ಚಿತ್ರದುರ್ಗ ನ್ಯೂಸ್.ಕಾಂ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗಧಿ ಮಾಡಲು ವಿಳಂಭ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಚಿತ್ರದುರ್ಗ ಜಿಲ್ಲೆಯ ಎಲ್ಲ ಸದಸ್ಯರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಲ್ಲ ಪಕ್ಷದ ಸದಸ್ಯರು ಭಾಗವಹಿಸಿದ್ದರು.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಸೆಕ್ಷನ್ 18ರಲ್ಲಿ ಕೌನ್ಸಿಲರುಗಳ ಪದಾವಧಿಯನ್ನು ನಿಗಧಿ ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರ ಒದಾವಧಿ ಮುನ್ಸಿಪಲ್ ಕೌನ್ಸಿಲರ್ ಮೊದಲ ಸಭೆಯನ್ನು ನಡೆಸಿದ ದಿನಾಂಕದಿಂದು ಪ್ರಾರಂಭವಾಗಬೇಕು ಎಂದಿದೆ. ಆದರೆ, ಪ್ರತಿ ಬಾರಿಯೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮೀಸಲಾತಿ ನಿಗಧಿ ವಿಳಂಭ ಮಾಡಲಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆ ಉದ್ದೇಶಿಸಿ, ಹೊಸದುರ್ಗ ಪುರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ ಮಾಡದೆ ರಾಜ್ಯ ಸರ್ಕಾರ ನಮ್ಮ ಹಕ್ಕು ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ಇದನ್ನೂ ಓದಿ: ರೈತ ಬಾಂಧವರೇ ಎಚ್ಚರಿಕೆ | ಮೋಟಾರ್, ಪಂಪ್, ಕೇಬಲ್ ಕಳ್ಳತನ ನಡೆಯುತ್ತಿದೆ
ಹೊಳಲ್ಕೆರೆ ಪುರಸಭೆ ಸದಸ್ಯ ಕೆ.ಸಿ.ರಮೇಶ್ ಮಾತನಾಡಿ, ಎಲ್ಲ ಸದಸ್ಯರ ಒಕ್ಕೂಟ ಮಾಡಿ ಅದರಿಂದ ನಿರ್ಣಯ ಮಾಡಿಕೊಂಡು ಹೋರಾಟ ಆರಂಭಿಸಿದ್ದೇವೆ. ಇದು ರಾಜ್ಯಾದ್ಯಂತ ಮುಂದುವರೆಯಲಿದೆ.
ವಿಧಾನಸಭೆ ಅವಧಿ ಮುಗಿಯುವ ಮೊದಲೇ ಚುನಾವಣೆ ನಡೆಯುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಚುನಾವಣೆ ನಡೆದ ಆರಂಭದಲ್ಲೂ ಹೀಗೆ ಮಾಡಿ ಒಂದೂವರೆ ವರ್ಷ ಸುಮ್ಮನೆ ಕೂರಿಸಿದ್ದರು. ಈಗಲೂ ಆರು ತಿಂಗಳು ಯಾವ ಕೆಲಸ ಮಾಡುವಂತಿಲ್ಲ.
ಈ ಬಗ್ಗೆ ಯಾವ ಶಾಸಕರೂ ಧ್ವನಿ ಎತ್ತಿಲ್ಲ. ಅವರು ಮಾತ್ರ ಅಧಿಕಾರದಲ್ಲಿರಬೇಕು ಎಂಬ ಧೋರಣೆ ಹೊಂದಿದ್ದಾರೆ. ಎರಡು ಅಧಿವೇಶನ ನಡೆದರೂ ಸದನದಲ್ಲಿ ಯಾರೂ ಧ್ವನಿ ಎತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹಿರಿಯೂರು ನಗರಸಭೆ ಸದಸ್ಯ ನಾಗಣ್ಣ ಮಾತನಾಡಿ, ಮೀಸಲಾತಿ ಅವಧಿ ಮುಗಿದಿದೆ. ಈವರೆಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡದೆ, ಅಧಿಕಾರಿಗಳ ಉಸ್ತುವಾರಿ ಹಾಕಲಾಗಿದೆ. ವಾರ್ಡ್ ಸಮಸ್ಯೆಗಳು ದೊಡ್ಡದಾಗುತ್ತಿವೆ. ಈವರೆಗೆ ಒಂದು ಸಾಮಾನ್ಯ ಸಭೆ ಕರೆದಿಲ್ಲ.
ಒಕ್ಕೂಟ ಮಾಡಿಕೊಂಡು ನಮ್ಮ ಹಕ್ಕು ಕೇಳುತ್ತಿದ್ದೇವೆ. ತಕ್ಷಣ ಮೀಸಲಾತಿ ಪ್ರಕಟಿಸದಿದ್ದರೆ ಒಂದು ತಿಂಗಳ ಒಳಗಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕರು ನಮ್ಮ ಪರವಾಗಿ ಧ್ವನಿ ಎತ್ತುವುದಿಲ್ಲ. ಅಧಿಕಾರ ಅವರಿಬ್ಬರಿಗೆ ಬೇಕಾಗಿದೆ. ನಾವು ಕೂಡಾ ಜನರಿಂದ ಮತ ಹಾಕಿಸಿಕೊಂಡು ಗೆದ್ದಿದ್ದೇವೆ.
ಪ್ರತಿಭಟನೆಯಲ್ಲಿ ಸದಸ್ಯರಾದ ಶ್ರೀನಿವಾಸ್, ಶಶಿಧರ್, ಭಾಸ್ಕರ್, ಗೊಪ್ಪೆ ಮಂಜುನಾಥ್, ಶಿವರಂಜಿನಿ, ವಿಶಾಲಾಕ್ಷಿ, ಆರ್.ಮಂಜುಳಾ, ಜಯಲಕ್ಷ್ಮೀ, ನಾಗಮ್ಮ, ದೊಡ್ಡಯ್ಯ, ಭಾಗ್ಯಮ್ಮ, ವಸಂತ, ಪೂಜಾ, ಫಾತಿಮಾ, ಕೆ.ಬಿ.ಸುರೇಶ್ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
