
CHITRADURGA NEWS | 31 JULY 2024
ಚಿತ್ರದುರ್ಗ: ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಿರೇಗುಂಟನೂರು ಶಾಖಾ ವ್ಯಾಪ್ತಿಯಲ್ಲಿ ಹಿರೆಗುಂಟನೂರು ಗ್ರಾಮದಿಂದ ಗುತ್ತಿನಾಡು ಗ್ರಾಮದವರೆಗೆ 11 ಕೆ.ವಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 1 ರಿಂದ 8 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ವರೆಗೆ ವಿದ್ಯುತ್ ವ್ಯತ್ಯಯ(POWER CUT)ವಾಗಲಿದೆ.
ಕ್ಲಿಕ್ ಮಾಡಿ ಓದಿ: Malladihalli Raghavendra Swamiji: ಮಲ್ಲಾಡಿಹಳ್ಳಿಯಲ್ಲಿ ರಾಘವೇಂದ್ರ ಸ್ವಾಮೀಜಿ ಪುಣ್ಯಾರಾಧನೆ | ಬೃಂದಾವನ ದರ್ಶನಕ್ಕೆ ವ್ಯವಸ್ಥೆ
ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: 66/11 ಕೆವಿ ಹಿರೆಗುಂಟನೂರು ವಿವಿ ಕೇಂದ್ರದಿಂದ ಸರಬರಾಜಾಗುವ 11 ಕೆವಿ ಮಾರ್ಗದ ಎಫ್-9 ಸೀಬಾರ ಮತ್ತು ಎಫ್-10 ಬೀರಾವರ ಎನ್‌ಜೆವೈ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ವಿದ್ಯುತ್ ಅಡಚರಣೆಯಾಗುವ ಪ್ರದೇಶಗಳು: 66/11 ಕೆವಿ ಹಿರೇಗುಂಟನೂರು ವ್ಯಾಪ್ತಿಯ ಹಿರೇಗುಂಟನೂರು ಗೊಲ್ಲರಹಟ್ಟಿ, ಚಿಕ್ಕಪುರ, ಸೀಬಾರ, ಗುತ್ತಿನಾಡು, ಈಚಲನಾಗೇನಹಳ್ಳಿ, ಹುಣಸೆಕಟ್ಟೆ, ಸಾದರಹಳ್ಳಿ, ಕೆ.ಬಳ್ಳೆಕಟ್ಟೆ ಹಾಗೂ ಬೀರಾವರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: Jobs; ಯೋಜನಾ ಸಂಯೋಜಕರ ಹುದ್ದೆಗೆ ಅರ್ಜಿ ಅಹ್ವಾನ
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
