CHITRADURGA NEWS | 15 OCTOBER 2026
ಚಿತ್ರದುರ್ಗ: ಜಿಲ್ಲಾಧಿಕಾರಿ ಎಸ್.ರಮ್ಯಾ ಅವರ ನಿರ್ದೇಶನದಂತೆ ಚಿತ್ರದುರ್ಗ ನಗರಸಭೆ ವತಿಯಿಂದ ಬುಧವಾರ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ದ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವ | ವಚನ ಕಂಠಪಾಠ, ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ
ನಿಷೇಧಿತ ಪ್ಲಾಸ್ಟಿಕ್ ಕವರ್ಗಳಲ್ಲಿ ದಿನಬಳಕೆಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಸಾರ್ವಜನಿಕರಿಗೆ ತಲಾ ರೂ.5 ದಂಡ ವಿಧಿಸಿಲಾಯಿತು. ಅಷ್ಟೇಅಲ್ಲದೆ, ಪ್ರತಿಯೊಬ್ಬರೂ ಮನೆಯಿಂದಲೇ ಮರುಬಳಕೆ ಮಾಡಬಹುದಾದ ಬಟ್ಟೆಯ ಚೀಲಗಳನ್ನು ತರಬೇಕು ಎಂದು ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ಇದೇ ಸಂದರ್ಭದಲ್ಲಿ ನಗರದ ವಿವಿಧ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳ ಮೇಲೆಯೂ ದಾಳಿ ನಡೆಸಿದ ಸಿಬ್ಬಂದಿ, ನಿಷೇಧಿತ ಪ್ಲಾಸ್ಟಿಕ್ ಪದಾರ್ಥಗಳನ್ನು ಜಪ್ತಿ ಮಾಡಿ ದಂಡ ವಿಧಿಸಿದರು. ಕಾರ್ಯಾಚರಣೆಯ ವೇಳೆ ಒಟ್ಟು 31 ಜನರಿಂದ ರೂ.4,810 ದಂಡ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ: ಸಂಸದರ, ಶಾಸಕರ ಅನುದಾನದ ಬಾಕಿ ಕಾಮಗಾರಿಗಳನ್ನು ನ.13ರೊಳಗೆ ಪೂರ್ಣಗೊಳಿಸಲು ಎಡಿಸಿ ಸೂಚನೆ
ಕಾರ್ಯಾಚರಣೆಯಲ್ಲಿ ಪರಿಸರ ಇಂಜಿನಿಯರ್ ಜಾಫರ್ ಸಾಬ್, ಆರೋಗ್ಯ ನಿರೀಕ್ಷಕಿಯಾರದ ರುಕ್ಮಿಣಿ, ಹೀನಾ ಕೌಸರ್, ಜಯಪ್ರಕಾಶ್, ದಫೇದಾರ್ ಲಿಂಗರಾಜು, ಸುರೇಶ್ ಪೌರ ಕಾರ್ಮಿಕರಾದ ಮಂಜುನಾಥ್, ಮುತ್ತು, ನಿಜಲಿಂಗ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

