CHITRADURGA NEWS | 25 DECEMBER 2025

ಚಿತ್ರದುರ್ಗ: ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಬಳಿ ಸೀ ಬರ್ಡ್ ಬಸ್ಸಿಗೆ ಬೆಂಕಿ ತಗುಲು ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರಂಭದಲ್ಲಿ ಭಾರೀ ಸಾವು ನೋವು ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿತ್ತು.
ಇದನ್ನೂ ಓದಿ: ನೀರು ಸರಬರಾಜಿನಲ್ಲಿ ವ್ಯತ್ಯಯ | ಶಾಂತಿ ಸಾಗರದಿಂದ ಚಿತ್ರದುರ್ಗಕ್ಕೆ ಸರಬರಾಜಾಗುವ ನೀರು
ಆದರೆ, ಅದೃಷ್ಟವಶಾತ್ ಸಾಕಷ್ಟು ಜನರ ಬಸ್ಸಿನಿಂದ ಜಿಗಿದು ಪಾರಾಗಿದ್ದು, ಹಿರಿಯೂರು, ಶಿರಾ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ಸಿನಲ್ಲಿ ಒಟ್ಟು 32 ಜನ ಪ್ರಯಾಣಿಸುತ್ತಿದ್ದು, ನಾಲ್ವರ ಶವಗಳು ಬಸ್ಸಿನಲ್ಲಿ ಪತ್ತೆಯಾದರೆ, ಕಂಟೇನರ್ ಚಾಲಕನ ಶವ ಕಂಟೇನರ್ ಕ್ಯಾಬಿನ್‌ನಲ್ಲಿ ಪತ್ತೆಯಾಗಿದೆ. ಈವರೆಗೆ 25 ಜನರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಲಭಿಸಿದೆ. ಬಸ್ಸಿನಲ್ಲಿದ್ದ ಇನ್ನೂ ಮೂರು ಜನ ಕಾಣಿಸುತ್ತಿಲ್ಲ. ಹುಡುಕಾಟ ನಡೆಸುತ್ತಿದ್ದೇವೆ.
| ರವಿಕಾಂತೇಗೌಡ, ಐಜಿಪಿ ದಾವಣಗೆರೆ ಪೂರ್ವ ವಲಯ.
ಇನ್ನೂ ಘಟನೆ ಬಗ್ಗೆ ಸಾಕಷ್ಟು ಜನ ಪೋಷಕರು, ಸಂಬಂಧಿಗಳು ಆತಂಕಗೊಂಡು ಹುಡುಕಾಟ ನಡೆಸುತ್ತಿದ್ದು, ಅವರ ನೆರವಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಾಯವಾಣಿ ಆರಂಭಿಸಿದೆ.
ಬಸ್ ದುರಂತದ ಕುರಿತು ಪೊಲೀಸ್ ಸಹಾಯವಾಣಿ ಸಂಖ್ಯೆಗಳು : 9480803100, 9480803170, 8194222782
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

