
ಚಿತ್ರದುರ್ಗ ನ್ಯೂಸ್: ನೂಲು ಹುಣ್ಣಿಮೆ ಸಂದರ್ಭದಲ್ಲಿ ಬರುವ ಹಿಂದುಗಳ ಪವಿತ್ರ ಹಬ್ಬ ರಕ್ಷಾಬಂಧನವನ್ನು ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಿದರೂ ಅದರ ಭಾವ ಮಾತ್ರ ಒಂದೇ ಆಗಿರುತ್ತದೆ.
ಅಣ್ಣ-ತಂಗಿಯರ ಪವಿತ್ರ ಬಂಧನದ ಸಂದೇಶ ಸಾರುವ ಹಬ್ಬವನ್ನು ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಗೌರಿ ಹಬ್ಬಕ್ಕೂ ಮೊದಲ ಅಣ್ಣ ತಂಗಿಗೆ ಕೊಡುವ ಕಾಯಿಕಣ ಅಥವಾ ಬಾಗಣದ ರೂಪದಲ್ಲೂ ಆಚರಣೆ ಮಾಡಲಾಗುತ್ತದೆ.
ಅಣ್ಣನಾದವನು ತಂಗಿಗೆ, ಸೀರೆ, ಕುಪ್ಪಸ, ಹರಿಶಿಣ, ಕುಂಕುಮ, ಬಳೆ, ಹಣ್ಣು, ಕಾಯಿ ಹೀಗೆ ನಾನಾ ರೀತಿಯ ಸಾಂಪ್ರದಾಯಿಕ ವಸ್ತುಗಳ ಜೊತೆಗೆ ಕೆಲವೊಮ್ಮ ಹಣ ಇತ್ಯಾದಿ ಕೊಡುಗೆಗಳನ್ನು ನೀಡುವುದು ಸಂಪ್ರದಾಯ.
ದೇಶದ ಹಲವು ಭಾಗಗಳಲ್ಲಿ ಅಣ್ಣನಿಗೆ ತಂಗಿ ಅಥವಾ ತಮ್ಮನಿಗೆ ಅಕ್ಕ ಕುರಿಸಿ ಆರತಿ ಬೆಳಗಿ, ತಿಲಕ ಹಚ್ಚಿ ರಾಕಿ ಕಟ್ಟುವುದು ಒಂದು ವಿಶಿಷ್ಟ ಆಚರಣೆ. ಹೀಗೆ ರಾಖಿ ಕಟ್ಟಿಸಿಕೊಂಡ ಅಣ್ಣ ತಂಗಿಗೆ ವಿಶೇಷ ಉಡುಗೊರೆ ಕೊಡುವುದು ವಾಡಿಕೆ.
ಇಂದು ದೇಶಾದ್ಯಂತ ರಕ್ಷಾಬಂಧನ ಕಾರ್ಯಕ್ರಮ ನಡೆಯುತ್ತಿದ್ದು, ಕೆಲ ಸಂಘಟನೆಗಳು ಈ ಆಚರಣೆಗೆ ಬೇರೆಯದ್ದೇ ಸ್ವರೂಪ ನೀಡಿ

ರುವುದು ಗಮನಾರ್ಹ. ಹಿಂದೂಪರ ಸಂಘಟನೆಗಳಾದ ಆರೆಸ್ಸೆಸ್ಸ್, ವಿಶ್ವಹಿಂದೂ ಪರಿಷತ್, ಬಜರಂಗದಳ, ಎಬಿವಿಪಿ, ಬಿಜೆಪಿ ಇತರೆ ಸಂಘಟನೆಗಳಲ್ಲಿ ಪರಸ್ಪರ ಎಲ್ಲರೂ ರಾಖಿ ಕಟ್ಟಿಕೊಳ್ಳುವ ಮೂಲಕ ರಾಷ್ಟ್ರ ರಕ್ಷಣೆಗೆ ಸಂಕಲ್ಪ ಮಾಡುವುದು ವಿಶೇಷ.
ಚಿತ್ರದುರ್ಗ ನಗರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾವಾಹಿನಿ ಸದಸ್ಯರು ಗುರುವಾರ ಬೆಳಗ್ಗೆ ನಗರಸ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಕರ್ತವ್ಯ ನಿರತ ಪೊಲೀಸರು ಸೇರಿದಂತೆ ಹಲವರಿಗೆ ರಕ್ಷೆ ಕಟ್ಟಿ ಸಿಹಿ ತಿನ್ನಿಸಿದರು.
ಇನ್ನೂ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕಾರ್ಯಕರ್ತರು ಕೂಡಾ ಅಧಿಕಾರಿಗಳು, ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು ಸೇರಿದಂತೆ ಸಮಾಜದ ನಾನಾ ವಲಯಗಳಲ್ಲಿ ಕೆಲಸ ಮಾಡುವವರಿಗೆ ರಕ್ಷೆ ಕಟ್ಟಿದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

