CHITRADURGA NEWS | 12 MARCH 2024
ಚಿತ್ರದುರ್ಗ: ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರಾ ಮಹೋತ್ಸವ ಎಂದೇ ಖ್ಯಾತಿಗಳಿಸಿರುವ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ ಕಾರ್ಯಕ್ಕೆ ಗುಗ್ಗರಿ ಹಬ್ಬದ ಮೂಲಕ ವಿದ್ಯುಕ್ತ ಚಾಲನೆ ದೊರೆತಿದೆ.
ಶಿವರಾತ್ರಿಯ ನಂತರ ಬರುವ ವಾರ್ಷಿಕ ಜಾತ್ರೆಗೆ ಸಾಕ್ಷಿಯಾಗಿ ಕಂಕಣ ಪೂಜೆಯ ಮೊದಲು ಬರುವ ಮೊದಲ ಸೋಮವಾರದಂದು ಗುಗ್ಗರಿ ಹಬ್ಬವನ್ನು ಆಚರಿಸಲಾಗುತ್ತದೆ. ಪಟ್ಟಣದ ಎರಡು ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಕೈಗೊಂಡು, ರೈತರು ಬೆಳೆದ ಹೊಸ ಹುರುಳಿ ಧಾನ್ಯವನ್ನು ಮೊದಲು ದೇವರಿಗೆ ಅರ್ಪಿಸಲಾಯಿತು.
ಕ್ಲಿಕ್ ಮಾಡಿ ಓದಿ: https://chitradurganews.com/victory-yatra-of-karataka-damanaka/
ದೇವಾಲಯದಲ್ಲಿ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರೆತ್ತುಗಳ ಸಗಣಿ ಕುರುಳಿನಿಂದ ಹುರುಳಿ ಧಾನ್ಯವನ್ನು ಬೇಯಿಸಲಾಯಿತು. ಸುಟ್ಟ ಕುರುಳಿನ ಭಸ್ಮವನ್ನು ಹೊರಮಠದಲ್ಲಿ ವಿಭೂತಿಯಾಗಿ ಬಳಸುತ್ತಾರೆ. ಮತ್ತು ಬೇಯುಸಿದ ಹುರುಳಿ ಗುಗ್ಗರಿಯನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದವಾಗಿ ಹಂಚಲಾಯಿತು.
ಕ್ಲಿಕ್ ಮಾಡಿ ಓದಿ: https://chitradurganews.com/rescheduling-of-charges-against-muruga-sharanru/
ಸೋಮವಾರ ದೇವರ ಉತ್ಸವ ಮೂರ್ತಿಯು ಪಲ್ಲಕ್ಕಿಯಲ್ಲಿ ಊಳಿಗೆ ಸೇವೆಗಾಗಿ ಹೊರಮಠಕ್ಕೆ ಬಂದಾಗ, ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಂಗಳಾರತಿ ಮಾಡಿ ನೆರೆದ ಭಕ್ತರಿಗೆ ಗುಗ್ಗರಿಯನ್ನು ವಿತರಿಸಲಾಯಿತು. ದೇವಾಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಗ್ಗರಿ ಸ್ವೀಕರಿಸಿದರು.
ಮಾರ್ಚ್ 19 ರಂದು ದೇವಸ್ಥಾನದಲ್ಲಿ ಮಹಾ ಗಣಪತಿ ಪೂಜೆ, ಪಂಚ ಕಳಸ ಸ್ಥಾಪನೆ, ಕಂಕಣಧಾರಣೆ, 20 ರಂದು ಸರ್ವವಾಹನೋತ್ಸವ, 21 ಕ್ಕೆ ಮಯೂರ ವಾಹನೋತ್ಸವ, 22 ರಂದು ರಥಕ್ಕೆ ಕಳಸ ಸ್ಥಾಪನೆ, ಗಜವಾಹನೋತ್ಸವ, 23 ರಂದು ಸಿಂಹ ವಾಹನೋತ್ಸವ, 24 ರಂದು ಅಶ್ವ ವಾಹನೋತ್ಸವ, 25 ರಂದು ರಥಕ್ಕೆ ತೈಲಾಭಿಷೇಕ, 26 ರಂದು ಮಧ್ಯಾಹ್ನ 3 ಗಂಟೆಗೆ ದೊಡ್ಡ ರಥೋತ್ಸವ, 27 ರಂದು ವಸಂತೋತ್ಸವ, ಏಪ್ರಿಲ್ 1 ರಂದು ಮರಿ ಪರಿಷೆ ನಡೆಯಲಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
