By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ರೈತರ ತರಬೇತಿ ಕಾರ್ಯಕ್ರಮ
    ರೈತರು ಹನಿ ನೀರಾವರಿ, ಸಾವಯವ ಪದ್ಧತಿ ಅಳವಡಿಸಿಕೊಳ್ಳಿ | ಕೃಷ್ಣಮೂರ್ತಿ
    9 hours ago
    ಟಿ. ರಘುಮೂರ್ತಿ
    ತಪ್ಪದೇ ಎಲ್ಲಾ ರೈತರು ಬೆಳೆವಿಮೆ ನೋಂದಾಯಿಸಿಕೊಳ್ಳಿ | ಶಾಸಕ ಟಿ.ರಘುಮೂರ್ತಿ
    9 hours ago
    ಸುದ್ದಿಗೋಷ್ಠಿಯಲ್ಲಿ ಜೆ.ಯಾದವರೆಡ್ಡಿ ಮಾತನಾಡಿದರು
    ಕರ್ನಾಟಕದ ಎಲ್ಲಾ ಸಂಸದರುಗಳ ನಿರ್ಲಕ್ಷೆಯಿಂದ ಭದ್ರಾ ಮೇಲ್ದಂಡೆ ಯೋಜನೆ ತಡವಾಗಿದೆ | ಯಾದವರೆಡ್ಡಿ
    21 hours ago
    ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿಗೆ ಇನ್ನೋವ ಕಾರು ಗಿಫ್ಟ್ ನೀಡಿದ ಭಕ್ತ
    ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿಗೆ ಇನ್ನೋವ ಕಾರು ಗಿಫ್ಟ್ ನೀಡಿದ ಭಕ್ತ 
    21 hours ago
    ಟಿ. ರಘುಮೂರ್ತಿ
    ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡನೀಯ | ಶಾಸಕ ಟಿ.ರಘುಮೂರ್ತಿ 
    23 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    1 day ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    1 week ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    1 month ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    2 months ago
  • ತಾಲೂಕು
    ತಾಲೂಕುShow More
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    1 week ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    1 week ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ | ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗೀ 
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 weeks ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    1 month ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜುಲೈ 23 | ಕೈಗೊಂಡ ಕಾರ್ಯಗಳು ಪೂರ್ಣ, ವೃತ್ತಿ ಹಾಗೂ ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ
    11 hours ago
    today bhavishya
    ದಿನ ಭವಿಷ್ಯ | ಜುಲೈ 22 | ಉದ್ಯೋಗದಲ್ಲಿ ಗೊಂದಲದ ವಾತಾವರಣ, ಅರೋಗ್ಯದ ಬಗ್ಗೆ ಕಾಳಜಿ ವಹಿಸಿ
    1 day ago
    today bhavishya
    ದಿನ ಭವಿಷ್ಯ | ಜುಲೈ 21 | ಆರ್ಥಿಕ ಪರಿಸ್ಥಿತಿ ಅನುಕೂಲಕರ, ಉದ್ಯೋಗದಲ್ಲಿ ಕೆಲಸದ ಒತ್ತಡ
    2 days ago
    today bhavishya
    ದಿನ ಭವಿಷ್ಯ | ಜುಲೈ 20 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೂರದ ಪ್ರಯಾಣ ಬೇಡ
    3 days ago
    today bhavishya
    ದಿನ ಭವಿಷ್ಯ | ಜುಲೈ 19 | ಆಕಸ್ಮಿಕ ಧನಲಾಭದ ಸೂಚನೆ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
    2 hours ago
    ಮಾರುಕಟ್ಟೆ ಧಾರಣೆ | ಜುಲೈ 22 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಜುಲೈ 21 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಜುಲೈ 20 | ಮೆಕ್ಕೆಜೋಳ, ರಾಗಿ ರೇಟ್…
    3 days ago
    12 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    4 days ago
    ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
    ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಲ್ಲ | KDP ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ 
    5 days ago
    ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    ಹೊಳಲ್ಕೆರೆ : ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    5 days ago
    ಪುರಾತನ ದೇವಾಲಯದ ಜೀರ್ಣೋದ್ಧಾರ, ವಿಶೇಷ ಪೂಜಾ ಕಾರ್ಯಕ್ರಮ
    ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
    1 week ago
    ಶಾಸಕ ಡಾ.ಎಂ.ಚಂದ್ರಪ್ಪ ಭೋವಿ ಸಮಾಜದ ಮುಖಂಡರುಗಳೊಂದಿಗೆ ಸಭೆ
    ಜುಲೈ 19 ರಂದು ಭೋವಿ ಜನೋತ್ಸವ | ಹೊಳಲ್ಕೆರೆಯಲ್ಲಿ ಶಾಸಕ ಎಂ.ಚಂದ್ರಪ್ಪ ನೇತೃತ್ವದಲ್ಲಿ ಸಭೆ 
    2 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    1 month ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    1 month ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    3 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    5 months ago
  • ಹೊಸದುರ್ಗ
    ಹೊಸದುರ್ಗShow More
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    1 month ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 months ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 months ago
  • Life Style
    Life StyleShow More
    Damaged electronic item
    ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ?
    9 hours ago
    Apply this tomato scrub to remove stubborn tanning
    ಮೊಂಡುತನದ ಟ್ಯಾನಿಂಗ್ ಅನ್ನು ತೆಗೆದುಹಾಕಲು ಹಚ್ಚಿ ಈ ಟೊಮೆಟೊ ಸ್ಕ್ರಬ್
    10 hours ago
    Retinol
    ರೆಟಿನಾಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವವರು ಈ ನಿಯಮಗಳನ್ನು ಪಾಲಿಸಿರಿ
    1 day ago
    yoga poses
    ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ರಕ್ತದೊತ್ತಡ ಹೆಚ್ಚಾಗುತ್ತಿದ್ದರೆ ಈ 3 ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ
    1 day ago
    Obesity
    ಅತಿಯಾಗಿ ತಿನ್ನುವುದರಿಂದ ಮಾತ್ರವಲ್ಲ ಈ ಹಾರ್ಮೋನುಗಳ ಸಮಸ್ಯೆಯಿಂದ ಬೊಜ್ಜು ಹೆಚ್ಚಾಗುತ್ತದೆಯಂತೆ
    2 days ago
Reading: ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗೆ ಕ್ರಮವಹಿಸಿ | ಸಂಸದ ಗೋವಿಂದ ಕಾರಜೋಳ 
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗೆ ಕ್ರಮವಹಿಸಿ | ಸಂಸದ ಗೋವಿಂದ ಕಾರಜೋಳ 

News Desk Chitradurga News
Last updated: 25 February 2025 18:18
News Desk Chitradurga News
1 year ago
Share
ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.
SHARE

CHITRADURGA NEWS | 25 FEBRUARY 2025

ಚಿತ್ರದುರ್ಗ: ಜಿಲ್ಲೆಯಲ್ಲಿರುವ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ಸಂಸದ ಗೋವಿಂದ ಕಾರಜೋಳ ಸೂಚನೆ ನೀಡಿದರು.

Also Read: ABVPಯಿಂದ ಅರಳುವ ಪ್ರತಿಭೆ ರಾಜ್ಯಮಟ್ಟದ ಬರಹಗಾರರ ಸಮಾವೇಶ

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.

ತಜ್ಞ ವೈದ್ಯರ ನೇಮಕವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದು, ಕನಿಷ್ಠ ಆರೋಗ್ಯ ಸೇವೆ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಂಸದರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 29 ತಜ್ಞ ವೈದ್ಯರ ಕೊರತೆ ಇದೆ. ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಮೂರು ಬಾರಿ ಪತ್ರಿಕೆ ಪ್ರಕಟಣೆ ನೀಡಿದ್ದು, ಇಬ್ಬರು ಸ್ತ್ರೀರೋಗ ತಜ್ಞರು ಮಾತ್ರ ಹಾಜರಾಗಿದ್ದು, ಸಮುದಾಯ ಆರೋಗ್ಯ ಕೇಂದ್ರ ಸಿರಿಗೆರೆ-1 ಹಾಗೂ ಬೆಲಗೂರು-1 ಹುದ್ದೆಗೆ ನೇಮಕ ಮಾಡಲಾಗಿದೆ. ಉಳಿದಂತೆ ಯಾವ ತಜ್ಞ ವೈದ್ಯರು ಹಾಜರಾಗಿಲ್ಲ ಎಂದು ಡಿಎಚ್‌ಓ ಡಾ.ರೇಣುಪ್ರಸಾದ್ ತಿಳಿಸಿದರು.

Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?

ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕೋಲ್ಡ್ ಸ್ಟೋರೇಜ್ ತೀರಾ ಅವಶ್ಯಕವಾಗಿದ್ದು, ಕೋಲ್ಡ್ ಸ್ಟೋರೇಜ್‌ಗೆ ರೂ.10 ಲಕ್ಷ ಅನುದಾನವನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಈ ಕುರಿತು ಜಿಲ್ಲಾ ಶಸ್ತçಚಿಕಿತ್ಸಕರು ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಸಂಸದರು ತಿಳಿಸಿದರು.

ಮೂರು ತಿಂಗಳೊಳಗೆ ಶಾಲಾ ಕೊಠಡಿ ದುರಸ್ಥಿ ಮಾಡಿಸಿ:

ಜಿಲ್ಲೆಯ ವಿವಿಧೆಡೆ ಬಹುತೇಕ ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಾವ್ಯಸ್ಥೆ ತಲುಪಿರುವುದನ್ನು ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳಿಗೆ ಕಡು ಬಡುವರ ಮಕ್ಕಳು ಬರುತ್ತಾರೆ. ಶಾಲಾ ಕೊಠಡಿಗಳ ದುರಸ್ತಿಗಾಗಿ ಕೆಎಂಇಆರ್‌ಸಿ, ಡಿಎಂಎಫ್ ಅನುದಾನ ಸೇರಿದಂತೆ ಜಿಲ್ಲೆಗೆ 3,700 ಕೋಟಿ ಅನುದಾನ ದೊರೆತಿದೆ. ಆದಾಗ್ಯೂ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ. ಇದಕ್ಕೆ ನಿಮ್ಮ ವೈಫಲ್ಯವೇ ಕಾರಣ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಅವರ ವಿರುದ್ಧ ಸಂಸದ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Also Read: ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ | ಚಿತ್ರದುರ್ಗಕ್ಕೆ ನೂತನ ತಹಶೀಲ್ದಾರ್

ಜಿಲ್ಲೆಯ ಶಾಲಾ-ಕಾಲೇಜು, ವಿದ್ಯಾರ್ಥಿನಿಲಯ, ಆಸ್ಪತ್ರೆ ಹಾಗೂ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿಗಳನ್ನು ಸುಸಜ್ಜಿತವಾಗಿ ಹಾಗೂ ಅತ್ಯಾಧುನಿಕವಾಗಿ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು.

 ಜಿಲ್ಲೆಯಲ್ಲಿ ಒಟ್ಟು 609 ಸರ್ಕಾರಿ ಪ್ರಾಥಮಿಕ ಶಾಲೆಗಳು ಇದ್ದು, ಈ ಪೈಕಿ ಆರ್‌ಸಿಸಿ ಮೇಲ್ಛಾವಣಿ, ಶೀಟ್ ಹಾಗೂ ಹೆಂಚಿನ ಮೇಲ್ಛಾವಣಿ ಹೊಂದಿರುವ ಶಾಲೆಗಳು ಎಷ್ಟು ಎಂಬುದರ ಬಗ್ಗೆ ತಾಲ್ಲೂಕು ವಾರು ವಿವರ ನೀಡಬೇಕು. ಶಾಲೆಗಳ ದುರಸ್ತಿಗಾಗಿ ಒದಗಿಸಲಾಗಿರುವ ಅನುದಾನದ ಖರ್ಚು ವೆಚ್ಚದ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಟ್ರಸ್ಟ್ ಮೂಲಕ ಶಾಲಾ ಬ್ಯಾಗ್, ಪುಸ್ತಕ, ಅತ್ಯುತ್ತಮವಾದ ಬಟ್ಟೆಗಳನ್ನು ವಿತರಣೆ ಮಾಡಿಸಲು ಕ್ರಮ ವಹಿಸಲಾಗುವುದು. ಮುಂಬರುವ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ತಾಲ್ಲೂಕುವಾರು ಪ್ರಾಥಮಿಕ ಶಾಲೆಗಳ ಸಂಪೂರ್ಣ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಕಾಟಾಚಾರದ ಕೆಲಸ ಸಲ್ಲದು: 

ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ಕಾಟಾಚಾರದ ಕೆಲಸ ಆಗಬಾರದು ಎಂದು ಸಂಸದ ಗೋವಿಂದ ಕಾರಜೋಳ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್‌ಗೆ ಸೂಚಿಸಿದರು.

Also Read: ನರೇಗಾ ತಾಂತ್ರಿಕ ಸಹಾಯಕರು ಕೆಲಸದಿಂದ ವಜಾ

ಎರಡು ವರ್ಷ ಪೂರ್ಣಗೊಂಡರೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡಿಲ್ಲ. ಗ್ರಾಮಗಳಲ್ಲಿ ರಸ್ತೆ ಅಗೆದಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನೀವು ಕಾಮಗಾರಿಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ತಿಳಿಸಿದ ಸಂಸದರು, ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ನಿಗಧಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಒಂದು ವೇಳೆ ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ವಜಾಗೊಳಿಸಬೇಕು ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಕಾಮಗಾರಿ ವಿಳಂಬವಾದ ಕಡೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದAತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 1056 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ ಕೆಟ್ಟುಹೋಗಿರುವ ಘಟಕಗಳನ್ನು ರಿಪೇರಿ ಮಾಡಿಸಿ, ನೀರು ಪೂರೈಸುವಂತೆ ಮಾಡಬೇಕು. ಚಾಲ್ತಿಯಲ್ಲಿರುವ ಘಟಕಗಳ ನಿರ್ವಹಣೆ ಸಮರ್ಪಕವಾಗಿರಬೇಕು ಎಂದು ಸಂಸದರು ತಿಳಿಸಿದರು.

ಹಕ್ಕು ಪತ್ರ ವಿತರಿಸಿ: 

ಕೊಳಗೇರಿ ಎಂದು ಘೋಷಣೆಯಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಿ, 15 ದಿನದೊಳಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಎಲ್ಲ ಹಕ್ಕುಪತ್ರ ಫಲಾನುಭವಿಗಳಿಗೆ ನೊಂದಣಿ ಮಾಡಿಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

Also Read: ನಿರುದ್ಯೋಗಿಗಳಿಗೆ‌‌‌ ಶುಭ ಸುದ್ದಿ | ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ

ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಮಾಡಿ, ಬಡವರು ಅಲೆದಾಟ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಹಕ್ಕುಪತ್ರ ಫಲಾನುಭವಿಗಳನ್ನು ನೋಂದಣಿ ಮಾಡಿಸಬೇಕು. ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಚಿತ್ರದುರ್ಗದಲ್ಲಿ ವಾರದಲ್ಲಿ ಎರಡು ದಿನ ಗುರುವಾರ ಮತ್ತು ಶುಕ್ರವಾರ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಆದೇಶ ಪತ್ರ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ.ಸAತೋಷ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Centrally Sponsored SchemeChitradurgaChitradurga newsChitradurga UpdatesDisha SabhaDoctorsHospitalJaljeevan Mission SchemeKannada Latest NewsKannada NewsMP Govinda KarajolVacancyಆಸ್ಪತ್ರೆಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕೇಂದ್ರ ಪುರಸ್ಕೃತ ಯೋಜನೆಖಾಲಿ ಹುದ್ದೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಲಜೀವನ್ ಮಿಷನ್ ಯೋಜನೆದಿಶಾ ಸಭೆವೈದ್ಯರುಸಂಸದ ಗೋವಿಂದ ಕಾರಜೋಳ
Share This Article
Facebook Email Print
Previous Article APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
Next Article today bhavishya Astrology: ದಿನ ಭವಿಷ್ಯ | ಫೆಬ್ರವರಿ 26 | ನಿರೀಕ್ಷಿತ ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ, ಹಠಾತ್ ಪ್ರಯಾಣದ ಸೂಚನೆ
Leave a Comment

Leave a Reply Cancel reply

Your email address will not be published. Required fields are marked *

ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
Damaged electronic item
ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ?
Life Style
ರೈತರ ತರಬೇತಿ ಕಾರ್ಯಕ್ರಮ
ರೈತರು ಹನಿ ನೀರಾವರಿ, ಸಾವಯವ ಪದ್ಧತಿ ಅಳವಡಿಸಿಕೊಳ್ಳಿ | ಕೃಷ್ಣಮೂರ್ತಿ
ಮುಖ್ಯ ಸುದ್ದಿ
ಟಿ. ರಘುಮೂರ್ತಿ
ತಪ್ಪದೇ ಎಲ್ಲಾ ರೈತರು ಬೆಳೆವಿಮೆ ನೋಂದಾಯಿಸಿಕೊಳ್ಳಿ | ಶಾಸಕ ಟಿ.ರಘುಮೂರ್ತಿ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up