
CHITRADURGA NEWS | 09 SEPTEMBER 2025
ಚಿತ್ರದುರ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಚಿತ್ರದುರ್ಗ, ದಾವಣಗೆರೆ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಶರಣ್ ಪಂಪ್ ವೆಲ್, ಡಿಜೆ ನಿರ್ಬಂಧ ವಿರೋಧಿಸಿ VHP ಪ್ರತಿಭಟನೆ
ವುಷು, ಥ್ರೋಬಾಲ್, ಟ್ವೆಕಾಂಡೋ ಮತ್ತು ಟೇಬಲ್ ಟೆನಿಸ್ ಕ್ರೀಡೆಗಳು ಸೆ.10 ಹಾಗೂ 11 ರಂದು ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯಲಿವೆ.
ಬ್ಯಾಸ್ಕೇಟ್ ಬಾಲ್, ಖೋಖೋ, ಕುಸ್ತಿ ಮತ್ತು ವೈಟ್‍ಲಿಫ್ಟಿಂಗ್ ಕ್ರೀಡೆಗಳು ಸೆ.12 ರಂದು ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ಯೋಗ, ಜೂಡೋ, ಷಟಲ್ ಬ್ಯಾಡ್ಮಿಂಟನ್, ಈಜು, ಟೆನ್ನಿಸ್ ಮತ್ತು ಹಾಕಿ ಕ್ರೀಡೆಗಳು ಸೆ.12 ಮತ್ತು 13 ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿವೆ.
ಈಗಾಗಲೇ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ತಂಡ ಹಾಗೂ ಅಭ್ಯರ್ಥಿಗಳು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.
ಈ ಕುರಿತು ಕ್ರೀಡಾಪಟುಗಳು ಆಯಾ ಜಿಲ್ಲೆಗಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಹಿ ಹೊಂದಿರುವ ಗುರುತಿನ ಪತ್ರ ಪಡೆದು, ಆನ್‍ಲೈನ್ ರಿಜಿಸ್ಟರ್ ನಂಬರ್, 2 ಪಾಸ್ ಪೋರ್ಟ್ ಸೈಜ್ ಪೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಲಘು ಹಾಸಿಗೆ ಮತ್ತು ಹೊದಿಕೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು.
ಇದನ್ನೂ ಓದಿ: 3 ದಿನ ವಿದ್ಯುತ್ ವ್ಯತ್ಯಯ | ಯಾವ ದಿನದಂದು ಕರೆಂಟ್ ಇರಲ್ಲ?
ಕ್ರೀಡಾಪಟುಗಳು ನಿಗದಿತ ದಿನಾಂಕಗಳಂದು ಬೆಳಿಗ್ಗೆ 9 ಗಂಟೆಯ ಒಳಗಾಗಿ ಸಂಬಂದಪಟ್ಟ ಕ್ರೀಡೆಗಳಿಗೆ ಕ್ರೀಡಾಂಗಣದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.
ಉದ್ಘಾಟನೆ ಪಥಸಂಚಲನದಲ್ಲಿ ಭಾಗವಹಿಸಿ, ಶಿಸ್ತು ಸಂಯಮದಿಂದ ವರ್ತಿಸಿ, ಅಹಿತಕರ ಘಟನೆಗಳು ನಡೆಯದಂತೆ ಕ್ರೀಡಾಪಟುಗಳು ಜಾಗೃತಿ ವಹಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ.ಎಂ.ನೆಲವಗಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
