ಹೊಸದುರ್ಗ
ಬಾಡೂಟ ಸೇವಿಸಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ ಶ್ರೀಗಳು

CHITRADURGA NEWS | 08 APRIL 2024
ಹೊಸದುರ್ಗ: ತಾಲ್ಲೂಕಿನ ಹಳೇಕುಂದೂರು ಗ್ರಾಮದಲ್ಲಿ ಇತ್ತೀಚೆಗೆ ಬಾಡೂಟ ಸೇವನೆ ಮಾಡಿ 50 ಕ್ಕೂ ಹೆಚ್ಚು ಜನ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ ಶ್ರೀಗಳು.
ಇದನ್ನೂ ಓದಿ: ಮೂರು ದಿನಗಳಲ್ಲಿ ಮಳೆ ಸಾಧ್ಯತೆ
ಶ್ರೀ ಮದ್ ಆಂಜನೇಯ ಸ್ವಾಮಿ ದೇವಸ್ಥಾನ ಪಕ್ಕದ ಶಾಲೆ ಕೊಠಡಿಗಳಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಆಸ್ಪತ್ರೆ, ಬಾಗೂರು ಆಸ್ಪತ್ರೆ ವೈದ್ಯರು, ಸಿಬ್ಬಂದಿವರ್ಗ ಕಳೆದ ಶುಕ್ರವಾರದಿಂದ ಆಂಬುಲೆನ್ಸ್ ಜೊತೆಯಲ್ಲಿ ಎಲ್ಲಾ ಉಪಕರಣಗಳೊಂದಿಗೆ ಬೀಡು ಬಿಟ್ಟಿದ್ದು ಸಂಪೂರ್ಣ ಚಿಕಿತ್ಸೆ ಮಾಡುತ್ತಿದ್ದಾರೆ.
ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಭಗೀರಥ ಪೀಠದ ಶ್ರೀ ಪುರುಷೋತ್ತಮನಂದಪುರಿ ಮಹಾಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮೀಜಿ, ಶ್ರೀ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಗಳು ಆಸ್ವಸ್ಥಗೊಂಡವರ ಆರೋಗ್ಯ-ಕ್ಷೇಮ ವಿಚಾರಿಸಿದರು.
ಇದನ್ನೂ ಓದಿ: ಬಸ್ ಪಲ್ಟಿ ಪ್ರಕರಣ ಮೃತ ಮೂರು ಜನರ ಗುರುತು ಪತ್ತೆ
ಅನಾರೋಗ್ಯ ಪೀಡಿತ ಜನರಿಗೆ ಸಮಾಧಾನ ಮಾಡಿ, ಆತ್ಮವಿಶ್ವಾಸ ತುಂಬಿದರು, ಪೂಜ್ಯರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಎಲ್ಲರಿಗೂ ಒಳಿತಾಗಲೆಂದು ಪ್ರಾರ್ಥಿಸಿದರು, ಗ್ರಾಮದ ಜನರಿಗೆ ತಿಳುವಳಿಕೆ ನೀಡುತ್ತಾ ಬೇಸಿಗೆಯಲ್ಲಿ ಸಾತ್ತ್ವಿಕ ಆಹಾರ, ಮಿತ ಆಹಾರ ತೆಗೆದುಕೊಳ್ಳಬೇಕು, ಆದಷ್ಟು ಮಜ್ಜಿಗೆ, ಎಳನೀರು, ಹಣ್ಣಿನ ರಸ, ತೆಗೆದುಕೊಂಡು ಹೆಚ್ಚು ನೀರು ಕುಡಿಯಿರಿ, ಸ್ವಚ್ಛತೆ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಮದ ಹಾಗೂ ಅಕ್ಕ ಪಕ್ಕದ ಜನರು ಇದ್ದರು,
