ಮುಖ್ಯ ಸುದ್ದಿ
Farmers Association; ರೈತ ಸಂಘದ ಕಾರ್ಯಕಾರಿ ಸಮಿತಿ ಸಭೆ | ಡಿಸಿ ಕಚೇರಿ ಮುಂದೆ ಪ್ರತಿಭಟಿಸಲು ತೀರ್ಮಾನ

CHITRADURGA NEWS | 30 AUGUST 2024
ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘ(Farmers Association) ಹಾಗೂ ಹಸಿರು ಸೇನೆ ವತಿಯಿಂದ ಸೆಪ್ಟೆಂಬರ್ 18 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ(protest) ನಡೆಸಲಾಗುವುದು ಎಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕ್ಲಿಕ್ ಮಾಡಿ ಓದಿ: POWER: ವಿದ್ಯುತ್ ತಗುಲಿ ವ್ಯಕ್ತಿ ಸಾವು | ಮನೆಯ RCC ಕೂರಿಂಗ್ ಮಾಡುವಾಗ ಘಟನೆ

ನಗರದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುರುವಾರ ರಾಜ್ಯ ಸಮಿತಿ ಸಭೆ ಜರುಗಿತು.
ಸಭೆಯಲ್ಲಿ ಜರುಗಿದ ರೈತರ ಒತ್ತಾಯಗಳು:
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತೊರಿತಗತಿಯಲ್ಲಿ ಮುಗಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತಹ ಕೆಲಸ ಶೀಘ್ರವಾಗಿ ಮಾಡಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ರೈತರು ಆಧಾರ್ ನಂಬರ್ ಜೋಡಿಸುವುದನ್ನು ಸರ್ಕಾರ ಕೈಬಿಡಬೇಕು.
ಬ್ಯಾಂಕ್‌ಗಳು ಎನ್.ಓ.ಸಿ. ಗೆ ಮತ್ತು ಶುಲ್ಕ ವಸೂಲಿ ಹಾಗೂ ಸಾಲ ವಸೂಲಿಗೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಜಮೀನುಗಳಿಗೆ ದಾರಿ ಸಮಸ್ಯೆ, ಬೆಳೆ ಪರಿಹಾರ ತಾರತಮ್ಯ, ಬೆಳೆ ವಿಮೆ ಕಾಲಮಿತಿಯಲ್ಲಿ ಸರಿಪಡಿಸಬೇಕು. ರೈತರಿಗೆ ಸಾಂಕೇತಿಕ ಬೆಲೆಯಲ್ಲಿ ಪಹಣಿ ಮತ್ತು ಭೂ ದಾಖಲೆಗಳು ದೊರೆಯುವಂತೆ ಮಾಡಬೇಕು.
ಕ್ಲಿಕ್ ಮಾಡಿ ಓದಿ: Court: ಕೊಲೆ ಮಾಡಿ ರುಂಡ ಹಿಡಿದುಕೊಂಡು ಹೋಗಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಭೂಮಿ ದಾಖಲೆಯನ್ನು ಗಣಕೀಕೃತಗೊಳಿಸುವಾಗ ತಪ್ಪುಗಳಾದಲ್ಲಿ ಆ ನೌಕರನೇ ಹೊಣೆಗಾರ, ರೈತರಲ್ಲ.
ಖಾಸಗಿ ಶಾಲೆ-ಕಾಲೇಜುಗಳು ಶುಲ್ಕ ವಸೂಲಾತಿಯಲ್ಲಿ ಕಡ್ಡಾಯವಾಗಿ ಸರ್ಕಾರದ ನಿಯಮವನ್ನು ಪಾಲಿಸಬೇಕು ಮತ್ತು ಅವಧಿಕೃತವಾಗಿ ಪಡೆದ ಶುಲ್ಕವನ್ನು ಹಿಂಪಾವತಿಸಬೇಕು.
ಸರ್ಕಾರಿ ಆಸ್ಪತ್ರೆಗಳ ಭ್ರಷ್ಟಾಚಾರ ನಿಯಂತ್ರಿಸಬೇಕು ಮತ್ತು ಖಾಸತಿ ಆಸ್ಪತ್ರೆಗಳು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಮತ್ತು ಮಾನವೀಯ ನೆಲಗಟ್ಟಿನಲ್ಲಿರಬೇಕು.
ರೈತರ ತೋಟಗಳಲ್ಲಿ ಕಳ್ಳತನ ಹೆಚ್ಚಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮವಹಿಸಬೇಕು. ಬಗರ್ ಹುಕುಂ ಸಾಗುವಳಿ ರೈತರಿಗೆ ವಾಸ್ತವಾಂಶಗಳನ್ನಧರಿಸಿ ಕೂಡಲೆ ಹಕ್ಕು ಪತ್ರ ಕೊಡಬೇಕು.
ರೈತರ ಬೆಳೆಗಳಿಗೆ ಬೆಲೆ ಆಯೋಗಗಳ ಪ್ರಕಾರ ಲಾಭಾಂಶ ಇರುವ ಬೆಲೆ ನೀತಿ ಶೀಘ್ರದಲ್ಲಿ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳಾದ ಹೆಚ್.ಆರ್. ಬಸವರಾಜಪ್ಪ, ಕುರುವ ಗಣೇಶ್, ಸಿದ್ದವೀರಪ್ಪ, ಅಮೀನ್ ಪಾಷಾ, ನಜೀರ್ ಸಾಬ್ ಮೂಲೆಮನಿ, ಮಹೇಶ್ ತರೀಕೆರೆ, ನಿಂಗಪ್ಪ ದಿವಿಟ್ಟಿಗಿ, ಹೊನ್ನೂರು ಮುನಿಯಪ್ಪ, ಭರಮಣ್ಣ, ಮಲ್ಲಿಕಾರ್ಜುನ್ ರಾಂದುರ್ಗ, ಕಬ್ಬಿಗೆರೆ ನಾಗರಾಜ್, ಜಿಲ್ಲಾ ಪದಾಧಿಕಾರಿಗಳಾದ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ರಾಮರೆಡ್ಡಿ, ಸದಾಶಿವಪ್ಪ, ತಾಲ್ಲೂಕ್ ಪದಾಧಿಕಾರಿಗಳಾದ ಮಂಜುನಾಥ್, ತಿಪ್ಪೇಸ್ವಾಮಿ ಕೆ.ಟಿ., ಬೋರೇಶ್, ರಂಗಸ್ವಾಮಿ, ರವಿ ಸೇರಿದಂತೆ ಇತರರು ಇದ್ದರು.
