
CHITRADURGA NEWS | 26 JANUARY 2025
ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಈ ಹಿಂದೆ ಹಲವು ಸಲ RCC ಸೀಲಿಂಗ್ ಕುಸಿದು ಬಿದ್ದರೂ, ಆಸ್ಪತ್ರೆಯ ಆಡಳಿತ ವ್ಯವಸ್ಥೆ ಎಚ್ಚೆತ್ತಿಲ್ಲ ಎನ್ನುವುದಕ್ಕೆ ಇಂದು ಮತ್ತೊಂದು ಘಟನೆ ಉದಾಹರಣೆಯಾಗಿದೆ.
ಈ ಘಟನೆಯಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೀವದ ಜೊತೆಗಿನ ಚೆಲ್ಲಾಟ ಮುಂದುವರೆದಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಪರಮಾವಧಿ ಎಂದು ರೋಗಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: MLC ಕೆ.ಎಸ್.ನವೀನ್ ಮನೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸಹಪಂಕ್ತಿ ಭೋಜನ
ಜ.26 ಭಾನುವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯ IPP ವಾರ್ಡ್‍ನಲ್ಲಿ ಕಟ್ಟಡದ ಸೀಲಿಂಗ್ ಬೆಡ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.
IPP ವಾರ್ಡ್‍ನ ಸೀಲಿಂಗ್ ಬೀಳುವ ಅರೆಕ್ಷಣ ಮೊದಲು ಆ ಬೆಡ್ ಮೇಲಿದ್ದ ರೋಗಿ ಶೌಚಕ್ಕೆಂದು ಎದ್ದು ಹೋಗುತ್ತಿದ್ದಾಗಲೇ ಕಟ್ಟಡದ ಮೇಲಿನ ಸೀಲಿಂಗ್ ದೊಪ್ಪನೆ ಬಿದ್ದಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ | ಮೇಟಿಕುರ್ಕೆ ಬಳಿ ಕೈಗಾರಿಕಾ ಕಾರಿಡಾರ್ | ಸಚಿವ ಡಿ.ಸುಧಾಕರ್
ಅಲ್ಲಿದ್ದ ಮೂರು ಬೆಡ್‍ಗಳ ರೋಗಿಗಳು ಅಚ್ಚರಿ ಎಂಬಂತೆ ಅಲ್ಲಿರಲಿಲ್ಲ. ಈ ಕಾರಣಕ್ಕೆ, ಯಾರಿಗೂ ತೊಂದರೆ ಆಗಿಲ್ಲ.
ಇನ್ನಾದರೂ ರೋಗಿಗಳ ಜೀವದ ಜೊತೆಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಹಳೆಯ ಕಟ್ಟಡವಾಗಿರುವುದರಿಂದ ಅಗತ್ಯ ರಿಪೇರಿ ಕಾರ್ಯಗಳನ್ನು ಮಾಡಿ ಮುಂದೆ ಆಗುವ ಅನಾಹುತ ತಪ್ಪಿಸಬೇಕಾಗಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿದ್ದರೂ ನಿರ್ಲಕ್ಷಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದನ್ನು ಖಂಡಿಸುತ್ತೇವೆ. ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು, ತಕ್ಷಣ ಎಚ್ಚೆತ್ತು ಅಗತ್ಯ ರಿಪೇರಿ ಮಾಡಿಸಬೇಕು.
| ಕೆ.ಟಿ.ಶಿವಕುಮಾರ್, ಜಿಲ್ಲಾಧ್ಯಕ್ಷರು, ಕರುನಾಡ ವಿಜಯಸೇನೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
