CHITRADURGA NEWS | 16 AUGUST 2026
ಚಿತ್ರದುರ್ಗ: ದೇಶದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಯುವಪೀಳಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಅಖಂಡ ಭಾರತದ ಕಲ್ಪನೆಯನ್ನು ನನಸು ಮಾಡುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರ್ ತಿಳಿಸಿದರು.
ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಜ್ಯೋತಿರಾಜ್
ಆರೆಸ್ಸೆಸ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಜಾಗರಣ ವೇದಿಕೆಯು ದೇಶದ ರಕ್ಷಣೆ ಹಾಗೂ ನೈಜ ಇತಿಹಾಸದ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದೆ. ಅಶೋಕ ಚಕ್ರವರ್ತಿ ಹಾಗೂ ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಹಿಮಾಲಯದಿಂದ ಸಮುದ್ರದವರೆಗೆ ವಿಸ್ತರಿಸಿದ್ದ ವಿಶಾಲ ಭಾರತದ ಭೂಭಾಗವು, ಕಾಲಕ್ರಮೇಣ ನಾಯಕರ ಅಪಕಲ್ಪನೆ ಹಾಗೂ ತುಷ್ಟೀಕರಣದ ರಾಜಕಾರಣದಿಂದಾಗಿ ವಿಭಜನೆಗೊಂಡು ಸಣ್ಣದಾಗುತ್ತಾ ಬಂದಿದೆ ಎಂದು ವಿಷಾಧಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸುಮಾರು ಆರು ಲಕ್ಷ ಜನರು ತಮ್ಮ ಜೀವವನ್ನು ಬಲಿ ಕೊಟ್ಟಿದ್ದಾರೆ. ಯುವಜನರಲ್ಲಿ ದೇಶಭಕ್ತಿ ಹಾಗೂ ಧರ್ಮನಷ್ಠೆಯ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಇಂತಹ ಹೋರಾಟಗಳ ಅರಿವು ಕಡಿಮೆಯಾಗುತ್ತಿದೆ. ಆದ್ದರಿಂದ, ಈ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಹಾಗೂ ಮುಂಬರುವ ದಿನಗಳಲ್ಲಿ ಭಾರತವನ್ನು ಮರಳಿ ‘ಅಖಂಡ ಭಾರತ’ವನ್ನಾಗಿ ನಿರ್ಮಿಸಲು ಇಂದಿನ ಯುವ ಪೀಳಿಗೆ ಕಂಕಣಬದ್ಧರಾಗಬೇಕು ಭವಿಷ್ಯದಲ್ಲಿ ನಮ್ಮ ಪೂರ್ವಜರ ಕನಸಾದ ಅಖಂಡ ಭಾರತದ ಕಲ್ಪನೆ ನನಸಾಗಲಿದೆ.
ಇದನ್ನೂ ಓದಿ: ದಲಿತರ ಉದ್ದಾರಕ್ಕೆ ವಾಜಪೇಯಿ ವಿಶೇಷ ಅಧಿವೇಶನ | ಸಂಸದ ಗೋವಿಂದ ಕಾರಜೋಳ
ಐತಿಹಾಸಿಕ ಮತ್ತು ನೈಜ ಇತಿಹಾಸವನ್ನು ಮುಂಬರುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಸಶಕ್ತ ಹಾಗೂ ಸದೃಢ ಭಾರತವನ್ನು ಕಟ್ಟಲು ಯುವಪೀಳಿಗೆಯು ಯಾವುದೇ ರೀತಿಯ ಮಾದಕ ವ್ಯಸನಗಳಿಂದ ದೂರವಿರಬೇಕು ರಾಜ್ಯವನ್ನು ನಶಾಮುಕ್ತ ಗೊಳಿಸುವ ನಿಟ್ಟಿನಲ್ಲಿ ಗಾಂಜಾ, ಅಫೀಮು ಹಾಗೂ ಡ್ರಗ್ಸ್ನಂತಹ ಮಾದಕ ಜಾಲಗಳ ಕುರಿತು ಸುಳಿವು ಸಿಕ್ಕ ತಕ್ಷಣವೇ ಪೊಲೀಸ್ ಅಥವಾ ಗುಪ್ತಚರ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಹನುಮಂತಪ್ಪ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ರುದ್ರೇಶ್ ಭಾಗವಹಿಸಿದ್ದರು.
ಇದನ್ನೂ ಓದಿ: ಜಿಲ್ಲಾ ಪಂಚಾಯಿತಿಯಲ್ಲಿ ಪ್ರಜಾ ಸೇವಾ ಶಾಖೆಗೆ ಸಚಿವ ಟಿ.ರಘುಮೂರ್ತಿ ಚಾಲನೆ
ಭರತ್ ರಾಯ್ಕರ್ ವಂದೇ ಮಾತರಂ ಹಾಡಿದರು. ಕಿರಣ ಸ್ವಾಗತಿಸಿದರು. ಸಂಜಯ್ ಜಾಲಿಕಟ್ಟೆ ಸಂಕಲ್ಪ ಬೋಧಿಸಿದರು, ಮಂಜುನಾಥ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

