CHITRADURGA NEWS | 22 November 2026
ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ) ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗುತ್ತವೆ. ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯ. ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವ್ಯಾಪಾರ ವ್ಯವಹಾರಗಳು ಸಾಧಾರಣವಾಗಿ ಸಾಗುತ್ತವೆ. ಉದ್ಯೋಗದಲ್ಲಿ ವರ್ಗಾವಣೆಯ ಸೂಚನೆಗಳಿವೆ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಬೂದು
ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, ವೊ) ವ್ಯಾಪಾರದಲ್ಲಿ ಪ್ರಗತಿ ಸಾಧಿಸುತ್ತೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಆಪ್ತರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಆತ್ಮೀಯರಿಂದ ಅಮೂಲ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ. ದೈವದರ್ಶನ ಮಾಡುವ ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಗೌರವ ಹಾಗೂ ಮರ್ಯಾದೆಗಳಿಗೆ ಕೊರತೆಯಿರುವುದಿಲ್ಲ. ಹೊಸ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸುತ್ತೀರಿ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ನೀಲಿ
ಮಿಥುನ: (ಕಾ, ಕೀ, ಕೂ, ಘ, ಛ, ಕೆ, ಕೊ, ಹ) ಆರ್ಥಿಕ ವ್ಯವಹಾರಗಳು ಆಶಾದಾಯಕವಾಗಿ ಸಾಗುತ್ತವೆ. ದೂರದ ಪ್ರದೇಶಗಳಿಂದ ಶುಭವಾರ್ತೆಗಳು ಲಭಿಸುತ್ತವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳು ಅನುಕೂಲಕರವಾಗಿ ಸಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತೀರಿ. ಸ್ನೇಹಿತರೊಂದಿಗೆ ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಹಳದಿ
ಕರ್ಕ: (ದಾ, ದೇ, ದು, ದೇ, ದೋ, ಹೂ, ಹೆ, ಹೋ) ಬಂಧುಗಳೊಂದಿಗೆ ವಿವಾದಗಳು ಉಂಟಾಗಬಹುದು. ಕೈಗೊಂಡ ಕಾರ್ಯಗಳಲ್ಲಿ ಖರ್ಚು ಹಾಗೂ ಪ್ರಯಾಸ ಹೆಚ್ಚಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲದ ಪರಿಸ್ಥಿತಿಗಳು ಎದುರಾಗುತ್ತವೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ಹಳದಿ
ಸಿಂಹ: (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ) ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೊಸ ಸಾಲ ಪಡೆಯಲು ಪ್ರಯತ್ನಿಸುತ್ತೀರಿ. ಮನೆಯಲ್ಲಿ ಹಾಗೂ ಹೊರಗೆ ಕೆಲವು ಸಮಸ್ಯೆಗಳು ಕಾಡುತ್ತವೆ. ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಅನಿರೀಕ್ಷಿತ ಪ್ರಯಾಣದ ಸೂಚನೆಗಳಿವೆ. ಅದೃಷ್ಟದ ದಿಕ್ಕು:ನೈಋತ್ಯ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ನೇರಳೆ
ಕನ್ಯಾ: (ಪಾ, ಪೀ, ಪೂ, ಷ, ಣ , ಪೆ , ಪೊ) ವೃತ್ತಿ ಮತ್ತು ವ್ಯಾಪಾರಗಳು ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಹೊಸ ಕಾರ್ಯಗಳನ್ನು ಕೈಗೊಳ್ಳುತ್ತೀರಿ. ಆತ್ಮೀಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತೀರಿ. ದೈವಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಅನಿರೀಕ್ಷಿತ ಧನಲಾಭದ ಸೂಚನೆಗಳಿವೆ. ಅದೃಷ್ಟದ ದಿಕ್ಕು:ಪೂರ್, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಹಸಿರು
ತುಲಾ: (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ) ದೂರದ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಪ್ರಮುಖ ವ್ಯವಹಾರಗಳು ನಿರಾಸೆ ಉಂಟುಮಾಡುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಶ್ರಮ ಹೆಚ್ಚಾದರೂ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿನ ಒತ್ತಡಗಳು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತವೆ. ಸ್ಥಿರಾಸ್ತಿ ಒಪ್ಪಂದಗಳು ಮುಂದೂಡಲ್ಪಡುತ್ತವೆ. ಅದೃಷ್ಟದ ದಿಕ್ಕು:ಈಶಾನ್ಯ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಕೆಂಪು
ವೃಶ್ಚಿಕ: (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಹೊಸ ವ್ಯಕ್ತಿಗಳ ಪರಿಚಯಗಳು ಲಾಭದಾಯಕವಾಗಿರುತ್ತವೆ. ನೂತನ ವಾಹನ ಖರೀದಿಯ ಯೋಗವಿದೆ. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ಸಂತಾನದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶುಭವಾರ್ತೆಗಳು ಲಭಿಸುತ್ತವೆ. ಆರ್ಥಿಕ ವ್ಯವಹಾರಗಳು ತೃಪ್ತಿಕರವಾಗಿರುತ್ತವೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ನೀಲಿ
ಧನು: (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ) ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲದ ಪರಿಸ್ಥಿತಿಗಳು ಎದುರಾಗುತ್ತವೆ. ಬಂಧುಗಳಿಂದ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ. ಅನಿರೀಕ್ಷಿತ ಪ್ರಯಾಣದ ಸೂಚನೆಗಳಿವೆ. ನಿರುದ್ಯೋಗಿಗಳಿಗೆ ದೊರೆತ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗುವ ಸಾಧ್ಯತೆಗಳಿವೆ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಹಳದಿ
ಮಕರ: (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ) ವೃತ್ತಿ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಬಂಧುಮಿತ್ರರೊಂದಿಗೆ ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸಮಾಜದಲ್ಲಿ ಗೌರವ ಹಾಗೂ ಮರ್ಯಾದೆಗಳಿಗೆ ಕೊರತೆಯಿರುವುದಿಲ್ಲ. ಆಪ್ತರಿಂದ ಅತ್ಯಂತ ಪ್ರಮುಖ ಮಾಹಿತಿ ಲಭಿಸುತ್ತದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಹಸಿರು
ಕುಂಭ: (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ) ಉದ್ಯೋಗಿಗಳು ಹೊಸ ಉತ್ಸಾಹದಿಂದ ಕಾರ್ಯನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಆತ್ಮೀಯರಿಂದ ಶುಭವಾರ್ತೆಗಳು ಲಭಿಸುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಲಾಭದಾಯಕವಾಗಿ ಸಾಗುತ್ತವೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ. ಆರ್ಥಿಕ ಪರಿಸ್ಥಿತಿ ಹಿಂದಿಗಿಂತ ಸುಧಾರಿಸುತ್ತದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:1, ಅದೃಷ್ಟದ ಬಣ್ಣ:ಕೆಂಪು
ಮೀನ: (ದೀ, ದೂ, ಥ, ಝ, ದೆ, ದೊ, ಚಾ, ಚೀ) ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳಿಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆರ್ಥಿಕ ಪರಿಸ್ಥಿತಿ ನಿರಾಸೆ ಉಂಟುಮಾಡುತ್ತದೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಅನಗತ್ಯ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ವಿಶೇಷ ಗಮನ ಹರಿಸುವುದು ಅಗತ್ಯ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ನೇರಳೆ
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

