CHITRADURGA NEWS | 15 OCTOBER 2026
ಚಿತ್ರದುರ್ಗ: ತುಮಕೂರು–ಚಿತ್ರದುರ್ಗ–ದಾವಣಗೆರೆ ನೂತನ ರೈಲು ಮಾರ್ಗ ಯೋಜನೆಯ ಭಾಗವಾಗಿ, ತೋಳಹುಣಸೆ ಮತ್ತು ಹೆಬ್ಬಾಳು ನಿಲ್ದಾಣಗಳ ನಡುವಿನ ಹೊಸದಾಗಿ ನಿರ್ಮಿಸಲಾದ ಬ್ರಾಡ್ ಗೇಜ್ (BG) ರೈಲು ಮಾರ್ಗದ ಶಾಸನಬದ್ಧ ಸುರಕ್ಷತಾ ತಪಾಸಣೆಯನ್ನು ದಕ್ಷಿಣ ವೃತ್ತ, ಬೆಂಗಳೂರಿನ ರೈಲ್ವೆ ಸುರಕ್ಷತಾ ಆಯುಕ್ತರಾದ (CRS) ವಿ.ವೆಂಕಟಸುಬ್ರಮಣಿಯನ್ ಅ.14 ಬುಧವಾರ ಪರೀಕ್ಷೆ ನಡೆಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ 2.17 ಲಕ್ಷ ಪಡಿತರ ಫಲಾನುಭವಿಗಳ ಇ-ಕೆವೈಸಿ ಬಾಕಿ
ತಪಾಸಣೆಯು ಬೆಳಿಗ್ಗೆ 8:30ಕ್ಕೆ ತೋಳಹುಣಸೆಯಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ನಿಲ್ದಾಣದ ಕಟ್ಟಡಗಳು, ಸಿಗ್ನಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆಗಳು, ಸೇತುವೆಗಳು, ರಸ್ತೆ ಮೇಲ್ಸೇತುವೆಗಳು (ROBs), ರಸ್ತೆ, ಕೆಳ ಸೇತುವೆಗಳು (RUBs), ಹಳಿ ವಕ್ರಗಳು, ನಿಲುಭಾರದ ಪದರ (Ballast Cushion), ಆಳವಾದ ಕಟಿಂಗ್ಗಳು, ಮಣ್ಣಿನ ಸ್ಥಿರೀಕರಣ ಕಾಮಗಾರಿಗಳು (Soil Nailing) ಸೇರಿದಂತೆ ವಿವಿಧ ರೈಲ್ವೆ ಮೂಲಸೌಕರ್ಯ ಹಾಗೂ ಸುರಕ್ಷತಾ ಸಂಬಂಧಿತ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.
ಹಳಿ ಸುರಕ್ಷತಾ ಕ್ರಮಗಳು ಮತ್ತು ವೆಲ್ಡ್ ಪರೀಕ್ಷೆಗಳ ಪ್ರಾತ್ಯಕ್ಷಿಕೆಗಳನ್ನೂ ನಡೆಸಲಾಯಿತು.
ಸಿಆರ್ಎಸ್ ಅವರ ಕಾರ್ಯಕ್ರಮ ಮತ್ತು ಸೂಚನೆಗಳ ಅನುಸಾರ, ನೂತನ ರೈಲು ಮಾರ್ಗದ ಸುರಕ್ಷತೆ ಹಾಗೂ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ವೇಗ ಪರೀಕ್ಷೆಯನ್ನು ನಡೆಸಲು ನಿಗದಿಪಡಿಸಲಾಗಿತ್ತು.
ಈ ತಪಾಸಣೆಯಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (DRM) ಮುದಿತ್ ಮಿತ್ತಲ್, ಬೆಂಗಳೂರು ಕಂಟೋನ್ಮೆಂಟ್ ನ ಮುಖ್ಯ ಎಂಜಿನಿಯರ್ (ನಿರ್ಮಾಣ) ಹಾಗೂ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. ಈ ತಪಾಸಣೆಯು ತುಮಕೂರು–ಚಿತ್ರದುರ್ಗ–ದಾವಣಗೆರೆ ನೂತನ ರೈಲು ಮಾರ್ಗ ಯೋಜನೆಯ ಪ್ರಗತಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಇದನ್ನೂ ಓದಿ: ಸಂಸದರ, ಶಾಸಕರ ಅನುದಾನದ ಬಾಕಿ ಕಾಮಗಾರಿಗಳನ್ನು ನ.13ರೊಳಗೆ ಪೂರ್ಣಗೊಳಿಸಲು ಎಡಿಸಿ ಸೂಚನೆ
ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

