ಹೊಸದುರ್ಗ
ಹೊಸದುರ್ಗ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ರಥೋತ್ಸವ

CHITRADURGA NEWS | 08 MAY 2024
ಹೊಸದುರ್ಗ: ಹೊಸದುರ್ಗ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿಯ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಪುನೀರತಾದರು.
ಕಳೆದ ಒಂದು ವಾರದಿಂದ ಜಾತ್ರಾ ಮಹೋತ್ಸವದ ಸಿದ್ಧತೆಗಳು ನಡೆದಿದ್ದು, ಹೊಸದುರ್ಗ ಪಟ್ಟಣ ಇದಕ್ಕಾಗಿ ಸಿಂಗಾರಗೊಂಡಿತ್ತು.
ಇದನ್ನೂ ಓದಿ: ಇಂದು ಕೂಡಾ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
ಗಂಗಾ ಪೂಜೆಯೊಂದಿಗೆ ಶುರುವಾದ ಜಾತ್ರೆಯ ಧಾರ್ಮಿಕ ಕಾರ್ಯಗಳು, ಮಧುವಣಗಿತ್ತಿ ಶಾಸ್ತ್ರ, ಮಾಂಗಲ್ಯ ಧಾರಣೆ ನಂತರ ವಿವಿಧ ಗ್ರಾಮಗಳಿಗೆ ದೇವಿ ತೆರಳುವ ಮೂಲಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ರಥೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯೇ ಭವ್ಯವಾದ ರಥವನ್ನು ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮಂಗಳ ವಾದ್ಯಗಳೊಂದಿಗೆ ದುರ್ಗಾಂಭಿಕಾ ದೇವಿ ರಥವನ್ನೇರಿದರು.
ಇದನ್ನೂ ಓದಿ: ಆರ್ಭಟಿಸಿಕೊಂಡು ಬಂದ ಮಳೆರಾಯ | ಹಿರಿಯೂರಿನಲ್ಲಿ ಗಾಳಿ, ಮಳೆ, ಗುಡುಗು, ಸಿಡಿಲು
ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಿದರು. ರಥಕ್ಕೆ ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿದರು.
ಇಂದು ಸಿಡಿ ಉತ್ಸವ: ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಅಂಗವಾಗಿ ಇಂದು ಬುಧವಾರ ಸಿಡಿ ಉತ್ಸವ ನೆರವೇರಲಿದೆ. ಸಿಡಿ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ.
