CHITRADURGA NEWS | 11 August 2025
ಚಿತ್ರದುರ್ಗ: ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ವಿವಿ ಸಾಗರದ ಒಡಲು ಸೇರಿದ ಭದ್ರೆ | ಇಂದಿನ ಜಲಾಶಯದ ಮಟ್ಟ
ರಸ್ತೆಮಧ್ಯೆ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ವಾಹನಗಳಿಗೆ ಸರ್ವೀಸ್ ರಸ್ತೆ ಮೂಲಕ ಪರ್ಯಾಯ ಮಾರ್ಗ ಮಾಡಲಾಗಿದ್ದು, ಪರ್ಯಾಯಾರ್ಗದಲ್ಲಿ ತಗ್ಗು ಗುಂಡಿ ಬಿದ್ದು ವಾಹನಗಳು ಹೋಗದೆ, ಟ್ರಾಫಿಕ್ ಜ್ಯಾಮ್ ಆಗಿದೆ.
ವರಮಹಾಲಕ್ಷ್ಮಿ, ರಕ್ಷ ಬಂಧನ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿರುವ ಜನ, ವಾಹನ ದಟ್ಟನೆ ಹಿನ್ನೆಲೆ ಟ್ರಾಫಿಕ್ ಜ್ಯಾಮ್ ಆಗಿದೆ.
ಬೆಂಗಳೂರಿನಿಂದ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಹಾರಾಷ್ಟ್ರ, ಬಳ್ಳಾರಿ, ಹೊಸಪೇಟೆ ಕಡೆಗೆ ಸಂಚರಿಸುವ ಎಲ್ಲ ವಾಹನಗಳೂ ಸುಮಾರು ಮೂರು ತಾಸು ಟ್ರಾಫಿಕ್ನಲ್ಲಿ ಸಿಲುಕಿವೆ.
ಇದನ್ನೂ ಓದಿ: ಉತ್ತಮ ಸಮಾಜ ನಿರ್ಮಾಣಕ್ಕೆ ಬುದ್ಧನ ಆಶಯ ಅನುಸರಿಸಿ | ಸಚಿವ ಎಂ.ಬಿ.ಪಾಟೀಲ್
ಬೇರೆ ಬೇರೆ ಕೆಲಸಗಳಿಗೆ, ಆಸ್ಪತ್ರೆಗೆ, ಕಚೇರಿ ಕೆಲಸಕ್ಕೆ ಹೊರಟಿದ್ದವರು ರಸ್ತೆಯಲ್ಲಿ ಸಿಲುಕಿ ಹೈರಾಣಾಗಿದ್ದಾರೆ.
ಬೆಂಗಳೂರಿಗೆ ತಲುಪಲು ಪರ್ಯಾಯ ಮಾರ್ಗ ಬಳಸಿ ಎನ್ನುತ್ತಿರುವ ಸ್ಥಳೀಯರು. ಆದಿವಾಲ- ಗೊರ್ಲಡಕು ಗೇಟ್ ಮೂಲಕ ಜವಗೊಂಡನಹಳ್ಳಿ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

