CHITRADURGA NEWS | 27 OCTOBER 2026
ಚಿತ್ರದುರ್ಗ: ಪ್ರತಿಯೊಬ್ಬ ಮಾನವನ ಅಂತರಂಗದ ಪರಿವರ್ತನೆ ಮತ್ತು ಸನ್ಮಾರ್ಗದ ಪಯಣಕ್ಕೆ ಆತ್ಮಾವಲೋಕನವೇ ಮೂಲಾಧಾರ. ಪ್ರತಿಯೊಬ್ಬ ಮನುಷ್ಯನಲ್ಲೂ ಸನ್ಮಾರ್ನಕ್ಕೆ ಬದಲಾಗುವ ಅಪರವಾದ ಸಾಮಥ್ರ್ಯವಿದೆ ಎಂದು ಸಿಎಂಸಿಆರ್‍ಐ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಯುವರಾಜ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸಂಘದ ಆದಾಯ ಸಮರ್ಪಕ ಬಳಕೆಯಿಂದ ಮತ್ತಷ್ಟು ಅಭಿವೃದ್ಧಿ | ಜಿ.ಎಚ್.ತಿಪ್ಪಾರೆಡ್ಡಿ
ನಗರದ ಸಿ.ಎಮ್.ಸಿ.ಆರ್.ಐ ಬೋಧನಾ ಆಸ್ಪತ್ರೆಯ ಡಾ.ಬಿ.ಸಿ. ರಾಯ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಮ್ಮೆ ರತ್ನಾಕರನಿಗೆ ನಾರದ ಮುನಿಗಳು ‘ನೀವು ಮಾಡುತ್ತಿರುವ ಕರ್ಮ ಫಲ ಹಾಗೂ ದುಷ್ಕøತ್ಯದ ಪರಿಣಾಮಗಳಲ್ಲಿ ನಿಮ್ಮ ಕುಟುಂಬದವರು ಭಾಗಿಗಳಾಗುತ್ತಾರೆಯೇ? ಎಂದು ಕೇಳಿದ ಪ್ರಶ್ನೆಯೇ ಅವರ ಅಂತರಂಗವನ್ನು ಕಲಕಿ, ರತ್ನಾಕರನನ್ನು ‘ಮಹರ್ಷಿ ವಾಲ್ಮೀಕಿ’ಯನ್ನಾಗಿ ಪರಿವರ್ತಿಸಿತು. ಆದ್ದರಿಂದ ಹಿಂದೆ ಮಾಡಿದ ತಪ್ಪುಗಳನ್ನೇ ನೆನೆದು ಕೊರಗುವುದಕ್ಕಿಂತ ಪ್ರಸ್ತುತದಲ್ಲಿ ನಾವು ಮಾಡಬಹುದಾದ ಶ್ರೇಷ್ಠ ಹಾಗೂ ಸತ್ಕಾರ್ಯಗಳತ್ತ ಗಮನಹರಿಸಬೇಕು ಎಂದರು.
ದೇವರ ಹುಡುಕಾಟಕ್ಕಾಗಿ ದೇವಸ್ಥಾನ, ಮಸೀದಿ, ಆಧ್ಯಾತ್ಮಿಕ ಕೇಂದ್ರಗಳಿಗೆ ಅಲೆಯುವುದನ್ನು ಮಿತಿಗೊಳಿಸಿ, ಪ್ರತಿಯೊಬ್ಬರೂ ತಮ್ಮ ಅಂತರಂಗದತ್ತ ದೃಷ್ಟಿ ಹರಿಸಬೇಕು. ಧ್ಯಾನದ ಮೂಲಕ ನಮ್ಮೊಳಗಿನ ಶ್ರೇಷ್ಠ ಆತ್ಮವನ್ನು ಅರಿತು, ನಿರಂತರ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಆತ್ಮವು ಪರಿಶುದ್ಧಗೊಂಡು ಅಪಾರವಾದ ಗುಣಪಡಿಸುವ ಶಕ್ತಿ ಲಭಿಸುತ್ತದೆ. ಈ ಶುಭ ದಿನದಂದು ನಾವೆಲ್ಲರೂ ಸನ್ಮಾರ್ಗದಲ್ಲಿ ಬಾಳಿ, ಸಮಾಜಕ್ಕೆ ಶ್ರೇಷ್ಠ ಉಪಶಮನಕಾರರಾಗಿ ಸೇವೆಯೊದಗಿಸೋಣ ಎಂದು ಅವರು ಪ್ರೇರಣಾದಾಯಿ ಸಂದೇಶ ನೀಡಿದರು.
ಇದನ್ನೂ ಓದಿ: ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿಗೆ ಸಿದ್ದತೆ | ಡಿಸಿ ರಮ್ಯಾ ಸಭೆ
ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ದಸ್ತಗಿರಿ ಅವರು, ಮಹರ್ಷಿ ವಾಲ್ಮೀಕಿಯವರ ಸಮಗ್ರ ಜೀವನ ಚರಿತ್ರೆ, ಅವರ ಅಪೂರ್ವ ಸಾಧನೆಗಳು ಹಾಗೂ ಮಾನವಕುಲಕ್ಕೆ ಅವರು ನೀಡಿದ ಮಹಾನ್ ಕೊಡುಗೆಗಳ ಕುರಿತು ಸಮಗ್ರವಾಗಿ ಬೆಳಕು ಚೆಲ್ಲಿದರು.
ಈ ಸಂದರ್ಭದಲ್ಲಿ ಸಿಎಂಸಿಆರ್‍ಐ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಜಿ.ಹೆಚ್.ಮೇಘಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರವೀಂದ್ರ, ಶುಶ್ರೂಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

