
CHITRADURGA NEWS | 04 AUGUST 2025
ಚಿತ್ರದುರ್ಗ: ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಸೋಮವಾರ ನಗರದ ಬೆಸ್ಕಾಂ ಇಲಾಖೆಯ ಮುಖ್ಯ ಕಾರ್ಯಪಾಲಕ ಇಂಜಿನಿಯರ್‌ಯ ಮುಂದೆ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ಆಗಸ್ಟ್ 4 | ಆವಕ ಕಡಿಮೆ | ಬೆಲೆ ಗಗನಕ್ಕೆ
ಚಿತ್ರದುರ್ಗ ತಾಲ್ಲೂಕು, ಕಸಬಾ ಹೋಬಳಿ ಗೋನೂರು ಈ4 ಫೀಡರ್ ಹಂಪಯ್ಯನಮಾಳಿಗೆ, ಬೊಮ್ಮನಹಳ್ಳಿ, ಬಚ್ಚಬೋರನಹಟ್ಟಿ, ಸಾಸಲಹಟ್ಟಿ, ಕಲ್ಲೇನಹಳ್ಳಿ ಇನ್ನೂ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಫೀಡರ್‌ನಿಂದ ವಿದ್ಯುತ್ ಸರಬರಾಜು ಆಗುತ್ತದೆ.
ಸರ್ಕಾರವು ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕೆಂದು ಆದೇಶಿಸಿರುತ್ತದೆ. ಆದರೆ ಈ ಫೀಡರ್‌ನಲ್ಲಿ 4-5 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್‌ನ್ನು ಕೊಡುತ್ತಿಲ್ಲ. ಕರೆಂಟ್ ಬಂದ 3 ಗಂಟೆ ಅವಧಿಯಲ್ಲಿ ಸುಮಾರು 10-12 ಸಾರಿ ಟ್ರಿಪ್ ಆಗುತ್ತದೆ.
ಇದನ್ನು ಸೆಕ್ಷನ್ ಆಫೀಸರ್ ಗಮನಕ್ಕೆ ತಂದರೂ ಸಹ ಸರಿಪಡಿಸುತ್ತಿಲ್ಲ ರಾತ್ರಿಯ ವೇಳೆಯಲ್ಲಿ ವಿದ್ಯುತ್‌ನ್ನು ಪಂಪ್‌ಸೆಟ್‌ಗಳಿಗೆ ಕೊಡುವುದಿಲ್ಲ. ರೈತರು ತಮ್ಮ ಜಮೀನಿನಲ್ಲಿ ಹೂ, ಸೊಪ್ಪು, ತರಕಾರಿ, ಈರುಳ್ಳಿ ಹಾಕಿರುತ್ತಾರೆ. ಸಮರ್ಪಕವಾದ ವಿದ್ಯುತ್ ಕೊಡದ ಕಾರಣ ಬೆಳೆಗಳೆಲ್ಲ ಒಣಗುತ್ತಿವೆ. ಸರ್ಕಾರದ ಆದೇಶದಂತೆ 7 ಗಂಟೆಗಳ ವಿದ್ಯುತ್‌ನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಅಕ್ಕ ಕೆಫೆಯಲ್ಲಿ ಡಿ.ಸುಧಾಕರ್ ಉಪಹಾರ ಸೇವನೆ | ಸಿರಿಧಾನ್ಯ ಬಾತ್ ಸವಿದು, ಬಿಲ್ ಕೊಟ್ಟ ಸಚಿವರು
ಈ ಫೀಡರ್‌ನಲ್ಲಿ ಲೈನ್ ಮ್ಯಾನ್‌ಗಳು ಕೇವಲ ಇಬ್ಬರಿದ್ದು, ಇವರು ವಿದ್ಯುತ್ ತಂತಿ ಕಟ್ಟಾದಾಗ ಟಿಸಿಯಲ್ಲಿ ಸಮಸ್ಯೆಯಾದಾಗ ನಾವು ಕಂಬ ಹತ್ತುವುದಿಲ್ಲ, ನಮಗೆ ಕಂಬ ಹತ್ತುವುದಕ್ಕೆ ಹೇಳಬೇಡಿ, ವಿದ್ಯುತ್ ಲೈನ್ ವಿನಾದರೂ ತೊಂದರೆಯಾದರೆ ನೀವೇ ಸರಿಪಡಿಸಿಕೊಳ್ಳಿ ಎಂದು ರೈತರಿಗೆ ಲೈನ್ ಮ್ಯಾನ್ ಹೇಳುತ್ತಾರೆ.
ಏನೇ ಲೈನ್‌ನಲ್ಲಿ ತೊಂದರೆಯಾದಾಗ ಲೈನ್ ಮ್ಯಾನ್‌ಗಳಿಗೆ ಫೋನ್ ಮಾಡಿದರೆ ಆಗ ಅವರು ಪೋನ್‌ನ್ನು ಸ್ವಿಚ್ ಆಫ್ ಮಾಡಿರುತ್ತಾರೆ ಇದರಿಂದ ಕೂಡಲೇ ಮೇಲಾಧಿಕಾರಿಗಳು ಲೈನ್ ಮ್ಯಾನ್‌ಗಳನ್ನು ಬದಲಿಸಿ ರೈತರಿಗೆ ಸ್ಪಂದಿಸುವರನ್ನು ನೇಮಿಸಬೇಕು ಹಾಗೂ ಗುಣಮಟ್ಟದ ವಿದ್ಯುತ್‌ನ್ನು ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನಾಗಪ್ಪನಿಗೆ ಹುಣಸೆ ಹುಳಿ ಸಾರು ನೈವೇದ್ಯ | ಕಾಡುಗೊಲ್ಲ ಸಮುದಾಯದಿಂದ ವಿಶಿಷ್ಟ ಆಚರಣೆ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಿಶ್ವನಾಥ್ ಶೆಟ್ಟಿ, ಕೃಷ್ಣಮೂರ್ತಿ, ಮಂಜುನಾಥ್ ರೆಡ್ಡಿ, ಲಕ್ಷö್ಮಣ್, ವೆಂಕಟೇಶ್, ಬಸವರಾಜು, ಚಿದಾನಂದ, ರಾಮಣ್ಣ, ಸಂಪತ್ತ್ ಕುಮಾರ್, ಉಮೇಶ್, ಮೊಡಲಗಿರಿಯಪ್ಪ, ಅಜ್ಜಪ್ಪ, ಪಾಂಡುರಂಗಪ್ಪ, ಶಂಕರಪ್ಪ, ಗೋವಿಂದಪ್ಪ, ಚಂದ್ರಪ್ಪ, ಈರಣ್ಣ ಪ್ರಹ್ಲಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
