ್ದು ಮಾಡುತ್ತಿದೆ. ಈಗ ಇರುವ ಮದಕರಿ ನಾಯಕ ಚಿತ್ರ ತುಂಬಾ ವಯಸ್ಸಾದಂತೆ ಕಾಣಿಸುತ್ತಿದೆ. ಆದರೆ, ಮದಕರಿ ನಾಯಕರು ಜೀವಿಸಿದ್ದು 37 ವರ್ಷ ಮಾತ್ರ. ಈ ಕಾರಣಕ್ಕೆ ಇಷ್ಟು ದಿನ ಮದಕರಿ ನಾಯಕರ ಭಾವಚಿತ್ರದ ಬಗ್ಗೆ ಸಣ್ಣದಾಗಿ ಚರ್ಚೆ ನಡೆಯುತ್ತಲೇ ಇತ್ತು.
ಆದರೆ, ಚಿತ್ರದುರ್ಗದ ಸಾಹಿತಿಗಳು, ಸಂಶೋಧರು, ಇತಿಹಾಸಕಾರರು, ಸಮಾಜದ ಹಿರಿಯರು ಸೇರಿ ಕಲಾವಿದ ಕ್ರಿಯೇಟಿವ್ ವೀರೇಶ್ ಅವರ ಮೂಲಕ ಯುವ ಮದಕರಿ ನಾಯಕರ ಚಿತ್ರವೊಂದನ್ನು ರಚಿಸಿ, ಚಿತ್ರಟ ಸುದೀಪ್ ಅವರಿಂದ ಬಿಡುಗಡೆ ಮಾಡಿಸಿದ್ದಾರೆ.
ಇದನ್ನೂ ಓದಿ: ನಾಡದೊರೆ ಮದಕರಿ ನಾಯಕರ ಅದ್ದೂರಿ ಜಯಂತ್ಯುತ್ಸವ
ಇದರ ಜೊತೆಗೆ ಚಿತ್ರದುರ್ಗದ ಮತ್ತೋರ್ವ ಕಲಾವಿದ ಮಹಾಂತೇಶ್ ತ್ರಿವಿಕ್ರಮ ಕೂಡಾ ನಾಳೆ ನಡೆಯುತ್ತಿರುವ ಮದಕರಿ ನಾಯಕರ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಅವರ ಕಲ್ಪನೆಯಲ್ಲಿ ಮದಕರಿ ನಾಯಕರ ಮತ್ತೊಂದು ಚಿತ್ರ ರಚಿಸಿದ್ದು, ಅದೂ ಕೂಡಾ ಆಕರ್ಷಕವಗಿದೆ.
ಮದಕರಿ ಜಯಂತಿಗಾಗಿಯೇ ಹವ್ಯಾಸಿ ಕಲಾವಿದರಾಗಿರುವ ಜೋಗಿಮಟ್ಟಿ ನಗರದ ಮಹಂತೇಶ್ ತ್ರಿವಿಕ್ರಮ ಅವರ ಕೈಯಲ್ಲಿ ಮದಕರಿ ನಾಯಕರ ಯುದ್ಧ ವಿಜಯೋತ್ಸವದ ಅದ್ಭುತ ಚಿತ್ರ ಮೂಡಿ ಬಂದಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
