CHITRADURGA NEWS | 30 DECEMBER 2025
ಹಗಲು ಮತ್ತು ರಾತ್ರಿಯ ಪ್ರತಿಗಂಟೆಯಲ್ಲಿ ಕೆಲಸಗಳನ್ನು ನಿರ್ವಹಿಸಲು ಶಾಸ್ತ್ರಗಳು ಕೆಲವು ನಿಯಮಗಳನ್ನು ಸೂಚಿಸಿವೆ. ದಿನವಿಡೀ ನಮ್ಮ ಕ್ರಿಯೆಗಳು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ. ಅದಕ್ಕಾಗಿ ಸೂಕ್ತವಲ್ಲದ ಸಮಯದಲ್ಲಿ ತಪ್ಪು ಕೆಲಸಗಳನ್ನು ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿಯಲ್ಲಿ ಮೊಸರು ತಿನ್ನುವುದು, ಉಗುರು ಅಥವ ಕೂದಲು ಕತ್ತರಿಸುವುದು ಮತ್ತು ಬಟ್ಟೆಗಳನ್ನು ಹೊಲಿಯುವುದು ಮುಂತಾದ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ.
ಈ ನಿಯಮಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತವೆ. ಆದರೆ, ಮಹಿಳೆಯರು, ವಿಶೇಷವಾಗಿ ರಾತ್ರಿ ಮಲಗುವ ಮೊದಲು ತಪ್ಪಿಸಬೇಕಾದ ಕೆಲವು ಅಭ್ಯಾಸಗಳಿವೆ. ಇದು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ ಅಂತೆ ಮತ್ತು ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಮಹಿಳೆಯರು ರಾತ್ರಿಯಲ್ಲಿ ಯಾವ ಕೆಲಸಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ತೆರೆದ ಕೂದಲಿನೊಂದಿಗೆ ಮಲಗುವುದು
ಮಹಿಳೆಯರು ರಾತ್ರಿಯಲ್ಲಿ ಕೂದಲನ್ನು ತೆರೆದು ಮಲಗಬಾರದು, ವಿಶೇಷವಾಗಿ ಒಂಟಿಯಾಗಿ ಮಲಗುವಾಗ. ಸಡಿಲ ಕೂದಲು ಕೆಟ್ಟ ಶಕ್ತಿಯನ್ನು ಆಹ್ವಾನಿಸಬಹುದು ಎಂದು ನಂಬಲಾಗಿದೆ.
ಸುಗಂಧದ್ರವ್ಯ ಅಥವಾ ಕಾಜಲ್ ಹಚ್ಚಿಕೊಂಡು ಮಲಗುವುದು
ರಾತ್ರಿಯಲ್ಲಿ ಸುಗಂಧದ್ರವ್ಯವನ್ನು ಹಾಗೂ ಕಣ್ಣಿಗೆ ಕಾಜಲ್ ಹಚ್ಚುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಸುಗಂಧದ್ರವ್ಯದ ವಾಸನೆಯು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಹಾಗೂ ಕಪ್ಪು ಕಾಜಲ್ ದುಷ್ಟ ಶಕ್ತಿಗಳನ್ನು ಆಹ್ವಾನಿಸುತ್ತದೆ ಎನ್ನಲಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಅವುಗಳನ್ನು ಬಳಸುವುದನ್ನು ತಪ್ಪಿಸಿ.
ರಾತ್ರಿಯಲ್ಲಿ ತಲೆಗೂದಲನ್ನು ಬಾಚುವುದು
ಅನೇಕ ಮಹಿಳೆಯರು ಮಲಗುವ ಮುನ್ನ ತಮ್ಮ ಕೂದಲನ್ನು ಬಾಚಿಕೊಳ್ಳುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಕೂದಲನ್ನು ಬಾಚಿಕೊಳ್ಳುವುದು ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಕಡಿಮೆಯಾಗುತ್ತದೆ.
ವಾದಗಳಿಂದ ದೂರವಿರಿ
ರಾತ್ರಿಯಲ್ಲಿ ಜಗಳವಾಡುವುದು ಅಥವ ವಾದಿಸುವುದನ್ನು ತಪ್ಪಿಸಬೇಕು. ವಾಸ್ತವವಾಗಿ, ಮುಸ್ಸಂಜೆಯ ನಂತರ ಅಂತಹ ಚಟುವಟಿಕೆಗಳನ್ನು ತಪ್ಪಿಸಬೇಕು. ರಾತ್ರಿಯ ವೇಳೆ ಜಗಳವಾಡುವುದು ನಿದ್ರೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಮಾನಸಿಕ ಒತ್ತಡ ಮತ್ತು ಮನೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತವೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
