CHITRADURGA NEWS | 26 OCTOBER 2026
ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಅವರು ಕವಿ, ಋಷಿ ಮಾತ್ರವಲ್ಲ, ಇಡೀ ದೇಶಕ್ಕೆ ನೀತಿ-ಆದರ್ಶಗಳ ಚೌಕಟ್ಟನ್ನು ಕಟ್ಟಿಕೊಟ್ಟ ಮಹಾನ್ ದಾರ್ಶನಿಕ ಹಾಗೂ ತತ್ವಜ್ಞಾನಿ’ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಬಣ್ಣಿಸಿದರು.
ಇದನ್ನೂ ಓದಿ: ಸಂಘದ ಆದಾಯ ಸಮರ್ಪಕ ಬಳಕೆಯಿಂದ ಮತ್ತಷ್ಟು ಅಭಿವೃದ್ಧಿ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ’ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ರಾಮಾಯಣದಂತಹ ಮಹಾಕಾವ್ಯ ಹಾಗೂ ವಾಲ್ಮೀಕಿ ಅವರ ತತ್ವ-ಚಿಂತನೆಗಳ ಕುರಿತು ಎಷ್ಟು ಮಾತನಾಡಿದರೂ, ಎಷ್ಟು ಪುಸ್ತಕಗಳನ್ನು ಬರೆದರೂ ಸಾಲದು. ಅದಕ್ಕೊಂದು ಆದಿ-ಅಂತ್ಯ ಎಂಬುದಿಲ್ಲ. ವಾಲ್ಮೀಕಿ ಅವರು ತಮ್ಮ ಕಾವ್ಯದ ಮೂಲಕ ಸಮಾಜಕ್ಕೆ ಅತ್ಯಂತ ಹಿತಕರವಾದ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಸಂಸ್ಕøತದ ‘ರಮ್’ ಎಂಬ ಧಾತು ಪದದಿಂದ ‘ರಾಮ’ ಎಂಬ ಹೆಸರು ಸೃಷ್ಠಿಯಾಗಿದೆ. ರಾಮ ಎಂದರೆ ಅತ್ಯಂತ ಪ್ರಸನ್ನತೆ ಹಾಗೂ ಹಿತಕರವಾದದ್ದು ಎಂದರ್ಥ. ಪ್ರತಿಯೊಬ್ಬರಿಗೂ ಹಿತವನ್ನು ನೀಡುವ, ಪ್ರಸನ್ನತೆ ತರುವ ವ್ಯಕ್ತಿತ್ವ ರಾಮನದ್ದು. ಗುರುಗಳಿಗೆ ಶಿಷ್ಯನಾಗಿ, ತಂದೆಗೆ ಮಗನಾಗಿ ಹಾಗೂ ಪ್ರಜೆಗಳಿಗೆ ಆದರ್ಶ ರಾಜನಾಗಿ ರಾಮ ಹೇಗೆ ಸರ್ವರಿಗೂ ಹಿತ ಉಂಟುಮಾಡಿದನೋ, ಅದೇ ರೀತಿಯ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಮತದಾನದ ಹಕ್ಕಿನ ರಕ್ಷಣೆಗೆ ಕಾಂಗ್ರೆಸ್‌ನಿಂದ ತೀವ್ರ ಹೋರಾಟ | ದೀಪ್ತಿ ಮೇರಿ ವರ್ಗೀಸ್
ರಾಮಾಯಣದಂತಹ ಸುಂದರ ಕಾವ್ಯವನ್ನು ನಮಗೆ ನೀಡಿದ ವಾಲ್ಮೀಕಿ ಅವರ ನೆನಪು ಮತ್ತು ಅವರು ತೋರಿಸಿಕೊಟ್ಟ ಆದರ್ಶಗಳನ್ನು ನಾವು ನಮ್ಮ ದಿನನಿತ್ಯದ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿ, ಭಾರತೀಯ ಚರಿತ್ರೆ ಮತ್ತು ಸಂಸ್ಕøತಿಯಲ್ಲಿ ಮಹರ್ಷಿ ವಾಲ್ಮೀಕಿ ಅವರದ್ದು ಅತ್ಯಂತ ಮೇರು ವ್ಯಕ್ತಿತ್ವ. ಜಾಗತಿಕ ಸಾಹಿತ್ಯದಲ್ಲೇ ಭಾರತೀಯ ಬದುಕಿನ ಮೌಲ್ಯಗಳನ್ನು ಹಾಗೂ ಆದರ್ಶಗಳನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟ ಮಹಾನ್ ಕವಿ ಎಂದು ಹೇಳಿದರು.
ಪ್ರಾಚೀನ ಕಾಲದಲ್ಲಿ ಋಷಿಯಲ್ಲದವನು ಕವಿಯಾಗಲಾರ ಎಂಬ ಮಾತೊಂದಿತ್ತು. ಆ ಮಾತು ವಾಲ್ಮೀಕಿ ಅವರಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಅವರು ಏಕಕಾಲದಲ್ಲಿ ಕವಿಯೂ ಹೌದು, ಋಷಿಯೂ ಹೌದು. ವಾಲ್ಮೀಕಿ ಬರೆದ ರಾಮಾಯಣವು ಕೇವಲ ಕಾವ್ಯವಲ್ಲ, ಅದೊಂದು ಪೂಜನೀಯ ಹಾಗೂ ಜನಸಂಸ್ಕøತಿಯ ಭಾವಗೀತಾತ್ಮಕ ಮಹಾಕಾವ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎನ್.ಆದರ್ಶ ತಂದೆ ಎನ್.ನರಸಿಂಹಪ್ಪ ಅವರಿಗೆ ರೂ.1 ಲಕ್ಷ ನಗದು ಪುರಸ್ಕಾರ ನೀಡಲಾಯಿತು. ಜಿಲ್ಲಾ ನಾಯಕ ಸಮಾಜದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ನೀರಾವರಿ ಹೋರಾಟವೇ ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದಿತು
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಗೋವಿಂದರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮುಖಂಡರಾದ ರಾಜವೀರ ಮದಕರಿ ನಾಯಕ, ವೆಂಕಟೇಶ್, ಲಕ್ಷ್ಮಿಸಾಗರ ರಾಜಣ್ಣ, ಕೆ.ಪಿ.ಸಂಪತ್ ಕುಮಾರ್, ಓ.ಬಿ.ಬಸವರಾಜ್, ರತ್ನಮ್ಮ, ಪ್ರಶಾಂತ್, ಬಚ್ಚಬೋರನಹಟ್ಟಿ ಬಸವರಾಜ್, ಮಂಜುನಾಥ್, ಹೆಚ್.ಗುಡ್ಡದೇಶ್ವರಪ್ಪ, ಸಿ.ಜಿ.ಶ್ರೀನಿವಾಸ್, ಅಹೋಬಲ ಟಿವಿಎಸ್ ಅರುಣ್, ದರ್ಶನ್ ಇಂಗಳದಾಳ್ ಸೇರಿದಂತೆ ಮತ್ತಿತರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

